ಹೊಸ ಧಾರಾವಾಹಿಯೊಂದಿಗೆ ಮತ್ತೆ ಮರಳಿದ ಕನ್ನಡ ಕಿರುತೆರೆಯ ನಟಿ

ಇತ್ತೀಚೆಗೆ ಹೊಸ ಧಾರಾವಾಹಿಗಳ ಇನ್ನಿಂಗ್ಸ್ ಶುರುವಾಗಿದೆ. ಒಂದಾದಮೇಲೊಂದರಂತೆ ಅನೇಕ ಹೊಸ ಧಾರಾವಾಹಿಗಳು ಸ್ಮಾಲ್ ಸ್ಕ್ರೀನ್ ಗೆ ಲಗ್ಗೆ ಇಡುತ್ತಿವೆ. ಕಿರುತೆರೆಯಲ್ಲಿ ಧಾರಾವಾಹಿಗಳು ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸುತ್ತಲೇ ಇರುತ್ತವೆ. ಚಾನೆಲ್ ಗಳ ಟಿ ಆರ್ ಪಿ ಗೋಸ್ಕರ ಹೊಸ ಹೊಸ ಕಥೆಗಳನ್ನು ಹುಡುಕಿ ಜನರ ಮುಂದೆ ತರುತ್ತಲೇ ಇರುತ್ತವೆ. ಸದ್ಯಕ್ಕೆ ಉದಯವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದು ಬರಲು ಸಜ್ಜಾಗಿದೆ. ಇತ್ತೀಚಿನ ದಿನಗಳಲ್ಲಿ ಡಬ್ಬಿಂಗ್ರಾ ಧಾರಾವಾಹಿಗಳ ಸದ್ದು ಜೋರಾಗಿಯೇ ಇದೆ. ಅದರಲ್ಲೂ ಕೋವಿಡ್ ಕಾರಣದಿಂದ ಬೇರೆ ಭಾಷೆಯಲ್ಲಿ ಸೂಪರ್ ಹಿಟ್ ಆದಂತಹ ಧಾರಾವಾಹಿಗಳನ್ನು ಕನ್ನಡಕ್ಕೆ ತರಲು ಪ್ರಯತ್ನಿಸಲಾಯಿತು.

ಇದೀಗ ರಾಧಿಕಾ ಎಂಬ ಹೆಸರಿನಿಂದ ಬರುತ್ತಿರುವ ಈ ಧಾರಾವಾಹಿ, ತಮಿಳು ಭಾಷೆಯಿಂದ ಡಬ್ ಆಗಿದೆ. ತಮಿಳಿನ ಸನ್ ಟಿವಿಯಲ್ಲಿ ಪ್ರಸಾರವಾಗುವ ಕಾಯಲ್ ಎಂಬ ಧಾರಾವಾಹಿ ಕನ್ನಡಕ್ಕೆ ಡಬ್ ಆಗುತ್ತಿದೆ. ಈ ಧಾರಾವಾಹಿಯು ಒಬ್ಬ ಹೆಣ್ಣುಮಗಳು ತನ್ನ ಕುಟುಂಬ ಹಾಗೂ ಮನೆಗಾಗಿ ಒಬ್ಬಳೇ ದುಡಿಯುತ್ತಿರುತ್ತಾಳೆ. ತುಂಬಾ ಧೈರ್ಯವಂತೆ ಯಾಗಿರುವ ಇವಳ ಸುತ್ತ ನಡೆಯುವ ಕಥೆಯನ್ನು ಈ ಧಾರವಾಹಿ ಒಳಗೊಂಡಿದೆ. ಈ ಗಟ್ಟುಗಿತ್ತಿಯ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ.

ಈಗಾಗಲೇ ಈ ಪಾತ್ರಕ್ಕಾಗಿ ನಟಿಯನ್ನು ಆಯ್ಕೆ ಮಾಡಲಾಗಿದೆ. ಹೌದು ರಾಧಿಕಾ ಧಾರವಾಹಿಯಲ್ಲಿ ರಾಧಿಕಾ ಪಾತ್ರಕ್ಕಾಗಿ ನಟಿ ಕಾವ್ಯ ಶಾಸ್ತ್ರಿ ಬಣ್ಣ ಹಚ್ಚುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ನರ್ಸ್ ಪಾತ್ರವನ್ನು ವಹಿಸುತ್ತಿರುವ ಇವರು, ತಾನೊಬ್ಬಳೇ ಮನೆಯನ್ನು ನಿಭಾಯಿಸುತ್ತಿರುತ್ತಾಳೆ. ನಟಿ ಕಾವ್ಯ ಶಾಸ್ತ್ರಿಯವರು ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶುಭವಿವಾಹ ಧಾರಾವಾಹಿಯ ಮೂಲಕ ಎಲ್ಲರ ಮನೆಮಾತಾಗಿದ್ದರು. ಅಲ್ಲದೆ ಇವರಿಗೆ ಬಿಗ್ ಬಾಸ್ ಸೀಸನ್ 4ರಲ್ಲಿ ಭಾಗವಹಿಸುವ ಅವಕಾಶ ದೊರಕಿತ್ತು.

ಶುಭ ವಿವಾಹ ಧಾರಾವಾಹಿ ಇಂದ ಒಳ್ಳೆಯ ಹೆಸರು ಗಳಿಸಿದ್ದ ಕಾವ್ಯ ಅವರು, ಬಿಗ್ ಬಾಸ್ ಸೀಸನ್ ನಾಲ್ಕರಿಂದ ಇನ್ನೂ ಹೆಚ್ಚು ಜನರ ಪ್ರೀತಿಗೆ ಪಾತ್ರರಾದರು. ಇದಾದ ನಂತರ ತಮ್ಮ ಕಿರುತೆರೆ ಜರ್ನಿಗೆ ಕೊಂಚ ಬ್ರೇಕ್ ನೀಡಿದ ನಟಿ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ದರ್ಶಿತ್ ಭಟ್ ನಿರ್ದೇಶನ ಮಾಡುತ್ತಿರುವ ಈ ಧಾರಾವಾಹಿಯಿಂದ ಹೊಸ ಇನ್ನಿಂಗ್ಸ್ ಶುರು ಮಾಡುತ್ತಿರುವ ಕಾವ್ಯ ಶಾಸ್ತ್ರೀ ಅವರಿಗೆ ಅವರ ಅಭಿಮಾನಿಗಳು ಆಲ್ ದಿ ಬೆಸ್ಟ್ ಹೇಳಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ರಾಧಿಕಾ ಮೂಲಕ ಕಾವ್ಯಾ ಶಾಸ್ತ್ರೀ ಅವರು ಮತ್ತೊಮ್ಮೆ ಸದ್ದು ಮಾಡಲು ಸಜ್ಜಾಗಿದ್ದಾರೆ.

%d bloggers like this: