ಸಾಮಾನ್ಯವಾಗಿ ಎಲ್ಲರಿಗೂ ಅಂದುಕೊಂಡಿದ್ದು ಆಗುವುದಿಲ್ಲ. ಆದರೆ ಇದು ಅನಿರೀಕ್ಷಿತವಾಗಿ ನಡೆದರೆ ತೊಂದರೆಯಿಲ್ಲ. ನಿಮ್ಮ ಕೆಲಸ ಕಾರ್ಯಗಳಲ್ಲಿ ಮತ್ತು ಭೂಮಿ ವ್ಯಾಜ್ಯ, ಕೋರ್ಟು ಕಛೇರಿ ಎಲ್ಲದರಲ್ಲಿಯೂ ಸಹ ವಿಳಂಬ, ಅಪಜಯ, ಹಿನ್ನಡೆ ಹೀಗೆ ಬರೀ ಅಶುಭ ಪರಿಣಾಮಗಳು ಬೀರುತ್ತಿದ್ದರೆ ನೀವು ಈ ಒಂದು ಪ್ರಯೋಗವನ್ನು ಮಾಡಲೇ ಬೇಕಾಗಿರುತ್ತದೆ. ಯಾವುದು ಈ ವಸ್ತು ಎಂದು ತಿಳಿಯುವುದಾದರೆ ನಿಮ್ಮ ಮನೆಯಲ್ಲಿರುವ ಅಥವಾ ಇದು ಗಂಧಿಗೆ ಅಂಗಡಿಗಳಲ್ಲಿ ಸಿಗುವ ಬಿಳಿ ಸಾಸುವೆ ಇದನ್ನು ಹಳದಿ ಸಾಸುವೆ ಅಂತಲೂ ಕರೆಯುತ್ತಾರೆ. ಶಾಸ್ತ್ರಗಳ ಪ್ರಕಾರ ಈ ಬಿಳಿ ಸಾಸುವೆಯನ್ನು ಶ್ವೇತವರ್ಣ ಲಕ್ಷ್ಮಿ ಎಂದು ಕರೆಯುತ್ತಾರೆ. ಸಂಕಷ್ಠಗಳ ಪರಿಹಾರಕ್ಕಾಗಿ ಇದನ್ನು ಬಳಸುವ ರೀತಿ ವಿಧಾನ ಹೀಗಿದೆ.

ಒಂದು ಶುಭ್ರವಾದ ಬಿಳಿಯ ಬಟ್ಟೆಯಲ್ಲಿ ಒಂದು ಹಿಡಿಯಷ್ಟು ಉಪ್ಪು ಮತ್ತು ಒಂದು ಹಿಡಿಯಷ್ಟು ಬಿಳಿ ಸಾಸುವೆ ಯನ್ನು ಹಾಕಿ ಕಟ್ಟಬೇಕು. ಕಟ್ಟಿದ ಈ ಗಂಟನ್ನು ನಿಮ್ಮ ಮುಖದ ಮೇಲಿಂದ ಕೆಳಕ್ಕೆ ಮೂರು ಭಾರಿ ದೃಷ್ಠಿ ತೆಗೆಯಬೇಕು. ನೀವು ಯಾವ ಕೆಲಸಕ್ಕೆ ಹೋದರೂ ಸಹ ಆ ಸಮಯದಲ್ಲಿ ಈ ಬಿಳಿ ಸಾಸುವೆ ಗಂಟನ್ನು ನಿಮ್ಮ ಜೇಬಿನಲ್ಲಿ ಇಟ್ಟಿರುವುದು ಕಡ್ಡಾಯವಾಗಿ ನೋಡಿಕೊಳ್ಳಬೇಕು. ಇದು ಸದಾ ನಿಮ್ಮ ಜೊತೆ ಇದ್ದರೆ ನಿಮಗೆ ಜಯ ಕಟ್ಟಿಟ್ಟ ಬುತ್ತಿ ಯಾಗಿರುತ್ತದೆ. ಜೊತೆಗೆ ನಿಮ್ಮ ಜ್ಞಾನ, ಮನಸ್ಸು, ದೇಹಕ್ಕೆ ಎಷ್ಟೇ ದಾರಿದ್ರ್ಯತನ ಅಂಟಿದ್ದರೂ ದಾರಿದ್ರ್ಯ ದೂರವಾಗಿ ಸದಾ ಚಟುವಟಿಕೆಯಿಂದ ಕೆಲಸ ಮಾಡುತ್ತೀರಿ.
ಕೆಲವು ಪಂಡಿತರು ಯಾವುದೇ ಮಾಟ ಮಂತ್ರ, ಪೀಡೆ ಭೂತ, ಶತ್ರುನಾಶ, ಉಚ್ಚಾಟನೆ, ಪ್ರತ್ಯಂಗಿರಾ ಹೋಮ ಹವನಗಳಲ್ಲೂ ಸಹ ಈ ಬಿಳಿ ಸಾಸುವೆಯ ಯಂತ್ರವನ್ನು ಬಳಸುತ್ತಾರೆ. ಬಿಳಿ ಸಾಸುವೆ ತುಂಬಾ ಬಲಿಷ್ಠ ಅಂಶಗಳನ್ನು ಹೊಂದಿರುವ ವಸ್ತುವಾಗಿದೆ.

ಇದನ್ನು ನೀವು ತಪ್ಪದೆ ಮನೆಯಲ್ಲಿ ಇಟ್ಟರೆ ಮನೆಯ ವಾತಾವರಣ ಉತ್ತಮವಾಗಿರುತ್ತದೆ. ನಿಮಗೆ ನೀವು ಹೋದ ಜಾಗದಲ್ಲಿ ಅವಮಾನ, ಕಿರಿಕಿರಿ ಸಮಸ್ಯೆ ಉಂಟಾಗುತ್ತಿದ್ದರೆ ನಿಮ್ಮ ಹೆಸರಿನ ಮೇಲೆ ವಿಶೇಷವಾದ ತ್ರಿಪುರಿ ಯಂತ್ರ,ತುಳಸಿಯಂತ್ರ, ಕಾಲಭೈರವನ ಯಂತ್ರ ಈ ಮೂರು ಯಂತ್ರಗಳನ್ನು ಧರಿಸಿದರೆ ಮೂರರಲ್ಲಿ ಯಾವುದಾದರೊಂದು ನಿಮ್ಮ ಅಷ್ಟ ದರಿದ್ರವನ್ನು ಹೋಗಲಾಡಿಸುತ್ತವೆ. ಮತ್ತು ನಿಮ್ಮ ಇಷ್ಟಾರ್ಥಗಳನ್ನು ಈಡೇರುಸುತ್ತದೆ ಎಂದು ತಿಳಿಸುತ್ತಾರೆ.
ಪ್ರತಿ ವ್ಯವಹಾರಗಳಲ್ಲಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ನಿಮ್ಮ ಹೆಸರಿನ ಮೇಲೆ ಜಾತಕ, ಮತ್ತು ಕುಲದೇವರ ಮೇಲೆ ವಿಶಿಷ್ಟ ಯಂತ್ರಧಾರಣಿ ಮಾಡಿದರೆ ನಿಮಗೆ ಮನೋನೆಮ್ಮದಿ ಮನಃಶಾಂತಿ ದೊರಕುತ್ತದೆ. ನಿಮ್ಮ ಎಲ್ಲಾ ವಿಘ್ನಗಳು ನಿವಾರಣೆಯಾಗಿ ನಿಮ್ಮ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ ಎಂದು ಹಿರಿಯ ಪಂಡಿತರು ತಿಳಿಸುತ್ತಾರೆ.