ಹಾಲಿವುಡ್ ಚಿತ್ರದಲ್ಲಿ ನಮ್ಮ ಭಾರತದ ಪ್ರತಿಷ್ಠಿತ ಕಾರೊಂದನ್ನು ಬಳಸಿ ಅದರ ಸುತ್ತ ಕಥೆ ನಿರ್ಮಾಣ

ಸಿನಿಮಾ ಅಂದಾಕ್ಷಣ ಮೊದಲು ಯಾರೇ ಆಗಲಿ ಹಾಲಿವುಡ್ ಸಿನಿಮಾಗಳ ರೀತಿ ಇರಬೇಕು ಎಂದು ಚಿತ್ರಗಳ ಬಗ್ಗೆ ಅಭಿರುಚಿ ಇರುವ ವ್ಯಕ್ತಿಗಳು ಹೇಳುವ ಮಾತು. ಅದ್ಯಾಕೆ ಕೇವಲ ಹಾಲಿವುಡ್ ಸಿನಿಮಾಗಳ ಬಗ್ಗೆನೇ ಈ ರೀತಿ ಅಪಾರ ನಿರೀಕ್ಷೆ ಮತ್ತು ಹಾಲಿವುಡ್ ಸಿನಿ ರಂಗದ ಬಗ್ಗೆ ಈ ರೀತಿಯ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ ಎಂಬುದು ಹಲವರ ಅಭಿಪ್ರಾಯವಾಗಿರುತ್ತದೆ. ಇದಕ್ಕೆ ಪ್ರಮುಖ ಕಾರಣ ಅಂದರೆ ಹಾಲಿವುಡ್ ಸಿನಿಮಾ ಮೇಕರ್ಸ್. ಹಾಲಿವುಡ್ ಸಿನಿಮಾ ಮೇಕಿಂಗ್ ಅಂದರೆ ಯಾರು ಮಾಡದ ಸಾಹಸವನ್ನು ಮಾಡುತ್ತಾರೆ. ವಿಶ್ವದ ಚಿತ್ರ ರಂಗದಲ್ಲಿ ಹೊಸ ವಿಭಿನ್ನ ಪ್ರಯೋಗಗಳಿಗೆ ಹೆಸರು ವಾಸಿಯಾಗಿರುವ ಹಾಲಿವುಡ್ ಚಿತ್ರರಂಗ ಇದೀಗ ಅಚ್ಚರಿಯ ಹೊಸ ಸಾಹಸಕ್ಕೆ ಕೈ ಹಾಕಿದೆ. ಈ ಸಾಹಸಕ್ಕೆ ಭಾರತದ ವಾಹನವನ್ನು ಕಥಾ ವಸ್ತುವನ್ನಾಗಿ ಮಾಡಿಕೊಂಡಿರುವುದು ವಿಶೇಷವಾಗಿದೆ.

ಹಾಲಿವುಡ್ ಸಿನಿಮಾಗಳಲ್ಲಿ ಅನೇಕ ಬಾರಿ ಭಾರತದ ವಾಹನಗಳನ್ನು ಉಪಯೋಗಿಸಿಕೊಂಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಭಾರತದ ವಾಹನದ ಮೇಲೆಯೇ ಕಂಟೆಂಟ್ ಮಾಡಿಕೊಂಡಿದ್ದು ‘ದಿ ಲಾಸ್ಟ್ ಸಿಟಿ’ ಎಂಬ ಸಿನಿಮಾದಲ್ಲಿ. ಹೌದು ದಿ ಲಾಸ್ಟ್ ಸಿಟಿ ಎಂಬ ಸಿನಿಮಾದಲ್ಲಿ ಬಜಾಜ್ ಕ್ಯೂಟ್ ಕ್ವಾಡ್ರಿ ಸೈಕಲ್ ಪುಟಾಣಿ ವಾಹನ ಮಿಂಚಲಿದೆ. ದಿ ಲಾಸ್ಟ್ ಸಿಟಿ ಚಿತ್ರದ ನಿರ್ದೇಶಕರಾದ ಆರೋನ್ ನೀ ಮತ್ತು ಅವರ ಆಡಮ್ ನೀ ಈ ಸಿನಿಮಾದ ಕಥೆಗೆ ಹೊಂದುವಂತಹ ಕಿರಿದಾದ ಕಾರೊಂದನ್ನ ಹುಡುಕಾಡುತ್ತಿದ್ದರಂತೆ. ಇದೇ ಸಂಧರ್ಭದಲ್ಲಿ ಇವರ ಕಥೆಗೆ ಹೊಂದುವಂತಹ ಕಾರ್ ಆಗಿ ಕಾಣಿಸಿಕೊಂಡಿದ್ದು ಅಂದರೆ ಬಜಾಜ್ ಕಂಪನಿಯ ಕ್ಯೂಟ್ ಕ್ವಾಡ್ರಿ ಸೈಕಲ್ ವಾಹನ. ಈ ಚಿತ್ರದಲ್ಲಿ ಈ ವಾಹನವನ್ನು ಬಳಸಿಕೊಂಡಿದ್ದಾರೆ.

ಆದರೆ ಬಜಾಜ್ ಸಂಸ್ಥೆಯ ಹೆಸರನ್ನ ಬಳಸಿದರೆ ಇಂತಿಷ್ಟು ಹಣವನ್ನು ಪಾವತಿ ಮಾಡಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಮಾಡಿದ್ದಾರೆ. ದಿ ಲಾಸ್ಟ್ ಸಿಟಿ ಚಿತ್ರದ ಕಥೆಯಲ್ಲಿ ಈ ಬಜಾಜ್ ಕ್ಯೂಟ್ ಕ್ವಾಡ್ರಿ ಸೈಕಲ್ ವಾಹನದಲ್ಲಿ ಕಥಾ ನಾಯಕಿ ಸಾಂದ್ರಾ ಬುಲ್ಲಾಕ್ ಅವರು ಪ್ರಯಾಣಿಸುವಾಗ ಕಿರಿದಾದ ದಾರಿಯಲ್ಲಿ ಈ ಬಜಾಜ್ ಕ್ಯೂಟ್ ಕ್ವಾಡ್ರಿ ಸೈಕಲ್ ವಾಹನ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬೀಳುವಂತಳ ಸನ್ನಿವೇಶದಲ್ಲಿ ಈ ಬಜಾಜ್ ಕ್ಯೂಟ್ ವಾಹನ ಗಮನ ಸೆಳೆಯುತ್ತದೆ. ಇದು ದಿ ಲಾಸ್ಟ್ ಸಿಟಿ ಚಿತ್ರದ ಕಥೆಯಲ್ಲಿ ಭಾರತ ಮೂಲಕ ಬಜಾಜ್ ಕಂಪನಿಯ ಈ ವಾಹನ ಕಥಾ ವಸ್ತುವಾಗಿರುವುದು ನಿಜಕ್ಕೂ ಕೂಡ ಹೆಮ್ಮೆಯೇ ಸರಿ ಎನ್ನಬಹುದು. ಇನ್ನು ಈ ಬಜಾಜ್ ಕ್ವಾಡ್ರಿ ಸೈಕಲ್ ವಾಹನದ ಬೆಲೆಯು 2.63 ಲಕ್ಷ ರೂಗಳದ್ದಾಗಿದೆ.

%d bloggers like this: