ಬಾಲಿವುಡ್ ಪ್ರಖ್ಯಾತ ನಟಿ ಹಾಗ ಶಿವಸೇನಾ ಪಕ್ಷದ ನೂತನ ಸದಸ್ಯರಾಗಿರುವ ಊರ್ಮಿಳಾ ಮಾತೋಂಡ್ಕರ್ ಕಾಂಗ್ರೆಸ್ ಪಕ್ಷ ತೊರೆದು ಶಿವಸೇನಾ ಪಕ್ಷ ಸೇರ್ಪಡೆಯಾದ ಕೆಲವೇ ತಿಂಗಳಲ್ಲಿ ಕೋಟಿ ಬೆಲೆಯ ಕಛೇರಿಯನ್ನು ಪಡೆದಿದ್ದಾರೆ. ಇದು ರಾಜಕೀಯ ವಲಯದಲ್ಲಿರುವ ದಿಗ್ಗಜರಿಗೆ ಮತ್ತು ಸ್ವತಃ ಶಿವಸೇನಾ ಪಕ್ಷದ ಕೆಲವರಿಗೆ ಆಶ್ಚರ್ಯ ಮತ್ತು ಕುತೂಹಲ ಮೂಡಿಸಿದೆ, ಚಿತ್ರ ನಟಿಊರ್ಮಿಳಾಮಾತೋಂಡ್ಕರ್ ಬಾಲಾವುಡ್ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದವರು ತದನಂತರ ರಾಜಕೀಯ ಪ್ರವೇಶ ಪಡೆದು ಕಾಂಗ್ರೆಸ್ ಪಕ್ಷದಲ್ಲಿ ಒಂದಷ್ಟು ವರ್ಷ ಸಕ್ರೀಯವಾದ ರಾಜಕಾರಣ ಮಾಡಿದರು. ಆದರೆ ಕೆಲವು ವೈಯಕ್ತಿಕ ಅಸಮಾಧಾನದಿಂದ ಊರ್ಮಿಳಾ ಅವರು ಕಾಂಗ್ರೆಸ್ ಪಕ್ಷದಿಂದ ಹೊರಬಂದರು. ಇದೀಗ ಶಿವಸೇನಾ ಪಕ್ಷಕ್ಕೆ ಸೇರಿರುವುದು ಹಳೆಯ ಸುದ್ದಿಯಾಗಿದೆ.

ಆದರೆ ಊರ್ಮಿಳಾ ಮಾತೋಂಡ್ಕರ್ ಅವರು ಶಿವಸೇನಾ ಪಕ್ಷ ಸೇರಿದ ಕೆಲವೇ ತಿಂಗಳಲ್ಲಿ ಮುಂಬೈ ನಗರದಲ್ಲಿ ಬರೋಬ್ಬರಿ ಮೂರು ಕೋಟಿ ಗಿಂತಲೂ ಅಧಿಕ ಬೆಲೆಬಾಳುವ ಕಛೇರಿಯನ್ನು ಪಡೆದು ಸುದ್ದಿಯಾಗಿದ್ದಾರೆ. ಇದರ ಬಗ್ಗೆ ಸುದ್ದಿಮಾಡಿರುವ ಇಂಡಿಯಾ.ಕಾಂ.ವೆಬ್ಸೈಟ್ ಆ ಕಛೇರಿಯ ಮೌಲ್ಯ ಬರೋಬ್ಬರಿ 3.75 ಕೋಟಿ ಎಂದು ವರದಿಯಲ್ಲಿ ತಿಳಿದುಬಂದಿದೆ.
ಈ ಕಛೇರಿಯು ಮುಂಬೈ ನಗರದಲ್ಲಿರುವ ದುರ್ಗಾ ಚೇಂಬರ್ ನಲ್ಲಿ ಇದ್ದು ಇದು ಮುಂಬೈನಗರದ ಪ್ರಮುಖವಾದ ಕಟ್ಟಡವಾಗಿದೆ, ಆದ್ದರಿಂದ ಆ ಕಛೇರಿಗೆ ಇಷ್ಟು ಬೆಲೆಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಶಿವಸೇನಾ ಪಕ್ಷದ ಹಿರಿಯರಿ ಗಿಲ್ಲದ ಈ ಸೌಲಭ್ಯ ಬೇರೆ ಪಕ್ಷದಿಂದ ಬಂದವರಿಗೆ ಇಷ್ಟು ಅನುಕೂಲ ಮಾಡಿಕೊಡುತ್ತಿರುವುದು ಪಕ್ಷದ ಹಿರಿಯರಿಗೆ ಅಸಮಾಧಾನವಾಗಿದೆ.

ಒಟ್ಟಾರೆಯಾಗಿ ಊರ್ಮಿಳಾ ಮಾತೋಂಡ್ಕರ್ ಅವರು ಖರೀದಿ ಮಾಡಿರುವ ದುರ್ಗಾದ ಚೇಂಬರ್ ಕಟ್ಟಡದ ವಿಶೇಷ ಮತ್ತು ಅವರ ಕಛೇರಿಯ ವೈಶಿಷ್ಟ್ಯ ನೋಡುವುದಾದರೆ ಈ ಕಟ್ಟಡದಲ್ಲಿ ಮಾತೊಂಡ್ಕರ್ ಅವರು ಕಛೇರಿಯನ್ನು ಮಾತ್ರ ಖರೀದಿ ಮಾಡದೇ ಆರನೇ ಮಹಡಿಯಲ್ಲಿ ಒಂದೂ ಫ್ಲ್ಯಾಟ್ ಕೂಡ ಖರೀದಿ ಮಾಡಿದ್ದಾರೆ. ಇದು ಸಂಪೂರ್ಣವಾಗಿ ಗಾಜಿನಿಂದ ಆವೃತವಾಗಿ ಆಕರ್ಷಕವಾದ ಏಳು ಅಂತಸ್ತು ಹೊಂದಿರುವ ಪ್ರತಿಷ್ಠಿತ ಕಟ್ಟಡ ಎನಿಸಿಕೊಂಡಿದೆ. ಈ ದುರ್ಗಾ ಚೇಂಬರ್ ಕಟ್ಟಡದ ಒಂದು ಫ್ಲ್ಯಾಟ್ ನ ಬಾಡಿಗೆ ಬರೋಬ್ಬರಿ 5ರಿಂದ 8ಲಕ್ಷ ದಷ್ಟಿದೆ. ಅಂಡರ್ ಗ್ರಾಂಡ್ ಮಾಳಿಗೆಯಲ್ಲಿ ಕಮರ್ಷಿಯಲ್ ಚಟುವಟಿಕೆಗಳು ನಡೆಯುತ್ತವೆ, ಇನ್ನು ಊರ್ಮಿಳಾ ಮಾತೋಂಡ್ಕರ್ ಖರೀದಿ ಮಾಡಿರುವ ಸ್ಥಳ ಸುಮಾರು 1,039,901 ಚದರ ಅಡಿಯಷ್ಟು ಈ ಪ್ರತಿ ಚದರ ಅಡಿಗೆ 36,000ರೂ ನೀಡಿ ಕಛೇರಿಯನ್ನು ಕೊಂಡುಕೊಂಡಿದ್ದಾರೆ.