ಹೊಸ ಆಲ್ಬಮ್ ಅಲ್ಲಿ ಕಾಣಿಸಿಕೊಂಡ ಕನ್ನಡದ ಕಿರುತೆರೆ ನಟ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಾಗೂ ಸದ್ಯಕ್ಕೆ ಕಿರುತೆರೆಯಲ್ಲಿ ಅತಿ ಹೆಚ್ಚು ಟಿಆರ್ಪಿ ಹೊಂದಿರುವ ಧಾರಾವಾಹಿ ಪುಟ್ಟಕ್ಕನ ಮಕ್ಕಳು. ಹಲವಾರು ಕಾರಣಗಳಿಂದ ಈ ಧಾರಾವಾಹಿ ಎಲ್ಲರ ಮನಗೆದ್ದಿದೆ. ಈ ಧಾರಾವಾಹಿಯ ಕಥೆಯಾಗಿರಬಹುದು ಅಥವಾ ಜನರ ಮುಂದೆ ಕಥೆಯನ್ನು ವ್ಯಕ್ತಪಡಿಸುವ ರೀತಿಯಾಗಿರಬಹುದು, ಈ ಧಾರಾವಾಹಿಯ ಸನ್ನಿವೇಶಗಳು, ಹಾಡುಗಳು ಎಲ್ಲವೂ ಉಳಿದ ಧಾರಾವಾಹಿಗಳಿಗಿಂತ ಭಿನ್ನಾವಾಗಿವೆ ಎಂದರೆ ತಪ್ಪಾಗಲಾರದು. ಎಲ್ಲದಕ್ಕಿಂತ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ ಹಿರಿಯ ನಟಿ ಉಮಾಶ್ರೀ ಹಾಗೂ ಉಳಿದ ತಾರಾಗಣದ ನಟನೆ ಎಲ್ಲರ ಮನಗೆದ್ದಿದೆ. ಇದೆಲ್ಲಾ ಕಾರಣಗಳಿಂದ ಸದ್ಯಕ್ಕೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅತ್ಯಂತ ಜನಪ್ರಿಯವಾಗಿದೆ.

ಈ ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಧನುಷ್ ಅವರು ಕೂಡ ಇದೇ ಧಾರಾವಾಹಿಯ ಮೂಲಕ ಅನೇಕ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ. ಹೌದು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಕಂಠಿ ಪಾತ್ರಧಾರಿಯಾಗಿ ನಟಿಸಿರುವ ನಟನ ಹೆಸರು ಧನುಷ್ ಗೌಡ. ಅಂದಹಾಗೆ ಈ ಧಾರಾವಾಹಿ ಧನುಷ್ ಗೌಡ ಅವರಿಗೆ ಮೊದಲನೆಯ ಪ್ರಾಜೆಕ್ಟ್ ಅಲ್ಲ. ಈ ಹಿಂದೆ ಹಲವಾರು ಶಾರ್ಟ್ ಫಿಲಂಸ್ ಹಾಗೂ ಆಲ್ಬಮ್ ಸಾಂಗ್ಸ್ ಗಳಲ್ಲಿ ಅವರು ನಟಿಸಿದ್ದರು. ಆದರೆ ಇವರ ಸಿನಿ ಪಯಣದಲ್ಲಿ ದೊಡ್ಡ ಬ್ರೇಕ್ ಕೊಟ್ಟಿದ್ದು ಇದೇ ಧಾರಾವಾಹಿ. ಇದೇ ಧಾರಾವಾಹಿಯಿಂದ ಎಲ್ಲರೂ ಇಂದು ಧನುಷ್ ಅವರನ್ನು ಗುರುತಿಸುತ್ತಿದ್ದಾರೆ. ಸದ್ಯಕ್ಕೆ ಧನುಷ್ ಅವರ ಅಭಿಮಾನಿ ಬಳಗ ಹೆಚ್ಚಾಗಿದೆ. ಇದೇ ಕಾರಣಕ್ಕೆ ಧನುಷ್ ಅವರೊಂದು ಹೊಸ ಆಲ್ಬಮ್ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು ಈ ಹಿಂದೆ ನಟ ಧನುಷ್ ಅವರು ನನ್ನ ನಗು ಎಂಬ ಆಲ್ಬಮ್ ಸಾಂಗ್ ನಲ್ಲಿ ನಟಿಸಿದ್ದರು. ಹೀಗಾಗಿ ಆಲ್ಬಮ್ ಸಾಂಗ್ ಗಳು ಇವರಿಗೆ ಹೊಸದೇನಲ್ಲ. ಆದರೆ ಕಾನ್ಸೆಪ್ಟ್ ಮಾತ್ರ ಹೊಸದು. ಎ2 ಮ್ಯೂಸಿಕ್ ನಿರ್ಮಾಣದಲ್ಲಿ ಮನಸೆಲ್ಲಾ ನೀನೆ ಆಲ್ಬಮ್ ಸಾಂಗ್ ನಲ್ಲಿ ಪ್ರೇಕ್ಷಕರನ್ನು ರಂಜಿಸಲು ಧನುಷ್ ರೆಡಿಯಾಗಿದ್ದಾರೆ. ಹೌದು ವಿಸ್ಮಯ ಜಗ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮನಸೆಲ್ಲಾ ನೀನೆ ಎಂಬ ಸುಂದರವಾದ ಆಲ್ಬಮ್ ಸಾಂಗ್ ನಲ್ಲಿ ಧನುಷ್ ಅವರು ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಆಲ್ಬಮ್ ಸಾಂಗ್ ನ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು ಎಲ್ಲರ ಗಮನ ಸೆಳೆದಿದೆ. ಈಗಾಗಲೇ ಕಿರುತೆರೆಯಲ್ಲಿ ಎಲ್ಲರ ಮನಗೆದ್ದ ಧನುಶ್ ಅವರು ಈಗ ಆಲ್ಬಮ್ ಸಾಂಗ್ ಮೂಲಕ ಎಲ್ಲರನ್ನೂ ರಂಜಿಸಲು ಸಜ್ಜಾಗಿದ್ದಾರೆ.

%d bloggers like this: