ಹೊಸ ಅವತಾರದಲ್ಲಿ ಹೊಸ ಚಿತ್ರದೊಂದಿಗೆ ಬರ್ತಿದ್ದಾರೆ ಹಿಟ್ ಚಿತ್ರಗಳ ನಟ

ಪ್ರಯೋಗಾತ್ಮಕ ಸಿನಿಮಾಗಳ ನಟ ಎಂದೇ ಹೆಸರಾಗಿರುವ ರಿಷಿ ಇದೀಗ ರಾಮನ ಅವತಾರ ತಾಳುವ ಮೂಲಕ ಚಂದನವನದಲ್ಲಿ ಸದ್ದು ಮಾಡುತ್ತಿದ್ದಾರೆ. ಹೌದು ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿಬಂದ ಅಪರೇಶನ್ ಅಲಮೇಲಮ್ಮ ಸಿನಿಮಾದ ಮೂಲಕ ನಾಯಕ ನಟರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟ ರಿಷಿ ತನ್ನ ಸಹಜ ನಟನೆಯ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ನೆಲೆಸಿದ್ದಾರೆ. ನಟ ರಿಷಿ ಅವರು ರಂಗಭೂಮಿ ಹಿನ್ನೆಲೆವುಳ್ಳವರಾಗಿದ್ದು, ಅನೇಕ ನಾಟಕಗಳಲ್ಲಿ ನಟಿಸಿದ್ದಾರೆ. ಅಪರೇಶನ್ ಅಲಮೇಲಮ್ಮ, ಕವಲುದಾರಿ, ಸಾರ್ವಜನಿಕರಿಗೆ ಸುವರ್ಣಾವಕಾಶ ಹೀಗೆ ವಿಭಿನ್ನ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗಟ್ಟಿಯಾದ ನೆಲೆಕಂಡು ಕೊಳ್ಳಲು ಹೊರಟಿರುವ ನಟ ಇತ್ತೀಚೆಗೆ ನೋಡಿ ಸ್ವಾಮಿ ಇವನು ಇರೋದೆ ಹೀಗೆ ಎಂಬ ಚಿತ್ರದ ಪೋಸ್ಟರ್ ಮೂಲಕ ಸೌಂಡ್ ಮಾಡಿದ್ದರು.

ಇದೀಗ ರಾಮನ ಅವತಾರ ಎಂಬ ಚಿತ್ರದ ಮೂಲಕ ಸುದ್ದಿ ಆಗಿದ್ದಾರೆ ನಟ ರಿಷಿ. ಹೌದು ವಿಕಾಸ್ ಪಂಪಾತಿ ಮತ್ತು ವಿಜಯ್ ಪಂಪಾತಿ ಅವರು ನಿರ್ದೇಶನ ಮಾಡುತ್ತಿರುವ ರಾಮನ ಅವತಾರ ಎಂಬ ಚಿತ್ರದಲ್ಲಿ ನಟ ರಿಷಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಅದೂ ಕೂಡ ಇದೇ ಮೊದಲ ಬಾರಿಗೆ ಕನ್ನಡದ ಮಿಲ್ಕ್ ಬ್ಯೂಟಿ ಖ್ಯಾತಿಯ ನಟಿ ಪ್ರಣೀತಾ ಅವರೊಟ್ಟಿಗೆ ತೆರೆ ಹಂಚಿಕೊಂಡಿದ್ದಾರಂತೆ. ರಾಮನ ಅವತಾರ ಸಿನಿಮಾ ಸಂಪೂರ್ಣವಾಗಿ ಹಾಸ್ಯ ಪ್ರಧಾನ ಚಿತ್ರವಾಗಿದ್ದು, ಈ ಚಿತ್ರದಲ್ಲಿನ ನನ್ನ ಪಾತ್ರವನ್ನ ಪ್ರೇಕ್ಷಕರು ಎಂಜಾಯ್ ಮಾಡಲಿದ್ದಾರೆ ಎಂದು ಅಂದುಕೊಂಡಿದ್ದೆನೆ ಎಂದಿದ್ದಾರೆ ನಟ ರಿಷಿ.

ರಾಮನ ಅವತಾರ ಎಂಬ ಈ ಹಾಸ್ಯ ಪ್ರಧಾನ ಚಿತ್ರದಲ್ಲಿ ನಟ ರಿಷಿ ಅವರಿಗೆ ಇಬ್ಬರು ನಾಯಕಿಯರು‌. ನಟಿ ಪ್ರಣೀತಾ ಒಂದು ಪಾತ್ರ ಮಾಡಿದರೆ, ವಜ್ರಕಾಯ ಸಿನಿಮಾದಲ್ಲಿ ಶಿವಣ್ಣ ಅವರೊಟ್ಟಿಗೆ ನೋ ಪ್ರಾಬ್ಲಂ ಎಂಬ ಹಾಡಿನ ಜೊತೆಗೆ ಹೆಜ್ಜೆ ಹಾಕಿದ ನಟಿ ಶುಬ್ರಾ ಅಯ್ಯಪ್ಪ ಮತ್ತೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರಾಮನ ಅವತಾರ ಸಿನಿಮಾದ ಚಿತ್ರೀಕರಣ ಭಾಗಶಃ ಮುಗಿದಿದ್ದು, ಇನ್ನು ಕೆಲವೇ ತಿಂಗಳಲ್ಲಿ ಈ ಸಿನಿಮಾದ ಟೀಸರ್, ಟ್ರೇಲರ್ ಬಿಡುಗಡೆಯಾಗಲಿದೆಯಂತೆ. ಇನ್ನು ಎಲ್ಲವೂ ಅಂದುಕೊಂಡಂತಾದರೆ ರಾಮನ ಅವತಾರ ಸಿನಿಮಾ ಏಪ್ರಿಲ್ ತಿಂಗಳಲ್ಲಿ ಚಿತ್ರಮಂದಿರಗಳಿಗೆ ಬರಲಿದೆಯಂತೆ. ಈ ಚಿತ್ರದಲ್ಲಿ ನಟ ರಿಷಿ ಜೊತೆಗೆ ಡ್ಯಾನಿಶ್ ಸೇಠ್, ರಾಜ್ ಬಿ.ಶೆಟ್ಟಿ ಕಾಣಿಸಿಕೊಂಡಿದ್ದಾರಂತೆ.

%d bloggers like this: