ಹೊಸ ಧಾರಾವಾಹಿಯಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕನ್ನಡದ ಪ್ರಸಿದ್ಧ ಕಿರುತೆರೆ ನಟಿ

ಧಾರಾವಾಹಿಗಳು ಮುಗಿದು ಹೋದರೂ ಕೆಲವೊಂದು ಪಾತ್ರಗಳು ನಮ್ಮಲ್ಲಿಯೇ ಉಳಿದುಬಿಡುತ್ತವೆ. ಧಾರಾವಾಹಿಯ ಕಥೆ ಮರೆತು ಹೋದರೂ, ಆ ಪಾತ್ರಧಾರಿಗಳ ಅಭಿನಯವನ್ನು ಮರೆಯಲು ಸಾಧ್ಯವಾಗುವುದಿಲ್ಲ. ಹೀಗೆ ಕೆಲವೊಂದು ಧಾರಾವಾಹಿಗಳು ಮತ್ತು ಪಾತ್ರಗಳು ನಮ್ಮಲ್ಲಿ ಹಸಿರಾಗಿರುತ್ತವೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಂಗೋಲಿ ಧಾರಾವಾಹಿಯ ಮೂಲಕ ಎಲ್ಲರ ಮನೆಮಾತಾದ ನಟಿ ಸಿರಿ ಇಂದಿಗೂ ವೀಕ್ಷಕರ ಮನಸ್ಸಿನಲ್ಲಿ ಸ್ಪೆಷಲ್ ಜಾಗವನ್ನು ಪಡೆದುಕೊಂಡಿದ್ದಾರೆ. ರಂಗೋಲಿ ಧಾರಾವಾಹಿಯ ಸಕ್ಸಸ್ ನಂತರ ಹಲವು ದಿನಗಳ ಬ್ರೇಕ್ ತೆಗೆದುಕೊಂಡಿದ್ದ ನಟಿ ನಂತರ ಹಲವು ಪಾತ್ರಗಳಲ್ಲಿ ಅಭಿನಯಿಸಿದರು.

ಆದರೆ ಇಂದಿಗೂ ಕೂಡ ಇವರನ್ನು ಜನ ರಂಗೋಲಿ ಧಾರಾವಾಹಿಯ ಅಭಿ ಪಾತ್ರದ ಮೂಲಕ ಗುರುತಿಸುತ್ತಾರೆ. ಹಲವು ವರ್ಷಗಳ ಲಾಂಗ್ ಗ್ಯಾಪ್ ನ ನಂತರ ಕಲರ್ಸ್ ಕನ್ನಡದ ಧಾರಾವಾಹಿಯೊಂದರಲ್ಲಿ ಸಿರಿಯವರು ಅಭಿನಯಿಸುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಇತ್ತೀಚೆಗೆ ತನ್ನ ಪ್ರಸಾರವನ್ನು ಆರಂಭಿಸಿದ ರಾಮಾಚಾರಿ ಸೀರಿಯಲ್ ನಲ್ಲಿ ಸಿರಿ ಅವರು ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ನಾಯಕಿಯ ಎರಡನೇ ತಾಯಿಯಾಗಿ ನಟಿಸುತ್ತಿರುವ ಇವರು, ಸಾಫ್ಟ್ ಅಮ್ಮನಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಹಲವು ವರ್ಷಗಳ ನಂತರ ಕಮ್ ಬ್ಯಾಕ್ ಮಾಡಿರುವ ಸಿರಿ ಅವರು ವಿಭಿನ್ನವಾದ ಪಾತ್ರದ ಮೂಲಕ ಅತಿ ದೊಡ್ಡ ಚೇಂಜ್ ಓವರ್ ನೊಂದಿಗೆ ವೀಕ್ಷಕರ ಮುಂದೆ ಬರುತ್ತಿದ್ದಾರೆ.

ಹೌದು ಈ ಬಾರಿ ಸಿರಿ ಮೊದಲ ಬಾರಿಗೆ ಕಡಕ್ ರೋಲ್ ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಉದಯ ವಾಹಿನಿಯಲ್ಲಿ ಹೊಸದಾಗಿ ಪ್ರಸಾರವಾಗಲು ಸಜ್ಜಾಗಿರುವ ಮದುಮಗಳು ಧಾರಾವಾಹಿಗೆ, ಈಗಾಗಲೇ ಪ್ರಸಾರವನ್ನು ನಿಲ್ಲಿಸಿದ ಕಾವ್ಯಾಂಜಲಿ ಟೀಮ್ ಆಕ್ಷನ್ ಕಟ್ ಹೇಳುತ್ತಿದೆ. ಸದ್ಯಕ್ಕೆ ಕನ್ನಡತಿ ಧಾರಾವಾಹಿಯಲ್ಲಿ ವಿಕ್ರಾಂತ್ ಪಾತ್ರವನ್ನು ನಿರ್ವಹಿಸುತ್ತಿರುವ ಭವಿಷ್ ಮದುಮಗಳು ಸೀರಿಯಲ್ ನಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ದೇವಯಾನಿ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ರಕ್ಷಿತಾ ಪಿ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮದುಮಗಳು ಧಾರಾವಾಹಿ ತೆಲುಗಿನ ಅತು ಅತ್ತಮ್ಮ ಕೂತುರು ಸೀರಿಯಲ್ ನ ರಿಮೇಕ್ ಆಗಿದೆ.

ಒಂದು ತುಂಬು ಕುಟುಂಬದ ಹುಡುಗ ಮತ್ತು ಅವನ ಅಮ್ಮ ಸಕ್ಕತ್ ಖಡಕ್ ಮತ್ತು ಪವರ್ಫುಲ್ ಮಹಿಳೆ. ಇತ್ತ ನಾಯಕಿ ಅತ್ತೆಯನ್ನು ತನ್ನ ತಾಯಿಯಾಗಿ ನೋಡುವ ಸ್ವಭಾವದವಳು. ಅತ್ತೆ ಮನೆಯ ಬಗ್ಗೆ ಸಾವಿರಾರು ಕನಸುಗಳನ್ನು ಹೊತ್ತು ಬರುವ ನಾಯಕಿ ಹಾಗೂ ಖಡಕ್ ಅತ್ತೆಯ ನಡುವೆ ನಡೆಯುವ ಕಥೆಯೇ ಮದುಮಗಳು ಧಾರಾವಾಹಿ. ಇಷ್ಟು ದಿನ ಬರೀ ಸೌಮ್ಯ ಸ್ವಭಾವದ ಪಾತ್ರಗಳನ್ನು ಆರಿಸಿಕೊಳ್ಳುತ್ತಿದ್ದ ಸಿರಿ ಅವರು ಈ ಬಾರಿ ಪವರ್ಫುಲ್ ಪಾತ್ರವೊಂದನ್ನು ಆಯ್ಕೆಮಾಡಿಕೊಂಡಿದ್ದಾರೆ. ಈ ಪಾತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದ್ದು, ವೀಕ್ಷಕರು ಈ ಪಾತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದುನೋಡಬೇಕು.

%d bloggers like this: