ಹೊಸ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಮರಳಿದ ನಟಿ

ಧಾರಾವಾಹಿಗಳು ಮುಗಿದು ಹೋದರೂ ಕೆಲವೊಂದು ಪಾತ್ರಗಳು ನಮ್ಮಲ್ಲಿಯೇ ಉಳಿದುಬಿಡುತ್ತವೆ. ಧಾರಾವಾಹಿಯ ಕಥೆ ಮರೆತು ಹೋದರೂ, ಆ ಪಾತ್ರಧಾರಿಗಳ ಅಭಿನಯವನ್ನು ಮರೆಯಲು ಸಾಧ್ಯವಾಗುವುದಿಲ್ಲ. ಹೀಗೆ ಕೆಲವೊಂದು ಧಾರಾವಾಹಿಗಳು ಮತ್ತು ಪಾತ್ರಗಳು ನಮ್ಮಲ್ಲಿ ಹಸಿರಾಗಿರುತ್ತವೆ. ಅಂತದ್ದೇ ಹಲವು ಮರೆಯಲು ಅಸಾಧ್ಯವಾದಂತಹ ಪಾತ್ರಗಳನ್ನು ನೀಡಿದವರು ಕಿರುತೆರೆಯ ನಟಿ ಶರ್ಮಿಳಾ ಚಂದ್ರಶೇಖರ್. ಇವರ ನಿಜವಾದ ಹೆಸರಿಗಿಂತಲೂ ಇವರ ಪಾತ್ರದ ಹೆಸರನ್ನು ಹೇಳಿದರೆ ನಿಮಗೆಲ್ಲ ಇವರು ಯಾರೆಂದು ತಿಳಿಯಬಹುದು. ಸುಮಾರು 11 ವರ್ಷಗಳ ಹಿಂದೆ, 2010 ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸೀತೆ ಧಾರಾವಾಹಿಯ ಸೀತಾ ಪಾತ್ರಧಾರಿ, ಶರ್ಮಿಳಾ ಚಂದ್ರಶೇಖರ್.

ಹಾಗೂ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ, ಪತ್ತೇದಾರಿ ಪ್ರತಿಭಾ ಧಾರಾವಾಹಿಯ ಮುಖ್ಯ ಪಾತ್ರಧಾರಿ ಇವರು. ಪಲ್ಲವಿ ಅನುಪಲ್ಲವಿ, ಯಜಮಾಣಿ, ಸೀತೆ, ಪತ್ತೇದಾರಿ ಪ್ರತಿಭಾ ಹೀಗೆ ಹಲವು ಹಿಟ್ ಧಾರಾವಾಹಿಗಳನ್ನು ನೀಡಿದ ಕೀರ್ತಿ ಇವರದು. ಪತ್ತೇದಾರಿ ಪ್ರತಿಭಾ ಸೀರಿಯಲ್ ನಂತರ ಕೊಂಚ ಬ್ರೇಕ್ ತಗೆದುಕೊಂಡಿದ್ದ ಶರ್ಮಿಳಾ ಇದೀಗ ಮತ್ತೆ ಬಣ್ಣ ಹಚ್ಚಲು ರೆಡಿ ಆಗಿದ್ದಾರೆ. ಹೌದು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ದಾಸ ಪುರಂದರ ಧಾರವಾಹಿಯ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ.
ಕೊನೆಯದಾಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಯಜಮಾನಿ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದ ಶರ್ಮಿಳಾ ಅವರು ಅತಿದೊಡ್ಡ ಬ್ರೇಕ್ ತೆಗೆದುಕೊಂಡಿದ್ದರು.

ಇದೀಗ ಮತ್ತೆ ಕಿರುತೆರೆಯ ಮೂಲಕ ವೀಕ್ಷಕರ ಮುಂದೆ ಬರುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದಾಸರ ಪರಂಪರೆಯಲ್ಲಿ ಶ್ರೇಷ್ಠಸ್ಥಾನ ಪಡೆದಿರುವ ಪುರಂದರದಾಸರ ಜೀವನ ಚರಿತ್ರೆ ಕುರಿತು ಮೂಡಿಬರುತ್ತಿರುವ ದಾಸ ಪುರಂದರ ಧಾರಾವಾಹಿಯಲ್ಲಿ ಬಣ್ಣಹಚ್ಚುತ್ತಿದ್ದಾರೆ. ತಮ್ಮ ವಿಭಿನ್ನ ಪಾತ್ರಗಳ ಮೂಲಕ ಎಲ್ಲರನ್ನೂ ರಂಜಿಸಿರುವ ಶರ್ಮಿಳಾ ಅವರು ಇದೀಗ ಮತ್ತೊಂದು ಹೊಸ ಅವತಾರದಲ್ಲಿ ಜನರ ಮುಂದೆ ಬರುತ್ತಿದ್ದಾರೆ. ಮೂಲತಹ ಕುಚುಪುಡಿ ಡ್ಯಾನ್ಸರ್ ಆಗಿರುವ ಶರ್ಮಿಳಾ ಚಂದ್ರಶೇಖರ್ ಅವರು ಶುರುಮಾಡುತ್ತಿರುವ ಹೊಸ ಪಯಣಕ್ಕೆ ಶುಭವಾಗಲಿ.

%d bloggers like this: