2014ರಲ್ಲಿ ಚಂದ್ರಲೇಖ ಚಿತ್ರದ ಮೂಲಕ ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ನಟಿ ಸಾನ್ವಿ ಶ್ರೀವಾತ್ಸವ ಅವರು ಕಾಲಿಟ್ಟರು. ಮೂಲತಹ ವಾರಣಾಸಿಯವರಾದ ಇವರು ಚಿತ್ರರಂಗಕ್ಕೆ ಬಂದಿದ್ದು ಆಕಸ್ಮಿಕ. ಮುಂದೊಂದು ದಿನ ನಟಿಯಾಗುತ್ತೇನೆ ಅಥವಾ ನಟಿಯಾಗಬೇಕು ಎಂಬ ಆಸೆಯನ್ನು ಸಾನ್ವಿಯವರು ಎಂದು ಇಟ್ಟುಕೊಂಡಿರಲಿಲ್ಲ. ಇವರ ಸಹೋದರಿಗೆ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಇದ್ದುದರಿಂದ ಇವರು ವಾರಣಾಸಿಯಿಂದ ಮುಂಬೈಗೆ ಬಂದರು. ಅಲ್ಲಿ ಇವರನ್ನು ನೋಡಿದ ನಿರ್ದೇಶಕರೊಬ್ಬರು ಸಿನಿಮಾ ಇಂಡಸ್ಟ್ರಿಗೆ ಸಾನ್ವಿಯವರನ್ನು ಕರೆತಂದರು. ಮೊದಲಿಗೆ ಅವರು ನಟಿಸಿದ್ದು ತೆಲುಗು ಸಿನಿಮಾದಲ್ಲಿ. ಹೌದು ಕನ್ನಡ ಚಿತ್ರಗಳಿಗೂ ಮೊದಲು ಇವರು ಒಂದೆರಡು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಚಂದ್ರಲೇಖ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇವರು ನಂತರ ಸುಂದರಾಂಗ ಜಾಣ, ಸಾಹೇಬ, ತಾರಕ್, ಮಾಸ್ಟರ್ ಪೀಸ್, ಗೀತಾ, ಅವನೇ ಶ್ರೀಮನ್ನಾರಾಯಣ ಹೀಗೆ ಹಲವಾರು ಹಿಟ್ ಚಿತ್ರಗಳನ್ನು ನೀಡಿದರು. ಇದೀಗ ನಟಿ ಸಾನ್ವಿ ಶ್ರೀವಾತ್ಸವ ಅವರು ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಹೌದು ಜನಪ್ರಿಯ ಮಲಯಾಳಂ ನಟ ನಿವಿನ್ ಪೌಲಿ ನಾಯಕನಾಗಿ ನಟಿಸುತ್ತಿರುವ ಬಹುಕೋಟಿ ವೆಚ್ಚದ ಬಹುನಿರೀಕ್ಷಿತ ಮಲಯಾಳಂ ಸಿನೆಮಾ ಮಹಾವೀರ್ಯರ್ ಚಿತ್ರಕ್ಕೆ ನಾಯಕಿಯಾಗಿ ಸ್ಯಾಂಡಲ್ವುಡ್ ನಟಿ ಸಾನ್ವಿ ಶ್ರೀವಾತ್ಸವ ಅವರು ನಟಿಸುತ್ತಿದ್ದಾರೆ. ಸದ್ಯಕ್ಕೆ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ಟಾಪ್ ಹೀರೋಯಿನ್ ಗಳ ಲಿಸ್ಟ್ ನಲ್ಲಿ ಶಾನ್ವಿ ಶ್ರೀವಾತ್ಸವ್ ಅವರು ನಿಲ್ಲುತ್ತಾರೆ.



ಖ್ಯಾತ ನಿರ್ದೇಶಕ ದಿನೇಶ್ ಬಾಬು ಆಕ್ಷನ್ ಕಟ್ ಹೇಳುತ್ತಿರುವ ಹಾರರ್ ತ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರಕ್ಕೆ ನಟಿ ಶ್ರೀವಾತ್ಸವ ಅವರು ಆಯ್ಕೆಯಾಗಿದ್ದಾರೆ. ಹೌದು ಈ ಚಿತ್ರಕ್ಕೆ ಕಸ್ತೂರಿ ಮಹಲ್ ಎಂದು ಹೆಸರಿಡಲಾಗಿದೆ. ವಿಶೇಷವೆಂದರೆ ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರ ಇದಾಗಿದ್ದು, ಈ ಚಿತ್ರದ ಟೀಸರ್ ನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ದರು. ಈ ಚಿತ್ರದ ಟೀಸರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದ್ದು, ನಟಿ ಸಾನ್ವಿ ಶ್ರೀವಾಸ್ತವ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಸ್ಕಂದ ಅಶೋಕ್, ರಂಗಾಯನ ರಘು, ಶ್ರುತಿ ಪ್ರಕಾಶ್, ಕಾಶಿಮಾ ರಫಿ, ನೀನಾಸಂ ಅಶ್ವಥ್, ಅಕ್ಷರ ಮುಂತಾದ ತಾರಾಬಳಗವಿದೆ.



ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕ ದಿನೇಶ್ ಬಾಬು ಅವರೇ ಬರೆದಿದ್ದು, ಶ್ರೀ ಭವಾನಿ ಆರ್ಟ್ಸ್ ಲಾಂಛನದಲ್ಲಿ ರವೀಶ್ ಆರ್ ಸಿ ನಿರ್ಮಿಸಿರುವ ಈ ಚಿತ್ರಕ್ಕೆ ನವೀನ್ ಆರ್ಸಿ ಹಾಗೂ ಅಕ್ಷಯ್ ಸಿಎಸ್ ಅವರ ನಿರ್ಮಾಣವು ಸಹ ಇದೆ. ಪಿಕೆಎಚ್ ದಾಸ್ ಛಾಯಾಗ್ರಹಣ ಹಾಗೂ ಹರೀಶ್ ಕೃಷ್ಣ ಅವರ ಸಂಕಲನ ಕಸ್ತೂರಿ ಮಹಲ್ ಚಿತ್ರಕ್ಕಿದೆ. ವಿಶೇಷವೆಂದರೆ ಈಗಾಗಲೇ ಸೆನ್ಸಾರ್ ಮಂಡಳಿ ಈ ಚಿತ್ರವನ್ನು ವೀಕ್ಷಿಸಿದ್ದು, ಮೇ ತಿಂಗಳಲ್ಲಿ ಚಿತ್ರ ತೆರೆಕಾಣಲಿದೆ. ಸದ್ಯಕ್ಕೆ ಈ ಚಿತ್ರದ ಬಗ್ಗೆ ಸುದ್ದಿಯಲ್ಲಿರುವ ಮಾಹಿತಿಯೆಂದರೆ ಕಸ್ತೂರಿ ಮಹಲ್ ಚಿತ್ರ ಡಿಜಿಟಲ್ ಹಕ್ಕು ಪ್ರತಿಷ್ಠಿತ ಸಂಸ್ಥೆಯೊಂದಿಗೆ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಬಿಡುಗಡೆಗೂ ಮುನ್ನ ಡಿಜಿಟಲ್ ಹಕ್ಕು ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿರುವುದಕ್ಕೆ ನಿರ್ಮಾಪಕರು ಸಂತಸಪಟ್ಟಿದ್ದಾರೆ.