ಹೊರದೇಶಗಳಲ್ಲಿ ಒಂದು ದಿನ ಮುಂಚೆಯೇ ಬರುತ್ತಿದೆ ಕೆಜಿಎಫ್ ಚಾಪ್ಟರ್2 ಚಿತ್ರ

ಎಲ್ಲೆಲ್ಲೂ ಕೆಜಿಎಫ್2 ಚಿತ್ರದ್ದೆ ಹವಾ. ಇನ್ನೇನು ಈ ಚಿತ್ರ ರಿಲೀಸ್ ಆಗಲು ಕೆಲವೇ ದಿನ ಬಾಕಿ ಉಳಿದಿದೆ. ಕೆಜಿಎಫ್1 ಚಿತ್ರ ನೋಡಿದ ಮೇಲೆ ಕೆಜಿಎಫ್ ಟು ಚಿತ್ರದ ಮೇಲಿನ ನಿರೀಕ್ಷೆ ಅಭಿಮಾನಿಗಳಿಗೆ ಹೆಚ್ಚಾಗಿತ್ತು. ಆದರೆ ಇತ್ತೀಚೆಗೆ ರಿಲೀಸ್ ಆದ ಕೆಜಿಎಫ್ ಚಿತ್ರದ ಟ್ರೈಲರ್ ನೋಡಿದ ಅಭಿಮಾನಿಗಳಿಗೆ ಈ ಚಿತ್ರದ ಮೇಲಿರುವ ನಿರೀಕ್ಷೆ ಇನ್ನೂ ದುಪ್ಪಟ್ಟಾಗಿದೆ ಎನ್ನಬಹುದು. ಏಪ್ರಿಲ್ 14ರಂದು ಕೆಜಿಎಫ್ ಭಾರತದಾತ್ಯಂತ ಘರ್ಜಿಸಲು ರೆಡಿಯಾಗಿದೆ. ಕೇವಲ ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ರಾಕಿ ಬಾಯ್ ಎಂಟ್ರಿಕೊಡುತ್ತಿದ್ದಾರೆ. ಸದ್ಯಕ್ಕೆ ದೊರೆತಿರುವ ಲೇಟೆಸ್ಟ್ ಮಾಹಿತಿ ಎಂದರೆ ಕೆಜಿಎಫ್ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಓಪನ್ ಆಗಿದೆ. ಹೌದು ಚಿತ್ರ ರಿಲೀಸ್ ಆಗಲು ಇನ್ನು 15 ದಿನಗಳು ಬಾಕಿ ಇದ್ದರೂ ಆಗಲೇ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಮಾಡಲು ಜನ ಕಾದು ಕುಳಿತಿದ್ದಾರೆ.

ಇನ್ನೊಂದು ವಿಶೇಷತೆ ಎಂದರೆ ಕೆಜಿಎಫ್ ಟು ಚಿತ್ರ ಒಂದು ದಿನ ಮುಂಚಿತವಾಗಿಯೇ ರಿಲೀಸ್ ಆಗುತ್ತಿದೆ. ಹೌದು ಬಹುನಿರೀಕ್ಷಿತ ಕೆಜಿಎಫ್ ಟು ಚಿತ್ರ ಏಪ್ರಿಲ್ 13ರಂದು ರಿಲೀಸ್ ಆಗುತ್ತಿದೆ. ಆದರೆ ಭಾರತದಲ್ಲಲ್ಲ. ಅರಬ್ ದೇಶದಲ್ಲಿ. ಹೌದು ಯುಎಇ ನ ಹಲವಾರು ಚಿತ್ರಮಂದಿರಗಳಲ್ಲಿ ಕೆಜಿಎಫ್ ಸಿನಿಮಾದ ಮೊದಲ ಶೋಗೆ ಟಿಕೆಟ್ ಬುಕಿಂಗ್ ಓಪನ್ ಆಗಿದ್ದು, ದುಬೈನಲ್ಲಿ ನೆಲೆಸಿರುವ ಕನ್ನಡಿಗರು ಈ ಚಿತ್ರ ನೋಡಲು ಡೇಟ್ ಫಿಕ್ಸ್ ಮಾಡಿಕೊಳ್ಳುತ್ತಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ವರ್ಷನ್ ನಲ್ಲೂ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಅಂದಹಾಗೆ ಟಿಕೆಟ್ ಬುಕ್ಕಿಂಗ್ ಕೂಡ ಆರಂಭವಾಗಿರುವುದು ಅರಬ್ ದೇಶಗಳಲ್ಲಿ ನಮ್ಮ ಭಾರತದಲ್ಲ. ಈಗಾಗಲೇ ಕೆಜಿಎಫ್ ಸಿನಿಮಾ ಸೆನ್ಸಾರ್ ಮುಗಿಸಿದ್ದು ಯು ಸರ್ಟಿಫಿಕೆಟ್ ಪಡೆದುಕೊಂಡಿದೆ.

ಆದರೆ ಈ ಸಿನಿಮಾದ ಲೆಂತ್ ಎಷ್ಟಿರುತ್ತದೆ ಎಂಬುದು ಸೀಕ್ರೆಟ್ ಆಗಿತ್ತು. ಆದರೆ ಇದೀಗ ಆ ಮಾಹಿತಿಯು ಕೂಡ ಬಹಿರಂಗವಾಗಿದೆ. ಕೆಜಿಎಫ್ ಟು ಸಿನಿಮಾ 2ಗಂಟೆ 50 ನಿಮಿಷ ಪ್ರಸಾರವಾಗಲಿದೆ. ವಿಶೇಷವೆಂದರೆ ಕೆಜಿಎಫ್ ಚಾಪ್ಟರ್1 ಕೂಡ2 ಗಂಟೆ 50 ನಿಮಿಷ ಪ್ರದರ್ಶನವಾಗಿತ್ತು. ಕೇವಲ ಅರಬ್ ದೇಶಗಳಲ್ಲಿ ಮಾತ್ರವಲ್ಲದೆ, ಯುಎಸ್ ನಲ್ಲಿ ಕೆಜಿಎಫ್ ಏಪ್ರಿಲ್ 13ರಂದು ಪ್ರೀಮಿಯರ್ ಕಾಣುತ್ತಿದೆ ಎಂದು ಚಿತ್ರತಂಡ ಅಧಿಕೃತವಾಗಿ ಹೇಳಿತ್ತು. ಆದರೆ ಯುಎಸ್ ನಲ್ಲಿ ಇನ್ನೂ ಟಿಕೆಟ್ ಬುಕಿಂಗ್ ಓಪನ್ ಆಗಿಲ್ಲ. ಇನ್ನೂ ಕೇರಳದಲ್ಲಿ ಕೆಜಿಎಫ್ ಅಭಿಮಾನಿಗಳು ಫ್ಯಾನ್ಸ್ ಶೋ ಆರ್ಗನೈಸ್ ಮಾಡುತ್ತಿದ್ದಾರೆ. ಒಂದು ತಿಂಗಳ ಮುಂಚೆಯೇ ಟಿಕೆಟ್ ಲಾಂಚ್ ಮಾಡಿ ಬುಕ್ಕಿಂಗ್ ಗೆ ಅವಕಾಶ ಕೊಟ್ಟಿದ್ದರು. ಹೀಗಾಗಿ ಕೆಜಿಎಫ್ ಕ್ರೇಜ್ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಪಕ್ಕದ ರಾಜ್ಯಗಳಲ್ಲಿ ಹಾಗೂ ಹೊರದೇಶಗಳಲ್ಲೂ ತುಂಬಾ ಜೋರಾಗಿದೆ.

ಟ್ರೈಲರ್ ರಿಲೀಸ್ ಆದ ಮೇಲಂತೂ ಈ ಚಿತ್ರದ ಬಗ್ಗೆ ನಿರೀಕ್ಷೆ ಇನ್ನೂ ದುಪ್ಪಟ್ಟಾಗಿದೆ ಎಂದು ಹೇಳಬಹುದು. ಕೆಜಿಎಫ್ ಚಿತ್ರ ಕನ್ನಡದ ಮಟ್ಟಿಗೆ ಅತಿದೊಡ್ಡ ಬಜೆಟ್ನಲ್ಲಿ ತಯಾರಾಗಿರುವ ಚಿತ್ರ. ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿರುವ ಈ ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಕೆಜಿಎಫ್ ಟ್ರೈಲರ್ ರಿಲೀಸ್ ಆದ ಮೇಲಂತೂ ಕಲೆಕ್ಷನ್ ಪ್ರೆಡಿಕ್ಷನ್ ಇನ್ನೂ ಜೋರಾಗಿದೆ. ಕೆಜಿಎಫ್ ಈಗಾಗಲೇ ಕ್ರಿಯೇಟ್ ಮಾಡಿರುವ ಕ್ರೇಜ್ ನೋಡಿ ಫಸ್ಟ್ ಡೇ ನೂರು ಕೋಟಿ ಗಳಿಸಬಹುದು ಎಂದು ಅಂದಾಜಿಸಲಾಗುತ್ತಿದೆ. ಇನ್ನೂ ಒಟ್ಟಾರೆ ಐದು ನೂರು ಕೋಟಿ ರೂಪಾಯಿ ಈ ಚಿತ್ರ ಗಳಿಸಬಹುದು ಎನ್ನುತ್ತಿದ್ದವರು, ಟ್ರೈಲರ್ ನೋಡಿದಮೇಲೆ 800 ಕೋಟಿ ಗಳಿಸುತ್ತದೆ ಎನ್ನುತ್ತಿದ್ದಾರೆ. ಇಷ್ಟೆಲ್ಲಾ ಪ್ರೆಡಿಕ್ಷನ್ ಗಳ ಮಧ್ಯೆ ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದನ್ನು ಕಾದುನೋಡಬೇಕು.

%d bloggers like this: