2021ರ ವರ್ಷದಲ್ಲಿ ಜನವರಿ ತಿಂಗಳ ಅಂತ್ಯದಿಂದ ಈ ಐದು ರಾಶಿಯವರ ಜೀವನದಲ್ಲಿ ಅದ್ಭುತ ನಡೆಯಲಿದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಿದ್ದಾರೆ, ಹಾಗಾದರೆ ಅವು ಯಾವ ರಾಶಿ,ಯಾವ ರೀತಿಯ ಶುಭಫಲಗಳನ್ನು ಒದಗಿಸುತ್ತವೆ ಎಂಬುದನ್ನು ತಿಳಿಯುವುದಾದರೆ ರಾಶಿಚಕ್ರಗಳ ಪ್ರಥಮ ರಾಶಿಯಾದ.
ಮೇಷ ರಾಶಿ: ಈ ರಾಶಿಯವರಿಗೆ 2021 ವರ್ಷದಿಂದ ಅದೃಷ್ಟ ಲಭಿಸುತ್ತದೆ, ಇವರಿಗೆ ಇಷ್ಟು ದಿನ ಇದ್ದಂತಹ ಅಳುಕು, ಭಯ ದೂರವಾಗಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವಿಶೇಷವಾಗಿ ನೀವು ಇತರರ ಪ್ರಭಾವಕ್ಕೆ ಒಳಗಾಗದೇ, ಇನ್ನು ಇವರು ಜೀವನದಲ್ಲಿ ಸ್ವಂತ ಶ್ರಮದಿಂದ ಯಶಸ್ಸು ಪಡೆಯುತ್ತಾರೆ. ಸೃಜನಾತ್ಮಕ ಕೆಲಸಗಳನ್ನು ಮಾಡಲು ಇದು ಸೂಕ್ತ ಸಮಯವಾಗಿದೆ.

ವೃಷಭ: ಈ ವೃಷಭ ರಾಶಿಯವರು, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಗಮನ ನೀಡಿ, ತಮ್ಮ ಭವಿಷ್ಯದ ಪ್ರಗತಿಯ ಬಗ್ಗೆ ಚಿಂತನೆ ನಡೆಸುತ್ತಾರೆ. ಈ ವರ್ಷ ನಿಮಗೆ ನೀವು ಆರಂಭಿಸಿದ ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತವೆ. ಸ್ವಯಂ ಉದ್ಯೋಗ ಮಾಡುತ್ತಿರುವವರಿಗೆ ನಿರೀಕ್ಷೆಗೂ ಮೀರಿ ಧನಲಾಭ ಆಗುತ್ತದೆ. ಕಂಡ ಕನಸುಗಳು ಈಡೇರುತ್ತವೆ, ಒಟ್ಟಾರೆಯಾಗಿ ಈ ವರ್ಷ ವೃಷಭ ರಾಶಿಯವರಿಗೆ ಅದೃಷ್ಟ ತಂದು ಕೊಡಲಿದೆ.
ತುಲಾ: ನಿಮ್ಮ ವ್ಯವಹಾರಗಳಲ್ಲಿ ಪ್ರಗತಿ ಕಂಡು ಬರುತ್ತದೆ. ಇದರಿಂದ ನೀವು ನಿಮ್ಮ ವ್ಯಾಪಾರ ವ್ಯವಹಾರವನ್ನು ವಿಸ್ತರಿಸಬಹುದಾಗಿದೆ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮ್ಮ ಮೇಲಾಧಿಕಾರಿಗಳಿಗೆ ತಿಳಿಯುತ್ತದೆ, ಜೊತೆಗೆ ನಿಮ್ಮ ಕಾರ್ಯ ಕ್ಷಮತೆ ತಿಳಿದು ಬಡ್ತಿ ನೀಡಬಹುದಾಗಿದೆ. ಯಾವುದೇ ಕಾರಣಕ್ಕೂ ಅಪರಿಚಿತ, ಅಥವಾ ಇತ್ತೀಚೆಗೆ ಸ್ನೇಹಿತರಾದ ಜನರನ್ನ ನಂಬಬೇಡಿ. ಇದರಿಂದ ನಿಮಗೆ ಆರ್ಥಿಕ ನಷ್ಟವಾಗಬಹುದು. ಅಂದು ಕೊಂಡ ಕೆಲಸ ಕಾರ್ಯಗಳು ನಿರ್ವಿಘ್ನದಿಂದ ನಡೆಯುತ್ತದೆ ಶುಭಫಲ ಯೋಗವಿದೆ.

ಕಟಕ: 2021ರ ವರ್ಷದಲ್ಲಿ ನಿಮ್ಮ ಉದ್ಯೋಗದಲ್ಲಿ ನಿಮಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಲ್ಲದಾಗಿದೆ, ನಿಮ್ಮ ಇಚ್ಚೆಗೆ ತಕ್ಕಂತೆ ಕೆಲಸ ಕಾರ್ಯಗಳು ನಡೆಯುತ್ತವೆ. ಇವರು ತಮ್ಮ ವ್ಯಕ್ತಿತ್ವ, ನಡವಳಿಕೆ, ಜ್ಞಾನದಲ್ಲಿ ಪ್ರಬುದ್ದತೆ ಪಡೆಯುತ್ತಾರೆ. ಅನಾರೋಗ್ಯದಿಂದ ಬಳಲುತ್ತಿದ್ದವರು ಚೇತರಿಕೆ ಕಂಡುಕೊಳ್ಳುತ್ತಾರೆ ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭವನ್ನು ಪಡೆಯಬಹುದಾಗಿದೆ ಮತ್ತು ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ಇಷ್ಟು ವರ್ಷಗಳ ಕಾಲ ಶ್ರಮಪಟ್ಟಿದಕ್ಕಾಗಿ ಉತ್ತಮ ಪ್ರತಿಫಲ ದೊರೆಯುತ್ತದೆ.

ವೃಶ್ಚಿಕ: ವೃಶ್ಚಿಕ ರಾಶಿಯವರು ಕಳೆದ ವರ್ಷಕ್ಕಿಂತ 2021ರ ವರ್ಷದಲ್ಲಿ ಹಲವಾರು ಶುಭಫಲಗಳನ್ನು ಹೊಂದಿರುತ್ತಾರೆ. ಇವರು ತೆಗೆದುಕೊಳ್ಳುವ ನಿರ್ಧಾರಗಳು ಜೀವನದ ದಿಕ್ಕನ್ನು ಬದಲಾಯಿಸುತ್ತದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬಂದಿದ್ದು,ಮದುವೆಯಾಗುವ ಯೋಗವಿದೆ. ಇನ್ನು ತಮ್ಮ ಸಂಗಾತಿಯ ಮೂಲಕ ಅದೃಷ್ಟ ಬರುತ್ತದೆ, ಧನ ಮೂಲಗಳು ಹೆಚ್ಚಾಗುತ್ತದೆ. ಜೀವನದಲ್ಲಿ ಬರುವ ಕೆಲವು ದೊಡ್ಡ ಸವಾಲುಗಳನ್ನು ಎದುರಿಸಿದ್ದೇ ಆದರೆ, ಅವರು ನಿರೀಕ್ಷೆಯು ಮಾಡದಂತಹ ಉತ್ಕೃಷ್ಟವಾದ ಸ್ಥಾನವನ್ನು ಪಡೆಯುತ್ತಾರೆ. ಇನ್ನು ಈ ರಾಶಿಯವರ ವೃತ್ತಿಪರರಿಗೆ ಸಾಕಷ್ಟು ಪ್ರಗತಿ ಕಾಣಬಹುದಾಗಿದೆ.