ಹೊಸ ವರ್ಷಕ್ಕೆ ಈ 4 ರಾಶಿಯವರಿಗೆ ಗಜಕೇಸರಿ ಯೋಗವೇ ಕಾಯುತ್ತಿದೆ, ಅದೃಷ್ಟದ ಜೀವನ ನಿಮ್ಮದಾಗಲಿದೆ

ಹೊಸ ವರ್ಷಕ್ಕೆ ಈ ನಾಲ್ಕು ರಾಶಿಗಳಿಗೆ ಗಜಕೇಸರಿ ಯೋಗ ಬರುತ್ತದೆ. ಆದ್ದರಿಂದ ಗಜಕೇಸರಿ ಯೋಗ ಬರುವ ವ್ಯಕ್ತಿಗಳಿಗೆ ಯವುದಾದರೂ ದೋಷವಿದ್ದರೆ ತಕ್ಷಣ ಪರಿಹರಿಸಿಕೊಳ್ಳಿ ಇಲ್ಲವಾದರೆ ನಿಮ್ಮ ಪಾಲಿಗೆ ಗಜಕೇಸರಿ ಯೋಗ ಮುಚ್ಚಿದ ಬಾಗಿಲಾಗುತ್ತದೆ. ಹೌದು ಗಜಕೇಸರಿ ಯೋಗ ಬರುವುದು ದೋಷಮುಕ್ತ ಜಾತಕದವರಿಗೆ ಆದ್ದರಿಂದ ಯಾರಿಗೆ ದೋಷಗಳು ಇರುತ್ತದೆಯೋ ಅಂತಹವರು ತಮ್ಮ ದೋಷಗಳನ್ನು ಪರಿಹರಿಸಿಕೊಳ್ಳಬೇಕು. ಅಂದಹಾಗೆ 2021ವರ್ಷದ ಈ ಬಾರಿ ನಾಲ್ಕು ರಾಶಿಗಳಿಗೆ ಗಜಕೇಸರಿ ಯೋಗ ಪ್ರಾಪ್ತಿಯಾಗಲಿದೆ. ಈ ನಾಲ್ಕು ರಾಶಿಗಳಲ್ಲಿ ನಿಮ್ಮ ರಾಶಿಯೂ ಇರಬಹುದು ತಿಳಿದುಕೊಳ್ಳಿ.

ರಾಶಿ ಚಕ್ರದಲ್ಲಿ ಮೊದಲನೇಯದಾಗಿ ಬರುವ ರಾಶಿ, ಮೇಷ ರಾಶಿ ಈ ರಾಶಿಯವರಿಗೆ ಈ ಬಾರಿ ಗಜಕೇಸರಿ ಯೋಗ ಲಭಿಸಲಿದ್ಧು, ಈ ಮೇಷ ರಾಶಿಯವರಿಗೆ ಗುರು ಗ್ರಹವು ಹತ್ತನೆಯ ಮನೆಯಲ್ಲಿ ಸಂಚಾರ ಮಾಡುವುದರಿಂದ ಇವರಿಗೆ ಗಜಕೇಸರಿ ಯೋಗ ಪ್ರಾಪ್ತಿ, ಇವರಿಗೆ ತೀಕ್ಷ್ಣ ಬುದ್ದಿ ಇದ್ದು ಜ್ಞಾನ ವೃದ್ದಿಯಾಗುವಂತಿದೆ, ಅದಲ್ಲದೆ ಸಂಪತ್ತು ಅಭಿವೃದ್ದಿಯಾಗಿ ಸಮೃದ್ದವಾದ ಜೀವನ ಇವರಾದ್ದಾಗುತ್ತದೆ. ಎರಡನೆಯದಾಗಿ ತುಲಾ ರಾಶಿ ಅಥವಾ ತುಲಾ ಲಗ್ನ ಹೊಂದಿರುವವರು ಸಹ ಈ ಬಾರಿ ಗಜಕೇಸರಿ ಯೋಗ ದೊರೆಯುತ್ತದೆ. ಇವರ ರಾಶಿಯಲ್ಲಿ ನಾಲ್ಕನೇಯ ಮನೆಯಲ್ಲಿ ಗುರು ಸಂಚಾರವಾಗುತ್ತಿದೆ.

ಇವರಿಗೆ ಗಜಕೇಸರಿ ಯೋಗ ಬರುವುದರಿಂದ ಇವರು ಬಲಶಾಲಿ ಯಾಗುತ್ತಾರೆ, ಶತ್ರುಗಳನ್ನು ಸೋಲಿಸುವ ಶಕ್ತಿ ಸಾಮರ್ಥ್ಯ ಇವರದ್ದಾಗುತ್ತದೆ. ಮತ್ತು ಇವರ ಸಂಪತ್ತು ವೃದ್ದಿಯಾಗಿ ಆರ್ಥಿಕತೆ ಯಲ್ಲಿ ಪ್ರಗತಿ ಹೊಂದುತ್ತಾರೆ. ಇನ್ನು ಕಟಕ ರಾಶಿಯವರಿಗೂ ಕೂಡ ಗಜಕೇಸರಿ ಯೋಗ ಲಭಿಸಲಿದ್ದು ಇವರಿಗೂ ಸಹ ಧನಲಾಭ, ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ. ಜೊತೆಗೆ ಅನಾರೋಗ್ಯ ಸಮಸ್ಯೆವುಳ್ಳವರಿಗೆ ಆರೋಗ್ಯದಲ್ಲಿ ಚೇತರಿಕೆ ಕಂಡು ಕುಟುಂಬಸ್ಥರು, ಸ್ನೇಹಿತರು, ಬಂಧು ಬಳಗದವರಿಂದ ಆದಷ್ಟು ಬೆಂಬಲ ಪ್ರೋತ್ಸಾಹ ಪಡೆಯುತ್ತಾರೆ.

ಮಕರ ರಾಶಿಯವರಿಗೆ ಸಹ ಗಜಕೇಸರಿ ಯೋಗ ಪ್ರಾಪ್ತಿಯಾಗುತ್ತಿದ್ದು ಮಕರ ರಾಶಿಯವರಿಗೆ ಮನಸ್ಸಿನ ಗುಣಗಳನ್ನು ಆಧರಿಸಿ ಮತ್ತು ಮಕರ ಲಗ್ನದವರಿಗೆ ಶಾರೀರಿಕ ಗುಣಗಳನ್ನು ಆಧರಿಸಿ ಗಜಕೇಸರಿ ಯೋಗ ಲಭಿಸುತ್ತದೆ. ಇವರಿಗೆ ಐಷರಾಮಿ ಜೀವನ ನಡೆಸುವ ಅವಕಾಶ ದೊರೆಯುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನ, ಮಾನ, ಮನ್ನಣೆ ದೊರೆತು ಎಲ್ಲಾ ರೀತಿಯ ಗೌರವ ಆತಿಥ್ಯಗಳಿಗೆ ಭಾಗವಾಗುತ್ತಾರೆ.

ಇನ್ನು ಸಂಗೀತ, ಕಲೆ, ನಾಟ್ಯ ಕ್ಷೇತ್ರದಲ್ಲಿರುವವರಿಗೆ ಈ ಬಾರಿ ಅದೃಷ್ಟ ಲಭಿಸುತ್ತದೆ. ಒಟ್ಟಾರೆ ಯಾಗಿ ಈ ನಾಲ್ಕು ರಾಶಿಯವರಿಗೆ ಗಜಕೇಸರಿ ಯೋಗ ಪ್ರಾಪ್ತಿಯಾಗುತ್ತಿದೆ. ಈ ಗಜಕೇಸರಿ ಯೋಗಕ್ಕೆ ಯಾಕಿಷ್ಟು ಮಹತ್ವ ಎಂದರೆ ಗಜ ಮತ್ತು ಕೇಸರಿ, ಕೇಸರಿ ಅಂದರೆ ಸಿಂಹ, ಗಜ ಅಂದರೆ ಆನೆ ಇವೆರಡು ಸಹ ಯಾವ ರೀತಿಯಾಗಿ ಕಾಡಿನಲ್ಲಿ ಬಲಶಾಲಿಯಾಗಿರುವುದು ಹಾಗೆ ನಿಮ್ಮ ಜೀವನದಲ್ಲಿಯೂ ಸಹ ಶಕ್ತಿ ಸಾಮರ್ಥ್ಯ ಬಲಶಾಲಿ ಯಾಗುತ್ತೀರಿ ಎಂದು ಗಜಕೇಸರಿ ಯೋಗದ ಮಹತ್ವವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸುತ್ತಾರೆ.

%d bloggers like this: