ಹೊಸ ಲಕ ಲಕ ಲ್ಯಾಂಬೋರ್ಗಿನಿ ಅಲ್ಲಿ ಚಂದನ್ ಶೆಟ್ಟಿ ಹಾಗೂ ರಚಿತಾ ರಾಮ್

ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ಗೆ ಅಲಲಲೇ ಇವಳು ಚಂದಾಗವ್ಳೆ ಸಖತ್ ಹಾಟ್ ಆಗವ್ಳೆ ಎಂದ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ , ಹೌದು ನಿನ್ನೆಯಷ್ಟೇ ಕನ್ನಡದಲ್ಲಿ ಹೊಸದೊಂದು ಆಲ್ಬಂ ಸಾಂಗ್ ರಿಲೀಸ್ ಆಗಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಆಲ್ಬಂ ಸಾಂಗ್ ಭಾರಿ ಸೌಂಡ್ ಮಾಡುತ್ತಿದೆ. ಇತ್ತೀಚೆಗೆ ಆಲ್ಬಂ ಸಾಂಗ್ ಗಳು ಸಿನಿಮಾಗಳು ರಿಲೀಸ್ ಆಗಿ ಸೌಂಡ್ ಮಾಡುವಷ್ಟೇ ಸದ್ದು ಮಾಡುತ್ತಿವೆ. ಅದೇ ರೀತಿಯಾಗಿ ನಿನ್ನೆ ತಾನೇ ಚಂದನ್ ಶೆಟ್ಟಿ ಬರೆದು ಮ್ಯೂಸಿಕ್ ಮಾಡಿ ಹಾಡಿರುವುದಲ್ಲದೆ ನಟಿಸಿರುವ ಲಕ ಲಕ ಲ್ಯಾಂಬೋರ್ಗಿನಿ ಆಲ್ಬಂ ಸಾಂಗ್ ಸಖತ್ ಟ್ರೆಂಡ್ ಆಗಿದೆ. ಲಕ ಲಕ ಲ್ಯಾಂಬೋರ್ಗಿನಿ ಸಾಂಗ್ ನಲ್ಲಿ ಸಂಗೀತ ನಿರ್ದೇಶಕ ರ್ಯಾಪರ್ ಚಂದನ್ ಶೆಟ್ಟಿ ಅವರೊಟ್ಟಿಗೆ ಹೆಜ್ಜೆ ಹಾಕಿರೋದು ಬೇರಾರು ಅಲ್ಲ ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್.

ರಚಿತಾ ರಾಮ್ ಈ ಆಲ್ಬಂ ಸಾಂಗ್ ನಲ್ಲಿ ಬೋಲ್ಡ್ ಆಗಿಯೇ ಕಾಣಿಸಿಕೊಂಡಿದ್ದು ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಚಂದನ್ ಶೆಟ್ಟಿ ಯೂಟ್ಯೂಬ್ ಚಾನೆಲ್ ನಲ್ಲಿ ನಿನ್ನೆ ರಿಲೀಸ್ ಆದ ಈ ಲಕ ಲಕ ಲ್ಯಾಂಬೌರ್ಗಿನಿ ಸಾಂಗ್ ಟ್ರೆಂಡಿಂಗ್ ನಲ್ಲಿ ನಂಬರ್ ಒನ್ ಸ್ಥಾನ ಬೀರಿದೆ. ಪಡ್ಡೆ ಹೈಕ್ಳು ರಚಿತಾ ರಾಮ್ ಅವರ ಲುಕ್ ಡ್ಯಾನ್ಸ್ ಗೆ ಬೋಲ್ಡ್ ಆಗಿದ್ದು, ಈ ಆಲ್ಬಂ ಸಾಂಗ್ ಈಗಾಗಲೇ ಬರೋಬ್ಬರಿ ಹತ್ತು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಕನ್ನಡದ ಬಹು ಬೇಡಿಕೆಯ ನಟಿ ಯಾಗಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಕೈ ತುಂಬಾ ಸಿನಿಮಾಗಳಿದ್ದಾವೆ.

ಇದರ ನಡುವೆ ಕೂಡ ಆಲ್ಬಂ ಸಾಂಗ್ ನಲ್ಲಿ ಹೆಜ್ಜೆ ಹಾಕಿ ಸಖತ್ ಮಿಂಚುತ್ತಿದ್ದಾರೆ. ಪೊಗರು ಚಿತ್ರದ ಮೂಲಕ ಮ್ಯೂಸಿಕ್ ಡೈರೆಕ್ಟರ್ ಆಗಿ ಬಡ್ತಿ ಪಡೆದ ರ್ಯಾಪರ್ ಚಂದನ್ ಶೆಟ್ಟಿ ಮೂರೇ ಮೂರು ಪೆಗ್ಗಿಗೆ ಹಾಡಿನಲ್ಲಿ ಐಂದ್ರಿತಾ ರೈ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು‌. ಈ ಹಾಡು ಕೂಡ ಸಖತ್ ಟ್ರೆಂಡ್ ಸೆಟ್ ಮಾಡಿತ್ತು‌. ಇದಾದ ಬಳಿಕ ಚಾಕ್ಲೇಟ್ ಗರ್ಲ್, ಪಾರ್ಟಿ ಫ್ರೀಕ್, ಕೋಲು ಮಂಡೆ ಹೀಗೆ ಒಂದಷ್ಟು ಸೂಪರ್ ಹಿಟ್ ಆಲ್ಬಂ ಸಾಂಗ್ ಮಾಡಿದ ಚಂದನ್ ಶೆಟ್ಟಿ ಅವರು ರಚಿತಾ ರಾಮ್ ಅವರಿಗೆ ಲಕ ಲಕ ಲ್ಯಾಂಬೋರ್ಗಿನಿ ಎಂಬ ಆಲ್ಬಂ ಸಾಂಗ್ ಮಾಡಿದ್ದಾರೆ. ಈ ಲಕ ಲಕ ಲ್ಯಾಂಬೋರ್ಗಿನಿ ಆಲ್ಬಂ ಸಾಂಗ್ ಗೆ ನಿರ್ದೇಶಕ ನಂದಕಿಶೋರ್ ಆಕ್ಷನ್ ಕಟ್ ಹೇಳಿದ್ದಾರೆ.

ಕೇಶವ್ ಮತ್ತು ಬಿಂದಿಯಾ ಗೌಡ ಹಣ ಹೂಡಿಕೆ ಮಾಡಿದ್ದಾರೆ. ಇನ್ನು ಲಕ ಲಕ ಲ್ಯಾಂಬೋರ್ಗಿನಿ ಆಲ್ಬಂ ಸಾಂಗ್ ನಲ್ಲಿ ನಟಿ ರಚಿತಾ ರಾಮ್ ಅವರ ಬೋಲ್ಡ್ ಡ್ಯಾನ್ಸ್ ಗೆ ಅವರ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಸದ್ಯಕ್ಕೆ ಡಿಂಪಲ್ ಕ್ವೀನ್ ಡೈರೆಕ್ಟರ್ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಅಭಿಷೇಕ್ ಅಂಬರೀಷ್ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಶಬರಿ ಸರ್ಚಿಂಗ್ ಫಾರ್ ರಾವಣ, ಡಾಲಿ, ಪಂಕಜ ಕಸ್ತೂರಿ, ಲಿಲ್ಲಿ, ಏಪ್ರಿಲ್, ವೀರಂ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಇವರ ಅಭಿನಯದ ಲವ್ ಯೂ ರಚ್ಚು ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ.

%d bloggers like this: