ಹೊಸ ಧಾರಾವಾಹಿಯೊಂದಿಗೆ ಕಿರುತೆರೆಯಲ್ಲಿ ಮೋಡಿ ಮಾಡಲಿದ್ದಾರೆ ಕನ್ನಡ ಚಿತ್ರರಂಗದ ಖ್ಯಾತ ನಟಿ

90ರ ದಶಕದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟಿಯಾಗಿ ಮಿಂಚಿದ ಖ್ಯಾತ ನಟಿ ಇದೀಗ ಕನ್ನಡ ಕಿರುತೆರೆಯಲ್ಲಿ ಮಿಂಚಲು ಬರುತ್ತಿದ್ದಾರೆ. ಕನ್ನಡ ಕಿರುತೆರೆಯ ಪ್ರಸಿದ್ದ ವಾಹಿನಿಗಳಲ್ಲಿ ಒಂದಾದ ಜೀ಼ ಕನ್ನಡ ವಾಹಿನಿ ವಿಭಿನ್ನ ಕಥಾ ಹಂದರ ಹೊಂದಿರುವ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳ ಮೂಲಕ ನಾಡಿನಾದ್ಯಂತ ಅಪಾರ ಜನಪ್ರಿಯತೆ ಪಡೆದುಕೊಂಡಿದೆ. ಈಗಾಗಲೇ ಅನೇಕ ಧಾರಾವಾಹಿಗಳ ಮೂಲಕ ಜನ ಮನ ಗೆದ್ದಿರುವ ಜೀ಼ ಕನ್ನಡ ಇದೀಗ ಹೊಸದೊಂದು ಧಾರಾವಾಹಿಯನ್ನ ನೀಡಲು ಸಜ್ಜಾಗಿದೆ. ಈ ಧಾರಾವಾಹಿ ಶೀರ್ಷಿಕೆ ಶ್ರೀ ರಸ್ತು ಶುಭಮಸ್ತು. ಈ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಕನ್ನಡದ ಸ್ಟಾರ್ ನಟಿಯಾಗಿ ಮಿಂಚಿದ ನಟಿ ಸುಧಾರಾಣಿ ಅವರು ಈ ಶ್ರೀ ರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮಗನ ಪಾತ್ರದಲ್ಲಿ ದೀಪಕ್ ಗೌಡ ನಟಿಸುತ್ತಿದ್ದು, ಸೊಸೆಯ ಪಾತ್ರದಲ್ಲಿ ಚಂದನಾ ರಾಘವೇಂದ್ರ ಅವರು ಅಭಿನಯಿಸುತ್ತಿದ್ದಾರೆ. ತಾಯಿಯು ತನ್ನ ಮಗನ ಎಲ್ಲಾ ಕೆಲಸ ಕಾರ್ಯಗಳಲ್ಲಿ ಭಾಗವಾಗಿರುತ್ತಾಳೆ. ಅವನ ಸ್ನಾನದಿಂದ ಆರಂಭವಾಗುವ ಸೇವೆ ತಿಂಡಿ, ಕಾಫಿ, ಅವನ ಆಫೀಸ್ ಡ್ರೆಸ್ ಐರನ್ ಮಾಡಿ, ಕಾಲಿಗೆ ಶೂಹಾಕೋ ವರೆಗೂ ಮುಂದುವರಿಯುತ್ತದೆ. ಈಗಾಗಲೇ ಈ ಧಾರಾವಾಹಿಯ ಪ್ರೋಮೋ ಕಿರುತೆರೆ ಪ್ರೇಕ್ಷಕರಿಗೆ ಕುತೂಹಲ ಮೂಡಿಸಿದೆ. ಇನ್ನು ಸುಧಾರಾಣಿಯವರು ಈ ಧಾರಾವಾಹಿಯಲ್ಲಿ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಯಾವ ರೀತಿಯಾಗಿ ಈ ಧಾರಾವಾಹಿ ಮೂಡಿ ಬರಲಿದೆ ಎಂಬ ಕಾತುರ ಅವರ ಅಭಿಮಾನಿಗಳಾದ್ದಾಗಿದೆ.

ಇನ್ನು ಈ ಧಾರಾವಾಹಿಯಲ್ಲಿ ಸುಧಾರಾಣಿ ಅವರಿಗೆ ಮಗನಾಗಿ ನಟಿಸುತ್ತಿರುವ ನಟ ದೀಪಕ್ ಅಮ್ಮನ ನೋವನ್ನು ಮಗ ಅರ್ಥ ಮಾಡಿಕೊಳ್ಳುತ್ತಾನೆ ಎಂಬುದು ಗೊತ್ತಿಲ್ಲ. ಇಲ್ಲಿ ನಾನು ಪ್ರತಿಯೊಂದಕ್ಕೂ ಅಮ್ಮನನ್ನೇ ಡಿಪೆಂಡ್ ಆಗಿರುತ್ತೇನೆ. ಇದನ್ನ ನೀವು ಕಿರುತೆರೆಯಲ್ಲಿ ನೋಡಿ ಎಂಜಾಯ್ ಮಾಡಬೇಕು ಎಂದು ತಿಳಿಸಿದ್ದಾರೆ. ಅದೇ ರೀತಿ ಸುಧಾರಾಣಿಯ ಸೊಸೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಂದನಾ ರಾಘವೇಂದ್ರ ಅವರು ಜೀ಼ ಕನ್ನಡ ವಾಹಿನಿ ಕುಟುಂಬಕ್ಕೆ ನಾನು ಹೊಸ ಸದಸ್ಯೆ. ನಾನು ಸುಧಾರಾಣಿ ಅವರ ಸೊಸೆಯಾಗಿ ನಟಿಸುತ್ತಿರುವುದಕ್ಕೆ ತುಂಬಾ ಉತ್ಸುಕನಾಗಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಶ್ರೀ ರಸ್ತು ಶುಭ ಮಸ್ತು ಧಾರಾವಾಹಿಯು ಜೀ಼ ಕನ್ನಡದಲ್ಲಿ ಪ್ರಸಾರವಾಗಲಿದೆ.

%d bloggers like this: