ಹೊರದೇಶಗಳಲ್ಲಿ ಸುಮಾರು 1200 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರ

ಸ್ಯಾಂಡಲ್ ವುಡ್ ಬಾದ್ ಶಾ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಇದೇ ಜುಲೈ 28ಕ್ಕೆ ವರ್ಲ್ಡ್ ವೈಡ್ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ. ಈಗಾಗಲೇ ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಯಶ್ ಅಭಿನಯದ ಕೆಜಿಎಫ್ ಅಂಡ್ ರಕ್ಷಿತ್ ಶೆಟ್ಟಿ ಅವರ 777ಚಾರ್ಲಿ ಸಿನಿಮಾ ಸಖತ್ ಸೌಂಡ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿವೆ. ಅದಲ್ಲದೆ ಹೊರ ದೇಶಗಳಲ್ಲಿ ನಮ್ಮ ಕನ್ನಡದ ಸಿನಿಮಾ ನೋಡಿದ ಅಲ್ಲಿನ ಸಿನಿ ಪ್ರೇಕ್ಷಕರು ಹಾಡಿ ಹೊಗಳಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿಯಾಗಿ ಇದೀಗ ರಂಗಿತರಂಗ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸನ್ಶೇನಲ್ ಕ್ರಿಯೇಟ್ ಮಾಡಿದ ನಿರ್ದೇಶಕ ಅನೂಪ್ ಭಂಡಾರಿ ಅವರು ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ವಿಕ್ರಾಂತ್ ರೋಣ ಎಂಬ ಈ ಪ್ಯಾನ್ ಇಂಡಿಯಾ ಸಿನಿಮಾ ಈಗಾಗಲೇ ಸಖತ್ ಕ್ರೇಜ಼್ ಹುಟ್ಟು ಹಾಕಿದೆ.

ಕೆಜಿಎಫ್ ಮತ್ತು 777 ಚಾರ್ಲಿ ಚಿತ್ರಗಳ ನಂತರ ಕನ್ನಡದ ಮತ್ತೊಂದು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಅಂದ್ರೆ ಅದು ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ. ಈಗಾಗಲೇ ಚಿತ್ರದ ಪೋಸ್ಟರ್ ಮತ್ತು ರಾರಾ ರಕ್ಕಮ್ಮ ಸಾಂಗ್ ಎಲ್ಲೆಡೆ ಸಖತ್ ವೈರಲ್ ಆಗ್ತಿದೆ. ಸೋಷಿಯಲ್ ಮೀಡಿಯಾ ಪೂರಾ ಈ ಹಾಡಿನದ್ದೇ ಗುಂಗು. ಎಲ್ಲಾ ಕಡೆ ವಿಕ್ರಾಂತ್ ರೋಣ ಈ ಸಿನಿಮಾದ ಕ್ರೇಜ್ ಹೆಚ್ಚಾಗಿದ್ದು, ರಾರಾ ರಕ್ಕಮ್ಮಾ ಹಾಡಿನ ಸ್ಪೆಪ್ ಗಳು ಈಗ ಕಾಲೇಜ್ ಹುಡುಗರಿಗೆ ಮಾತ್ರ ಅಲ್ಲದೆ ಎಲ್ಲಾ ವರ್ಗದ ಜನರಿಗೆ ಅಚ್ಚು ಮೆಚ್ಚಾಗಿದೆ. ಯುವ ಪೀಳಿಗೆಯಂತೂ ಸುದೀಪ್ ಅವರ ರಾರಾ ರಕ್ಕಮ್ಮಾ ಸಾಂಗ್ ಸ್ಟೆಫ್ ಅನ್ನು ರೀಲ್ಸ್ ಮಾಡುತ್ತಾ ಸೋಶಿಯಲ್ ಮೀಡೀಯಾಗಳಲ್ಲಿ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದ್ದಾರೆ. ಇನ್ನು ಈ ವಿಕ್ರಾಂತ್ ರೋಣ ಸಿನಿಮಾ ಯಾವಾಗ ತೆರೆ ಮೇಲೆ ಬರುತ್ತೆ ಅಂತ ಸಿನಿ ಪ್ರಿಯರು ಕಾತುರದಿಂದ ಕಾಯ್ತಿದ್ದಾರೆ.

ಶಾಲಿನಿ ಆರ್ಟ್ಸ್ ನಿರ್ಮಾಣ ಸಂಸ್ಥೆಯಡಿ ತಯಾರಾಗುತ್ತಿರುವ ಈ ವಿಕ್ರಾಂತ್ ರೋಣ ಚಿತ್ರ ಸರಿ ಸುಮಾರು ಮೂವತ್ತಕ್ಕೂ ಹೆಚ್ಚು ದೇಶಗಳಲ್ಲಿ ರಿಲೀಸ್ ಆಗುತ್ತಿದ್ದು, ಬರೋಬ್ಬರಿ 1200ಕ್ಕೂ ಅಧಿಕ ಬೆಳ್ಳಿ ತೆರೆಗಳಲ್ಲಿ ಬಿಡುಗಡೆ ಆಗಲಿದೆಯಂತೆ. ವಿಕ್ರಾಂತ್ ರೋಣ ಚಿತ್ರದ ಓವರ್ ಸೀಸ್ ಮಾರ್ಕೆಟಿಂಗ್ ಅನ್ನ ಒನ್ ಟ್ವೆಂಟ್ 8ಮೀಡಿಯಾ ಆಪರೇಷನ್ ಹೆಡ್ ಆಗಿರುವ ಯೋಗಿಶ್ ದ್ವಾರಕೀಶ್, ಆಕಾಶ್ ಅಮೇಯ ಜೈನ್ ಅಂಡ್ ಫಣೀಂದ್ರ ಕುಮಾರ್ ಅವರು ನೋಡಿಕೊಳ್ಳಲಿದ್ದಾರೆ. ಯುಕೆ, ಕೆನಡಾ, ಯುರೋಪ್ ಅಂಡ್ ಗಲ್ಫ್ ರಾಷ್ಟ್ರಗಳಂತಹ ಮೂವತ್ತು ಹೆಚ್ಚು ರಾಷ್ಟ್ರಗಳಲ್ಲಿ ವಿಕ್ರಾಂತ್ ರೋಣ ಚಿತ್ರ ರಿಲೀಸ್ ಮಾಡಲು ಈಗಾಗಲೇ ಸಾಕಷ್ಟು ತಯಾರಿ ಆಗಿದೆಯಂತೆ. ಕನ್ನಡ, ಇಂಗ್ಲೀಷ್, ಹಿಂದಿ, ಮಲೆಯಾಳಂ, ತೆಲುಗು, ತಮಿಳು ಇದರ ಜೊತೆಗೆ ರಷ್ಯಾ, ಮ್ಯಾಂಡರಿನ್ ಭಾಷೆಗಳಲ್ಲಿ ಕೂಡ ವಿಕ್ರಾಂತ್ ರೋಣ ಚಿತ್ರ ರಿಲೀಸ್ ಆಗುವ ಸಾಧ್ಯತೆವಿದೆ ಎಂದು ಚಿತ್ರತಂಡದ ಆಪ್ತ ಮೂಲಗಳು ತಿಳಿಸಿವೆ. ಒಟ್ಟಾರೆಯಾಗಿ ವಿಕ್ರಾಂತ್ ರೋಣ ಚಿತ್ರ ಸಾಕಷ್ಟು ವಿಶೇಷತೆಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

%d bloggers like this: