ಹೊಸ ವರ್ಷದಿಂದ ಈ ರಾಶಿಯವರಿಗೆ ಸಾಕಷ್ಟು ಅದೃಷ್ಟ ಹಾಗೂ ಅವಕಾಶವಿದೆ, ಸದುಪಯೋಗ ಪಡಿಸಿಕೊಳ್ಳಿ

ಮಕರ ರಾಶಿಯವರಿಗೆ 2021ರ ಹೊಸ ವರ್ಷದಿಂದ ಯಾವ ರೀತಿಯ ಫಲಾಫಲಗಳನ್ನು ಅನುಭವಿಸುತ್ತಾರೆ ಎಂಬುದನ್ನು ನೋಡುವುದಾದರೆ, ಏಪ್ರಿಲ್ ಆರರ ನಂತರ ಇವರಿಗೆ ಸಂಪೂರ್ಣ ಶುಭ ಯೋಗವಿದ್ದು ಈ ರಾಶಿಯ ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಕೊಂಚ ಅಡಚಣೆ ಉಂಟಾಗುತ್ತದೆ ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚು ಓದಿನ ಕಡೆ ಗಮನ ಹರಿಸಬೇಕಾಗುತ್ತದೆ. ವಿಧ್ಯಾಭ್ಯಾಸದಲ್ಲಿ ಕೊಂಚ ಶ್ರಮಸಿದರೆ ಉತ್ತಮ ಅಂಕಗಳನ್ನು ಗಳಿಸಬಹುದಾಗಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅದರಲ್ಲೂ ಯಂತ್ರಗಳು ಅಂದರೆ ಮೆಕ್ಯಾನಿಕಲ್ ಕ್ಷೇತ್ರದವರು ಹೆಚ್ಚು ಶ್ರಮ ಹಾಕಿ ಓದಬೇಕಾಗುತ್ತದೆ. ವರ್ಷಗಳ ಕೆಲಸ ಸಿಕ್ಕದೆ ನಿರುದ್ಯೋಗಿಯಾಗಿದ್ದವರಿಗೆ ಬಯಸಿದ ಉದ್ಯೋಗ ಸಿಗುತ್ತದೆ. ಉದ್ಯೋಗಕ್ಕಾಗಿ ದೂರದ ಊರಿಗೆ ಪ್ರಯಾಣ ಸಾಧ್ಯವಿರುತ್ತದೆ, ನಿಮಗೆ ವಿವಾಹವಾಗಲು ಇದು ಸೂಕ್ತ ಸಮಯವಾಗಿದ್ದು, ಮದುವೆಯ ನಂತರ ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಅದ್ಭುತವಾಗಿ ಯಶಸ್ಸು ಸಿಗುತ್ತದೆ.

ಇನ್ನು ನಿಮ್ಮ ಜೀವನದಲ್ಲಿ ಬರುವ ಬಾಳಸಂಗಾತಿಯ ಕಾಲ್ಗುಣ ಒಳ್ಳೆಯದಾಗಿರುತ್ತದೆ, ಇವರು ನಿಮ್ಮ ಜೀವನದಲ್ಲಿ ಅದೃಷ್ಟ ತರುತ್ತಾರೆ. ಇದರಿಂದ ವ್ಯಾಪಾರ ಉದ್ಯೋಗದಲ್ಲಿ ಉನ್ನತ ಅಧಿಕಾರ ಸಿಗುತ್ತದೆ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಧರ್ಮ, ಕರ್ಮಗಳನ್ನು ನೋಡಿ ಕೆಲಸ ಮಾಡುವುದರಿಂದ ನಿಮಗೆ ಅದೃಷ್ಟ ಲಭಿಸುತ್ತದೆ. ವಿಶೇಷವಾಗಿ ದೇವತಾದರ್ಶನ ಮಾಡುವುದರಿಂದ ನಿಮಗೆ ಅದೃಷ್ಟ ಕೂಡಿಬರುತ್ತದೆ.

ಈ ವರ್ಷ ವ್ಯಾಪಾರದಲ್ಲಿ ನಿಮಗೆ ಆದಾಯ ಕೂಡ ಹೆಚ್ಚಾಗುತ್ತದೆ. ಇನ್ನು ಪ್ರಸ್ತುತ ಇರುವ ಉದ್ಯೋಗದಲ್ಲಿ ಹೆಚ್ಚಿನ ಜವಬ್ದಾರಿ ಸಿಗುತ್ತದೆ, ಆದ್ದರಿಂದ ಜಾಗೃತವಾಗಿ ಕಾರ್ಯನಿರ್ವಹಿಸಿ ಕೆಟ್ಟಹೆಸರು ಬರುವ ಸಾಧ್ಯವಿರುತ್ತದೆ. ಅಹಂ ಮನೋಭಾವ ಇದ್ದರೆ ತ್ಯಜಿಸಿ, ಆದಷ್ಟು ವಿನಯವಂತಿಕೆ ಇದ್ದಷ್ಟು ಉನ್ನತ ಅಧಿಕಾರ ಸಿಗುತ್ತದೆ. ಅಧಿಕಾರ ದುರುಪಯೋಗ ಮಾಡುವುದರಿಂದ ನಿಮಗೆ ಸಂಕಷ್ಟ ಕಾಲ ಎದುರಾಗುತ್ತಿದೆ ಆದ್ದರಿಂದ ಧರ್ಮದಿಂದ ಕರ್ಮ ಅನುಸರಿಸಿ.

ಈ ವರ್ಷ ಮಕರ ರಾಶಿಯವರಿಗೆ ಹಣದ ಒಳ ಹರಿವು ಹೆಚ್ಚಾಗಿ, ಕೃಷಿ ಜಮೀನು ಖರೀದಿ, ವಾಹನ ಖರೀದಿ ಮಾಡುವ ಯೋಗವಿದೆ. ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿ ಲಭಿಸಿ ಜೀವನವು ಸುಖಮಯವಾಗಿ ಸುಗಮವಾಗಿ, ಸುಂದರವಾಗಿರುತ್ತದೆ. ಆದಷ್ಟು ನಿಮ್ಮ ನೇರನುಡಿ ವ್ಯಕ್ತಿತ್ವ ಬದಲಾಯಿಸಿಕೊಳ್ಳಿ ಇಲ್ಲವಾದಲ್ಲಿ ನಿಮ್ಮವರಿಂದ ನೀವು ತೊಂದರೆ ಅನುಭವಿಸಬಹುದು.

ನಿಮಗೆ ಈ ವರ್ಷ ಉತ್ತಮವಾದ ವ್ಯಕ್ತಿಗಳು ಪರಿಚಯವಾಗಿ ನಿಮ್ಮ ಆಪ್ತವಲಯ ಸೇರಿಕೊಳ್ಳುತ್ತಾರೆ. ಇವರೊಂದಿಗೆ ಉತ್ತಮವಾದ ಸ್ನೇಹ ಸಂಬಂಧವನ್ನು ಕಾಪಾಡಿಕೊಳ್ಳಿ ಅವರಿಂದ ನಿಮ್ಮ ಜೀವನದಲ್ಲಿ ಮಹತ್ತರವಾದ ಕೆಲಸ ಆಗುತ್ತದೆ. ಇರುವ ದೋಷ ಪರಿಹಾರಕ್ಕಾಗಿ ಶನಿಶಾಂತಿ ಮತ್ತು ನವಗ್ರಹ ಶಾಂತಿ ಮಾಡಿಸುವುದರಿಂದ ಶುಭವಾಗುತ್ತದೆ, ನೀಲಿ ಬಣ್ಣದ ಹರಳನ್ನು ನಿಮ್ಮ ಬಲಗೈ ಮಧ್ಯದ ಬೆರಳಿಗೆ ಹಾಕಿಕೊಂಡರೆ ಅದೃಷ್ಟ ನಿಮ್ಮದಾಗಿ ಉತ್ತಮವಾಗಿರುತ್ತದೆ.

%d bloggers like this: