ಹೊಸ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಬಿಗ್ ಬಾಸ್ ಕನ್ನಡದ ಜನಪ್ರಿಯ ಸ್ಪರ್ಧಿ

ಬಿಗ್ ಬಾಸ್ ಕಾರ್ಯಕ್ರಮದಿಂದ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡ ನಟಿ ದಿವ್ಯ ಸುರೇಶ್ ಅವರು ಈಗ ಚಿತ್ರರಂಗದಲ್ಲಿ ಬಿಸಿಯಾಗಿದ್ದಾರೆ. ಬಿಗ್ ಬಾಸ್ ಹೋಗುವ ಮೊದಲು ಹಲವು ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿಗಳಿಸಿದ್ದ ದಿವ್ಯಾ ಸುರೇಶ್ ಅವರಿಗೆ, ಬಿಗ್ ಬಾಸ್ ಕಾರ್ಯಕ್ರಮದ ನಂತರ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಎಸ್ಎಸ್ ರವಿಗೌಡ ಮತ್ತು ದಿವ್ಯ ಸುರೇಶ ನಾಯಕ ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕೆ, ರೌಡಿ ಬೇಬಿ ಎಂದು ಹೆಸರಿಡಲಾಗಿದೆ. ಫೆಬ್ರುವರಿ 3ರಂದು ರೌಡಿ ಬೇಬಿ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು ಫೆಬ್ರುವರಿ 11ರಂದು ಈ ಚಿತ್ರ ರಿಲೀಸ್ ಆಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ದಿವ್ಯ ಸುರೇಶ್, ಕೋರೋಣ ಹಾವಳಿ ಕಡಿಮೆಯಾಗಿದ್ದು, ನಮ್ಮ ಸಿನಿಮಾ ರಿಲೀಸ್ ಆಗುತ್ತಿರುವುದು ನನಗೆ ಸಂತಸ ತಂದಿದೆ.

ಚಿತ್ರದ ಹೆಸರೇ ಹೇಳುವ ಹಾಗೆ ನನ್ನದು ರೌಡಿ ಬೇಬಿ ಪಾತ್ರ. ಪ್ರತಿ ಕಾಲೇಜಿನಲ್ಲಿ ಒಂದು ರೌಡಿ ಗ್ಯಾಂಗ್ ಇರುತ್ತದೆ. ಅದೇ ರೀತಿ ಕಾಲೇಜಿನ ಒಂದು ಗ್ಯಾಂಗ್ ನಲ್ಲಿ ನಾನು ರೌಡಿ ಹಾಗಿ ಕಾಣಿಸಿಕೊಂಡಿದ್ದೇನೆ ಎಂದು ದಿವ್ಯ ಸುರೇಶ ತಮ್ಮ ಪಾತ್ರದ ಬಗ್ಗೆ ಹೇಳಿದರು. ಇನ್ನು ಎಲ್ಲಿ ಪ್ರೀತಿ ಇರುತ್ತದೋ ಅಲ್ಲಿ ನೋವು ಇದ್ದೇ ಇರುತ್ತದೆ ಎನ್ನುವ ಥೀಮನ್ನು ಇಟ್ಟುಕೊಂಡು ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಎಲ್ಲರೂ ಫಸ್ಟ್ ಲವ್ಗೆ ಮಹತ್ವ ನೀಡುತ್ತಾರೆ. ಆದರೆ ಒಬ್ಬರಿಗೆ ಎಷ್ಟೇ ಬಾರಿ ಪ್ರೀತಿಯಾದರೂ ಪ್ರೀತಿ ಪ್ರೀತಿನೇ. ಅದರಲ್ಲಿ ಏನು ಬದಲಾವಣೆ ಆಗುವುದಿಲ್ಲ ಎಂದು ಚಿತ್ರದಲ್ಲಿ ತೋರಿಸಲಾಗಿದೆ.

ಈ ಚಿತ್ರವನ್ನು ಸುಮುಖ ಎಂಟರ್ಪ್ರೈಸಸ್ ಅರ್ಪಿಸುತ್ತಿದ್ದು, ಫುಡ್ ಸ್ಟುಡಿಯೋ ನಿರ್ಮಾಣ ಮಾಡುತ್ತಿದೆ. ಕೃಷ್ಣ ಚಿತ್ರದ ನಿರ್ದೇಶಕರಾಗಿದ್ದು, ಉಮಾಪತಿ ಶ್ರೀನಿವಾಸ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಾವೆಲ್ಲಾ ಕಲಾ ದೇವತೆಯ ಮಕ್ಕಳು. ನಮ್ಮಲ್ಲಿ ಯಾವುದೇ ಭೇದಭಾವ ಇಲ್ಲ. ಸಿನಿಮಾ ಮಾಡುವುದು ಎಷ್ಟು ಕಷ್ಟವೋ ರಿಲೀಸ್ ಮಾಡುವುದು ಅಷ್ಟೇ ಕಷ್ಟ. ರಿಲೀಸ್ ಮಾಡುವ ಸಮಯದಲ್ಲಿ ಕಲಾವಿದರು ಜೊತೆಯಲ್ಲಿದ್ದು ಪ್ರಚಾರ ಮಾಡಬೇಕು. ಕನ್ನಡದ ಸಿನಿಮಾಗಳು ಅತಿ ಹೆಚ್ಚು ಬೆಳೆಯಬೇಕು ಎಂದು ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹೇಳಿದರು.

%d bloggers like this: