ಹೊಸ ಧಾರಾವಾಹಿ ಮೂಲಕ ಮತ್ತೆ ಬಂದ್ರು ಕನ್ನಡ ಕಿರುತೆರೆ ನಟಿ

ದಿನೇದಿನೇ ಧಾರಾವಾಹಿಗಳ ಫ್ಯಾನ್ ಪೇಜ್ ಹೆಚ್ಚುತ್ತಿದೆ. ಕಿರುತೆರೆಯ ಕಲಾವಿದರು ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದಿನನಿತ್ಯ ಪ್ರಸಾರವಾಗುವ ಧಾರಾವಾಹಿಗಳು ನಮ್ಮ ದೈನಂದಿನ ಜೀವನ ಶೈಲಿಗೆ ಅತಿ ಹೆಚ್ಚು ರಿಲೇಟ್ ಆಗುವುದರಿಂದ ಧಾರಾವಾಹಿಗಳು ಜನರ ಮನಸ್ಸನ್ನು ಗೆಲ್ಲುವಲ್ಲಿ ಬಹುಬೇಗನೆ ಯಶಸ್ವಿಯಾಗುತ್ತವೆ. ಹಾಗೆಯೇ ಧಾರಾವಾಹಿಗಳಲ್ಲಿ ಅಭಿನಯಿಸುವ ಕಲಾವಿದರನ್ನು ಅವರ ಪಾತ್ರದ ಹೆಸರನ್ನಿಟ್ಟುಕೊಂಡೆ ಜನ ಅವರನ್ನು ಗುರುತಿಸುತ್ತಾರೆ. ಧಾರಾವಾಹಿ ಕೇವಲ ಒಂದು ಕಾಲ್ಪನಿಕ ಕಥೆ ಅಲ್ಲದೇ ಒಂದು ಹುಡುಗಿಯ ಅಥವಾ ಒಂದು ಕುಟುಂಬದ ನಿಜವಾದ ಕಥೆ ಎನ್ನುವಷ್ಟು ಕೆಲವು ಜನ ಭಾವಿಸಿರುತ್ತಾರೆ. ಹೀಗಾಗಿ ದಿನೇ ದಿನೇ ಸೀರಿಯಲ್ ನೋಡುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ, ಪ್ರತಿವಾರ ಯಾವುದಾದರೂ ಒಂದು ಹೊಸ ಧಾರಾವಾಹಿ ಲಾಂಚ್ ಆಗುತ್ತಲೇ ಇರುತ್ತದೆ.

ಹೊಸ ಧಾರಾವಾಹಿ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ಅದರಲ್ಲೂ ಎಲ್ಲರಿಗೂ ಪರಿಚಿತವಿರುವ ಕಲಾವಿದರು ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಎಂದರೆ ಸೀರಿಯಲ್ ಅಭಿಮಾನಿಗಳ ಕುತೂಹಲ ಇನ್ನೂ ಹೆಚ್ಚಾಗುತ್ತದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಂಗಳಗೌರಿ ಮದುವೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈಗ ಅದೇ ಮಂಗಳ ಗೌರಿ ಮದುವೆ ಧಾರಾವಾಹಿ ಖ್ಯಾತಿಯ ನಟಿ ಯಶಸ್ವಿನಿ ಒಂದು ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಮಂಗಳ ಗೌರಿ ಮದುವೆಯಲ್ಲಿ ವಿಲನ್ ಆಗಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ನಟಿ ಯಶಸ್ವಿನಿಯವರು ಇದೀಗ ಎರಡನೇ ಧಾರಾವಾಹಿಯಲ್ಲಿ ಯಾವ ಪಾತ್ರ ನಿರ್ವಹಿಸಲಿದ್ದಾರೆ ಎಂಬುದು ಅವರ ಅಭಿಮಾನಿಗಳ ಕುತೂಹಲ.

ಉದಯ ವಾಹಿನಿಯಲ್ಲಿ ಮದುಮಗಳು ಎಂಬ ಹೊಸ ಧಾರಾವಾಹಿ ಪ್ರಸಾರವಾಗಲು ಸಜ್ಜಾಗಿದ್ದು, ಇದರಲ್ಲಿ ಯಶಸ್ವಿನಿಯವರು ಮತ್ತೊಮ್ಮೆ ಕ್ಯೂಟ್ ವಿಲನ್ ಆಗಿ ಜನರನ್ನು ರಂಜಿಸಲು ಸಿದ್ಧವಾಗಿದ್ದಾರೆ. ಮದುಮಗಳು ಧಾರಾವಾಹಿಯನ್ನು ಇತ್ತೀಚೆಗೆ ತನ್ನ ಪ್ರಸಾರ ನಿಲ್ಲಿಸಿದ ಕಾವ್ಯಾಂಜಲಿ ಧಾರಾವಾಹಿ ತಂಡವು ನಿರ್ದೇಶನ ಹಾಗೂ ನಿರ್ಮಾಣ ಮಾಡುತ್ತಿದೆ. ಇನ್ನು ಮದುಮಗಳು ಧಾರಾವಾಹಿ ಇದೇ ಮಾರ್ಚ್ 7 ರಂದು ಪ್ರಸಾರವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಈಗಾಗಲೇ ಶೂಟಿಂಗ್ ತಯಾರಿಗೆ ಸಿದ್ಧತೆ ನಡೆದಿದೆ. ಈ ಧಾರಾವಾಹಿಯಲ್ಲಿ ರವಿ ಭಟ್, ಸಿರಿ, ರೇಣುಕಾ ಸುಂದರ್ ಹೀಗೆ ಹಲವಾರು ಕಲಾವಿದರು ನಟಿಸುತ್ತಿದ್ದು ದೊಡ್ಡ ತಾರಾಗಣವಿದೆ. ಯಶಸ್ವಿನಿ ಅವರ ಯಶಸ್ಸಿನ ಹಾದಿ ಹೀಗೆ ಸಾಗುತ್ತಿರಲಿ. ಅವರ ಹೊಸ ಪಯಣಕ್ಕೆ ಶುಭವಾಗಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ.

%d bloggers like this: