ಜಗತ್ತಿನ ಪ್ರತಿಷ್ಟಿತ ದೇಶಿಯ ಕ್ರಿಕೆಟ್ ಆಗಿರುವ ಇಂಡಿಯನ್ ಪ್ರೀಮಿಯಲ್ ಲೀಗ್ ಕ್ರಿಕೆಟ್ ನಲ್ಲಿ ಉತ್ಸಾಹಿ ಯುವ ಪ್ರತಿಭೆಗಳು ತೋರುವ ಪ್ರದರ್ಶನ ಅವರನ್ನ ದಿನ ಬೆಳಗಾಗುವಷ್ಟರ ಹೊತ್ತಿಗೆ ಅವರನ್ನ ಒಬ್ಬ ಸ್ಟಾರ್ ಆಟಗಾರನಾಗಿ ಮಾಡಬಹುದು. ಹೌದು ಅದೇ ರೀತಿಯಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 14ನೇ ಆವೃತ್ತಿಯ ಸೆಕೆಂಡ್ ಇನ್ನಿಂಗ್ಸ್ ಕೊಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಸಿಕ್ಕ ಅವಕಾಶವನ್ನು ಉತ್ತಮವಾಗಿ ಪ್ರದರ್ಶನ ತೋರುವ ಮೂಲಕ ಸದುಪಯೋಗ ಪಡಿಸಿಕೊಂಡು ಮಧ್ಯ ಪ್ರದೇಶದ ವೆಂಕಟೇಶ್ ಅಯ್ಯರ್ ಅವರು ಇಂದು ಆ ತಂಡವೇ ಅವರನ್ನು ಎಂಟು ಕೋಟಿ ನೀಡಿ ರಿಟೇನ್ ಮಾಡಿಕೊಳ್ಳುವ ಮಟ್ಟಿಗೆ ಹೆಸರು ಮಾಡಿದ್ದಾರೆ.

ವೆಂಕಟೇಶ್ ಅಯ್ಯರ್ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ದುಬೈನಲ್ಲಿ ನಡೆದ 14ನೇ ಆವೃತ್ತಿಯ ಪಂದ್ಯಕ್ಕೆ ಕೇವಲ 20ಲಕ್ಷ ರೂಗಳಿಗೆ ಖರೀದಿ ಮಾಡಿತ್ತು. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 15ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಆರಂಭಗೊಳ್ಳುವ ಹಂತದಲ್ಲಿದೆ. ಇದರ ನಡುವೆ ಬಿಸಿಸಿಐ ತಂದಿರುವ ಹೊಸ ಈ ರಿಟೇನ್ ನಿಯಮದಡಿಯಲ್ಲಿ ನಾಲ್ಕು ಆಟಗಾರರನ್ನು ಆಯ್ಕೆ ಮಾಡಬಹುದಾಗಿದೆ. ಅದರಂತೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ನಾಲ್ಕು ಆಟಗಾರರನ್ನು ರಿಟೇನ್ ಮಾಡಿಕೊಂಡಿದೆ. ಈ ನಾಲ್ಕು ಜನ ಆಟಗಾರರಲ್ಲಿ ವೆಂಕಟೇಶ್ ಅಯ್ಯರ್ ಅವರು ಕೂಡ ಒಬ್ಬರಾಗಿದ್ದಾರೆ.



ಇಪ್ಪತ್ತು ಲಕ್ಷಕ್ಕೆ ಖರೀದಿ ಮಾಡಿದ್ದ ಇದೇ ವೆಂಕಟೇಶ್ ಅಯ್ಯರ್ ಅವರನ್ನ ಕೊಲ್ಕತ್ತಾ ನೈಟ್ ರೈಡರ್ ತಂಡ ಇದೀಗ 15ನೇ ಸೀಸನ್ಗೆ ಬರೋಬ್ಬರಿ ಎಂಟು ಕೋಟಿ ನೀಡಿ ಖರೀದಿ ಮಾಡಿದೆ. ಈ ಮೂಲಕ ಕ್ರಿಕೆಟಿಗ ವೆಂಕಟೇಶ್ ಅಯ್ಯರ್ ಅವರು ಕೇವಲ ಒಂದೇ ವರ್ಷದಲ್ಲಿ ತಮ್ಮ ಸಂಭಾವನೆಯನ್ನ ಬರೋಬ್ಬರಿ ನಾಲ್ಕು ಸಾವಿರ ಪಟ್ಟು ಏರಿಕೆ ಮಾಡಿಕೊಂಡಿದ್ದಾರೆ. ಇನ್ನು ಇತ್ತೀಚೆಗೆ ವೆಂಕಟೇಶ್ ಅಯ್ಯರ್ ಟಿಟ್ವೆಂಟಿ ಕ್ರಿಕೆಟ್ ಪಂದ್ಯದಲ್ಲಿಯೂ ಕೂಡ ಭಾರತದ ಪರ ಆಡಿ ಸ್ಟಾರ್ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಹೀಗೆ ತಮ್ಮ ಪ್ರತಿಭೆಯ ಮೂಲಕ ಕೇವಲ ಒಂದೇ ವರ್ಷದಲ್ಲಿ ಲಕ್ಷದಲ್ಲಿದ್ದ ತಮ್ಮ ಸಂಭಾವನೆಯನ್ನು ಕೋಟಿಯ ಮಟ್ಟಕ್ಕೆ ಏರಿಕೆ ಮಾಡಿಕೊಂಡು ವೆಂಕಟೇಶ್ ಅಯ್ಯರ್ ನಿಜಕ್ಕೂ ಕೂಡ ಎಲ್ಲಾ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.