ಹೊಸ ಕನ್ನಡ ಆಲ್ಬಮ್ ಅಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬಿಗ್ ಬಾಸ್ ಸ್ಪರ್ಧಿಗಳು

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಅತ್ಯಂತ ಹಿಟ್ ರಿಯಾಲಿಟಿ ಶೋ ಎಂದರೆ ಬಿಗ್ ಬಾಸ್. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಈ ರಿಯಾಲಿಟಿ ಶೋ ತುಂಬಾ ಫೇಮಸ್. ಈಗಾಗಲೇ ಕನ್ನಡದಲ್ಲಿ ಬಿಗ್ ಬಾಸ್ ನ ಎಂಟನೇ ಆವೃತ್ತಿ ಮುಕ್ತಾಯಗೊಂಡಿದೆ. ಬರೀ ಸೆಲೆಬ್ರಿಟಿಗಳನ್ನು ಒಳಗೊಂಡು ಶುರುವಾದ ಕಿರುತೆರೆಯ ರಿಯಾಲಿಟಿ ಶೋ, ಸದ್ಯಕ್ಕೆ ಸೆಲೆಬ್ರಿಟಿಗಳೊಂದಿಗೆ ಸಾಮಾನ್ಯ ಜನರಿಗೂ ಕೂಡ ಅವಕಾಶ ನೀಡುತ್ತಿದೆ. ಒಂದು ಬಾರಿ ಬಿಗ್ ಬಾಸ್ ಸೀಸನ್ ನ ಕಂಟೆಸ್ಟೆಂಟ್ ಆಗಿ ಹೊರಬಂದರೆ ಅವರ ಭವಿಷ್ಯವೇ ಬದಲಾಗುತ್ತದೆ ಎಂಬ ಮಾತಿದೆ. ಬಿಗ್ ಬಾಸ್ ನಿಂದ ಹೊರ ಬಂದ ಎಷ್ಟೋ ಜನರಿಗೆ ಸಿನಿಮಾ ಕ್ಷೇತ್ರದಲ್ಲಿ ಸಾವಿರಾರು ಅವಕಾಶಗಳು ಹುಡುಕಿಕೊಂಡು ಬರುತ್ತವೆ.

ಬಿಗ್ ಬಾಸ್ ನಿಂದ ಕಾಲು ಹೊರಗಿಟ್ಟ ತಕ್ಷಣ ಒಂದಲ್ಲ ಒಂದು ಪ್ರಾಜೆಕ್ಟ್ ನಲ್ಲಿ ಎಲ್ಲರೂ ಬ್ಯುಸಿಯಾಗುತ್ತಾರೆ. ಈ ಬಾರಿ ಬಿಗ್ ಬಾಸ್ ಸೀಸನ್ ಎಂಟರಲ್ಲಿ ನಟಿ ವೈಷ್ಣವಿ, ಮಂಜು ಪಾವಗಡ, ಅರವಿಂದ್, ದಿವ್ಯಾ ಸುರೇಶ್, ದಿವ್ಯ ಉರುಡುಗ, ಪ್ರಿಯಾಂಕಾ ಹೀಗೆ ಹಲವಾರು ಸೆಲೆಬ್ರಿಟಿಗಳು ಇದ್ದರು. ಅರವಿಂದ್ ಅವರು ಬಿಗ್ ಬಾಸ್ ಸೀಸನ್ ಎಂಟರ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಮಂಜು ಪಾವಗಡ ಅವರು ಬಿಗ್ ಬಾಸ್ ಟ್ರೋಫಿಯನ್ನು ಕೈಗೆತ್ತಿಕೊಂಡರು. ಇನ್ನೂ ದಿವ್ಯಾ ಸುರೇಶ್ ಅವರು ಕೂಡಾ ಬಿಗ್ ಬಾಸ್ ನಂತರ ಹಲವಾರು ಸಿನಿಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇದೀಗ ಸದ್ಯಕ್ಕೆ ಸುದ್ದಿಯಲ್ಲಿರುವುದು ಬಿಗ್ ಬಾಸ್ ಖ್ಯಾತಿಯ ಶಮಂತ್.

ಬಿಗ್ ಬಾಸ್ ಗೆ ಬರುವ ಮುಂಚೆ ಇನ್ಸ್ಟಾಗ್ರಾಂ ನಲ್ಲಿ ರೀಲ್ಸ್ ಮಾಡುವುದರೊಂದಿಗೆ ಫೇಮಸ್ ಆಗಿದ್ದ ಶಮಂತ್ ಅವರು ತಮ್ಮದೇ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರು ಬ್ರೋ ಗೌಡ ಎಂದೇ ಫೇಮಸ್. ಇದೀಗ ಶಮಂತ್ ಅವರು ಆಲ್ಬಮ್ ಸಾಂಗ್ ಒಂದನ್ನು ಮಾಡುತ್ತಿದ್ದಾರೆ. ಎಲ್ಲೆಡೆ ಬಿಗ್ ಬಾಸ್ ಶಮಂತ್ ಸಕ್ಕತ್ ರೋಮ್ಯಾಂಟಿಕ್ ಆಗಿ ಬರೋಕೆ ರೆಡಿಯಾಗಿದ್ದಾರೆ ಎಂದು ಸುದ್ದಿ ಹರಡಿದೆ. ಹೌದು ಬಿಗ್ ಬಾಸ್ ಮನೆಯ ಕ್ಯಾಮೆರಾ ಕಣ್ಮಣಿ ಶಮಂತ್ ಅವರಿಗೆ ಹಾಡುಗಳನ್ನು ಬರೆದು ಹಾಡುವ ಚಾಲೆಂಜ್ ಮಾಡಿದ್ದರು. ಕ್ಯಾಮೆರಾ ಕಣ್ಮಣಿ ಹೇಳಿದ ಮಾತಿಗೆ ಎಸ್ ಎಂದಿದ್ದ ಶಮಂತ್, ವಿಭಿನ್ನವಾದ ಐದು ಹಾಡುಗಳನ್ನು ರಚಿಸಿ ಅದನ್ನು ಕ್ಯಾಮರಾ ಮುಂದೆ ಒಪ್ಪಿಸಿದ್ದರು. ಆ ಐದು ಹಾಡುಗಳಲ್ಲಿ ಮಳೆಯೇ ಸುರಿ ಹಾಡು ಕೂಡ ಒಂದು.

ಈ ಹಾಡು ಸಕ್ಕತ್ ಫೇಮಸ್ ಆಗಿತ್ತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೂಡ ಈ ಹಾಡನ್ನು ಕೇಳಿ ಖುಷಿಪಟ್ಟಿದ್ದರು. ಇದೀಗ ಈ ಹಾಡನ್ನು ಆಲ್ಬಮ್ ಸಾಂಗ್ ಮಾಡಲು ಹೊರಟಿದ್ದಾರೆ ಶಮಂತ್ ಅವರು. ಇನ್ನೂ ಇವರಿಗೆ ಸಾಥ್ ನೀಡುತ್ತಿರುವ ನಟಿಯೆಂದರೆ ಪ್ರಿಯಾಂಕಾ ತಿಮ್ಮೇಶ್. ಪ್ರಿಯಾಂಕ ಕೂಡಾ ಬಿಗ್ ಬಾಸ್ ಎಂಟನೇ ಆವೃತ್ತಿಯ ಸ್ಪರ್ಧಿ ಆಗಿದ್ದರು. ಶಮಂತ್ ಮತ್ತು ಪ್ರಿಯಾಂಕಾ ಅವರಿಗೆ ಅದ್ವಿಕ್ ಅವರು ಆಕ್ಷನ್ ಕಟ್ ಹೇಳುತ್ತಿದ್ದು, ಅಲಂಕಾರ ಪಾಂಡಿಯನ್ ಬ್ಯಾನರಿನಡಿ ಆಲ್ಬಮ್ ಸಾಂಗ್ ಹೊರಬರುತ್ತಿದೆ. ಒಟ್ಟಿನಲ್ಲಿ ಅದ್ಭುತವಾದ ಕಂಪೋಸಿಂಗ್ ನಲ್ಲಿ ಸುಂದರ ದೃಶ್ಯ ರೂಪದೊಂದಿಗೆ ಮಳೆಯೇ ಸುರಿ ಬರುತ್ತಿದ್ದು, ಶಮಂತ್ ಅವರ ಗರಡಿಯಿಂದ ಮತ್ತಷ್ಟು ಹಾಡುಗಳ ಸುರಿಮಳೆ ಆಗಲಿ ಎನ್ನುವುದು ಶಮಂತ್ ಅವರ ಅಭಿಮಾನಿಗಳ ಆಸೆ. ಇದೇ ಮಾರ್ಚ್ 12ರಂದು ಈ ಹಾಡು ರಿಲೀಸ್ ಆಗಿದ್ದು ಕಿಚ್ಚ ಸುದೀಪ್ ಅವರು ಪ್ರೆಸೆಂಟ್ ಮಾಡಿದ್ದಾರೆ.

%d bloggers like this: