ಹಾಲಿವುಡ್ ನಟನಿಗೆ ಈ ದಕ್ಷಿಣ ಭಾರತದ ನಟನ ಜೊತೆ ಚಿತ್ರ ಮಾಡುವ ಆಸೆಯಂತೆ

ತಮಿಳಿನ ಬಹುಮುಖ ಪ್ರತಿಭೆ ಸ್ಟಾರ್ ನಟ ಧನುಷ್ ಅವರ ವ್ಯಕ್ತಿತ್ವಕ್ಕೆ, ಅವರ ನಟನೆಗೆ ಪಿಧಾ ಆಗಿ ಹಾಡಿ ಹೊಗಳಿದ್ದಾರೆ ಹಾಲಿವುಡ್ ಸೂಪರ್ ಸ್ಟಾರ್ ನಟ ರೊನಾಲ್ಡ್ ಗೋಸ್ಲಿಂಗ್. ಹೌದು ನಮ್ಮ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸುಪ್ರಸಿದ್ದ ನಟ, ನಿರ್ದೇಶಕ, ಬರಹಗಾರ, ನಿರ್ಮಾಪಕ, ಗಾಯನದ ಜೊತೆಗೆ ತನ್ನ ಮನೋಜ್ಞ ಅಭಿನಯದ ಮೂಲಕ ಅಪಾರ ಜನಪ್ರಿಯತೆ ಮತ್ತು ಅಸಂಖ್ಯಾತ ಅಭಿಮಾನಿ ಬಳಗವೊಂದಿರುವ ನಟ ಧನುಷ್. ಧನುಷ್ ತಮಿಳು, ತೆಲುಗು, ಹಿಂದಿ ಸೇರಿದಂತೆ ಈಗಾಗಲೇ ದಿ ಎಕ್ಸ್ ಟ್ರಾಡಿನರಿ ಜರ್ನಿ ಆಫ್ ಫಕೀರ್ ಎಂಬ ಇಂಗ್ಲೀಷ್ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಮತ್ತೆ ಧನುಷ್ ಅವರು ಹಾಲಿವುಡ್ ನಲ್ಲಿ ದಿ ಗ್ರೇ ಮ್ಯಾನ್ ಚಿತ್ರದ ಮುಖಾಂತರ ಮಿಂಚಲು ಸಜ್ಜಾಗಿದ್ದಾರೆ. ಈ ಸಿನಿಮಾಗೆ ಬರೋಬ್ಬರಿ ಇನ್ನೂರು ಮಿಲಿಯನ್ ಡಾಲರ್ಸ್ ಬಂಡವಾಳ ಹೂಡಿಕೆ ಮಾಡಲಾಗಿದೆಯಂತೆ.

ಈ ದಿ ಗ್ರೇ ಮ್ಯಾನ್ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು ಧನುಷ್ ಕ್ಲಾಸ್ ಅಂಡ್ ಮಾಸ್ ಎರಡೂ ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ದಿ ಗ್ರೇ ಮ್ಯಾನ್ ಚಿತ್ರವನ್ನ ಆಂಥೋನಿ ಮತ್ತು ಜೋ ರಸ್ಸೋ ನಿರ್ದೇಶನ ಮಾಡಿದ್ದು, ಈ ಚಿತ್ರಕ್ಕೆ ನೆಟ್ ಫ್ಲಿಕ್ಸ್ ಬಂಡವಾಳ ಹೂಡಿದೆ. ಮೂಲಗಳ ಪ್ರಕಾರ ಈ ಸಿನಿ‌ಮಾಗೆ ಸರಿ ಸುಮಾರು ಇನ್ನೂರು ಮಿಲಿಯನ್ ಅಂದರೆ ಬರೋಬ್ಬರಿ 1600 ಕೋಟಿ ಹೂಡಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಚಿತ್ರದ ಪ್ರಮುಖ ಸನ್ನಿವೇಶ ದೃಶ್ಯವೊಂದರ ಚಿತ್ರೀಕರಣಕ್ಕಾಗಿಯೇ ಬರೋಬ್ಬರಿ 319 ಕೋಟಿ ಖರ್ಚು ಮಾಡಲಾಗಿದೆಯಂತೆ. ಈ ದಿ ಗ್ರೇ ಮ್ಯಾನ್ ಸಿನಿಮಾ ನಟ ಧನುಷ್ ಸಿನಿ ವೃತ್ತಿ ಜೀವನದ ಬಹುದೊಡ್ಡ ಬಜೆಜ್ ಸಿನಿಮಾ ಎಂದು ಹೇಳಲಾಗುತ್ತಿದೆ. ಧನುಷ್ ಅವರೊಟ್ಟಿಗೆ ಈ ಸಿನಿಮಾದಲ್ಲಿ ಕ್ರಿಸ್ ಇವಾನ್ಸ್, ರೋನಾಲ್ಡ್ ಗೋಸ್ಲಿಂಗ್ ಸೇರಿದಂತೆ ದಿಗ್ಗಜ ಕಲಾವಿದರು ದಿ ಗ್ರೇ ಮ್ಯಾನ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಈ ಸಿನಿಮಾ ಇದೇ ಜುಲೈ 22ರಂದು ವರ್ಲ್ಡ್ ವೈಡ್ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಚಿತ್ರದ ಪ್ರಮೋಶನ್ ಭರ್ಜರಿಯಾಗಿ ಸಾಗುತ್ತಿದ್ದು, ಹಾಲಿವುಡ್ ನಟ ರೋನಾಲ್ಡ್ ಗೋಸ್ಲಿಂಗ್ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಇತ್ತೀಚೆಗೆ ಭಾರತೀಯ ಮಾಧ್ಯಮಗಳ ಪ್ರಶ್ನೆಗೆ ಅವರು ನಟ ಧನುಷ್ ಅವರ ವ್ಯಕ್ತಿತ್ವ‌ ಮತ್ತು ಅವರ ಕೆಲಸದ ಮೇಲಿನ ಬದ್ದತೆ, ಕಾರ್ಯ ಚತುರತೆಯನ್ನ ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲದೆ ರೊನಾಲ್ಡ್ ಗೋಸ್ಲಿಂಗ್ ಅವರಿಗೆ ನಟ ಧನುಷ್ ಅವರ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆಯಂತೆ. ಧನುಷ್ ಅವರು ಹಾಸ್ಯ ಪ್ರವೃತ್ತಿ ಗುಣವೊಂದಿದ್ದು, ಇಡೀ ತಂಡದೊಂದಿಗೆ ಉತ್ತಮ ಸ್ನೇಹ ಸಂಬಂಧ ಬೆಳೆಸಿದ್ದಾರಂತೆ‌. ಅದಲ್ಲದೆ ರೊನಾಲ್ಡ್ ಗೋಸ್ಲಿಂಗ್ ಅವರಿಗೆ ಮತ್ತೇ ನಟ ಧನುಷ್ ಅವರೊಟ್ಟಿಗೆ ಸಿನಿಮಾ ಮಾಡುವುದಕ್ಕೆ ಮಹಾದಾಸೆ ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.

%d bloggers like this: