ಕನ್ನಡದ ಅನೇಕ ಕಿರುತೆರೆ ನಟ ನಟಿಯರು ಸಿನಿಮಾಗಳಲ್ಲಿ ಅವಕಾಶ ಪಡೆದುಕೊಳ್ಳುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಆದರೆ ತನ್ನ ಅದ್ಭುತ ನಿರೂಪಣೆಯ ಮೂಲಕವೇ ಸಿನಿಮಾದಲ್ಲಿ ಅವಕಾಶ ಪಡೆದು ಕೊಳ್ಳುವುದು ಕೊಂಚ ವಿಶೇಷವೇ ಸರಿ ಎನ್ನಬಹುದು. ಹೌದು ಕನ್ನಡ ಕಿರುತೆರೆಯ ರಿಯಾಲಿಟಿ ಶೋ, ಸಿನಿಮಾ ಪ್ರಮೋಶನ್ ಇವೆಂಟ್, ಇನ್ನಿತರ ಖಾಸಗಿ ಕಾರ್ಯಕ್ರಮ ಹೀಗೆ ನಿರೂಪಣಾ ಕ್ಷೇತ್ರದಲ್ಲಿ ತನ್ನದೇಯಾದ ನಿರೂಪಣೆ ಶೈಲಿ ಮಾತು ನಗುವಿನಿಂದ ಅಪಾರ ಪ್ರಸಿದ್ದತೆ ಗಳಿಸಿರುವ ಜನಪ್ರಿಯ ನಿರೂಪಕಿ ಅನುಶ್ರೀ ಅವರು ಬಹುವರ್ಷಗಳ ನಂತರ ಮತ್ತೆ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು ನಿರೂಪಕಿ ನಟಿ ಅನುಶ್ರೀ ಅವರು ಈಗಾಗಲೇ ಭೂಮಿ ತಾಯಿ, ಬೆಳ್ಳಿ ಕಿರಣ, ಬೆಂಕಿ ಪಟ್ನ, ರಿಂಗ್ ಮಾಸ್ಟರ್, ಉತ್ತಮ ವಿಲನ್, ಉಪ್ಪು ಉಳಿ ಖಾರ ಮತ್ತು ಪ್ರಜ್ವಲ್ ದೇವರಾಜ್ ಅಭಿನಯದ ಮಾದ ಮತ್ತು ಮನಸಿ ಸಿನಿಮಾದ ಟೈಟಲ್ ಟ್ರ್ಯಾಕ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಇದೀಗ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಇದೀಗ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳಲು ರೆಡಿ ಅಗಿದ್ದಾರೆ. ಮಮ್ಮಿ ಚಿತ್ರದ ನಿರ್ದೇಶಕ ಲೋಹಿತ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಪ್ರಭಾಕರನ್ ಆದೀಗ ಸ್ವತಂತ್ರವಾಗಿ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಲೋಹಿತ್ ಎಚ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಆಗುತ್ತಿದೆ. ಇನ್ನು ಅನುಶ್ರೀ ಅವರು ಸಿನಿಮಾದಲ್ಲಿ ಸೆಕೆಂಡ್ ಇನ್ನಿಂಗ್ಸ್ ಮಾಡುತ್ತಿರುವ ಬಗ್ಗೆ ನಾನು ಸಿನಿಮಾಗಳಿಂದ ದೂರ ಉಳಿದಿರಲಿಲ್ಲ.



ಉತ್ತಮ ಕಥೆಗಾಗಿ ಕಾಯುತ್ತಿದ್ದೆ. ಇದೀಗ ಪ್ರಭಾಕರನ್ ಅವರು ಕಥೆ ಹೇಳಿದಾಗ ಇಷ್ಟ ಆಯ್ತು. ಇದೇ ಪ್ರೊಡಕ್ಷನ್ ಅಡಿಯಲ್ಲಿ ಮೂಡಿ ಬಂದಿದ್ದ ಮಮ್ಮಿ ಸೇವ್ ಮಿ ಚಿತ್ರ ನೋಡಿದ್ದೇ. ಅದರ ಹಾರರ್ ಮೇಕಿಂಗ್ ನನಗೆ ತುಂಬಾ ಇಷ್ಟವಾಗಿತ್ತು. ಇದೀಡ ಅದೇ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿ ತಂದಿದೆ ಎಂದು ಅನುಶ್ರೀ ತಿಳಿಸಿದ್ದಾರೆ. ಇನ್ನು ಈಗಾಗಲೇ ಈ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ಮುಗಿದಿದ್ದು, ಕೆಲವೇ ತಿಂಗಳಲ್ಲೇ ಚಿತ್ರೀಕರಣ ಆರಂಭ ಆಗಲಿದೆಯಂತೆ. ಒಟ್ಟಾರೆಯಾಗಿ ಬಹು ವರ್ಷಗಳ ನಂತರ ನಿರೂಪಕಿ ಕಮ್ ನಟಿ ಅನುಶ್ರೀ ಅವರು ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ.