ಹೊಸ ವರ್ಷಕ್ಕೆ ಹೊಚ್ಚ ಹೊಸ ಥಾರ್ ಜೀಪ್ ಖರೀದಿಸಿದ ಸುಪ್ರಸಿದ್ಧ ನಟಿ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ನೂತನ ಥಾರ್ ಎಸ್.ಯು.ವಿ ಕಾರು ಭಾರಿ ಜನಪ್ರಿಯತೆ ಪಡೆದುಕೊಂಡು ಸ್ಟಾರ್ ನಟ, ನಟಿಯರೆಲ್ಲಾ ಈ ಥಾರ್ ಎಸ್.ಯು.ವಿ ಕಾರನ್ನು ಖರೀದಿ ಮಾಡಲು ಮುಗಿಬೀಳುತ್ತಿದ್ದಾರೆ. ಆದರೆ ಈ ಮಹೀಂದ್ರಾ ಸಂಸ್ಥೆಯ ಥಾರ್ ಎಸ್.ಯು.ವಿ ಕಾರು ಮಾರುಕಟ್ಟೆಯಲ್ಲಿ ಅತ್ಯಧಿಕ ಬೇಡಿಕೆ ಹೊಂದಿರುವುದರಿಂದ ಉತ್ಪಾದನೆ ಮತ್ತು ವಿತರಣೆಯ ಸಮಸ್ಯೆ ಎದುರಾಗಿದೆ‌. ಸಾಮಾನ್ಯವಾಗಿ ಈ ಗಣ್ಯರು ಸೆಲೆಬ್ರಿಟಿಗಳು, ರಾಜಕೀಯ ವ್ಯಕ್ತಿಗಳಿಗೆ ಯಾವುದೇ ಕೆಲಸ ಕಾರ್ಯವಾದರು ಅವರ ಪ್ರಭಾವ ಬೀರಿ ಬೇಗ ಕೆಲಸ ಮಾಡಿಸಿಕೊಂಡು ಬಿಡುತ್ತಾರೆ‌. ಆದರೆ ಈ ಮಹೀಂದ್ರಾ ಸಂಸ್ಥೆಯ ಥಾರ್ ಎಸ್ಯುವಿ ಕಾರನ್ನು ಖರೀದಿ ಮಾಡಬೇಕು ಅಂದರೆ ಕನಿಷ್ಟ ಆರು ತಿಂಗಳು ಮುಂಚೆಯೇ ಅಡ್ವಾನ್ಸ್ ಬುಕ್ಕಿಂಗ್ ಮಾಡಬೇಕಾಗಿದೆ.

ಮಲಯಾಳಂ ಚಿತ್ರರಂಗದ ಪ್ರಖ್ಯಾತಿ ನಟಿಯೊಬ್ಬರು ಸಹ ಈ ಥಾರ್ ಎಸ್.ಯು.ವಿ ಕಾರನ್ನು ಖರೀದಿಸಲು ಎರಡು ತಿಂಗಳು ಮುಂಚೆ ಅಡ್ವಾನ್ಸ್ ಬುಕ್ಕಿಂಗ್ ಮಾಡಿದ್ದರು ಕೂಡ ಈ ಕಾರ್ ಪಡೆಯಲು ಅನಿವಾರ್ಯತೆ ಇದ್ದರಿಂದಾಗಿ ಹಲವು ದಿನಗಳವರೆಗೆ ಕಾಯಲೇಬೇಕಾಯಿತು.

ಇದೀಗ ನಟಿಯು ಮಹೀಂದ್ರಾ ಥಾರ್ ಎಸ್.ಯು.ವಿ ಕಾರ್ ವಿತರಣೆ ಪಡೆಯುತ್ತಿರುವುದನ್ನು ಎನ್.ಬಿ.ಟಿ.ವಿ ಅವರು ಲೈವ್ ಮುಖಾಂತರ ಸುದ್ದಿಮಾಡಿದ್ದರು, ಈ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.

ಹಾಗಾದರೆ ಈ ಮಹೀಂದ್ರಾ ಕಂಪನಿಯ ಎಸ್.ಯು.ವಿ ಥಾರ್ ಕಾರ್ ಖರೀದಿಸಿದ ಮಲಯಾಳಂನ ಆ ಖ್ಯಾತಿ ನಟಿ ಯಾರು ಗೊತ್ತಾ, ಹೌದು ಅವರು ಬೇರಾರು ಅಲ್ಲ ಮಲಯಾಳಂ ಚಿತ್ರರಂಗದ ಮೋಸ್ಟ್ ಬ್ಯುಸಿಯೆಸ್ಟ್ ನಟಿ ಯಾಗಿರುವ ‘ಅನುಸಿತಾರಾ’ ಅವರು ಈ ಥಾರ್ ಕಾರನ್ನು ಖರೀದಿಸಿದ್ದಾರೆ. ಇವರು ತಿರುವನಂತಪುರಂನಲ್ಲಿರುವ ಮಹೀಂದ್ರಾ ಕಂಪನಿಯಲ್ಲಿ ಈ ಥಾರ್ ಎಸ್.ಯು.ವಿ ಮಾದರಿಯ ಕಾರನ್ನು ವಿತರಣೆ ಪಡೆದರು. ನಂತರ ತಮ್ಮ ಪತಿ ಹಾಗೂ ಸ್ನೇಹಿತರೊಟ್ಟಿಗೆ ಕೇಕ್ ಕತ್ತರಿಸಿ ಕಾರ್ ತೆಗೆದುಕೊಂಡ ಖುಷಿ ಹಂಚಿಕೊಂಡರು.

ಸದ್ಯಕ್ಕೆ ನಟಿ ಅನುಸಿತಾರಾ ಕೇರಳದ ಪ್ರವಾಸಿತಾಣವಾದ ವಯನಾಡಿನಲ್ಲಿವಾಸಿಸುತ್ತಿದ್ದು, ಆ ವಾತಾವರಣದಲ್ಲಿ ರಸ್ತೆಯು ಸಂಪೂರ್ಣ ಆಫ್ ರೋಡ್ ರಸ್ತೆಗಳಾಗಿವೆ. ಈ ಮಹಿಂದ್ರಾ ಕಂಪನಿಯ ಥಾರ್ ಕಾರ್ ಇಂತಹ ಪರಿಸರಕ್ಕೆ ಹೇಳಿ ಮಾಡಿಸಿದಂತಹ ವಾಹನ ಆದ್ದರಿಂದ ಅನುಸಿತಾರಾ ಅವರು ಈ ಥಾರ್ ಎಸ್.ಯು.ವಿ ಕಾರನ್ನುಖರೀದಿಸಿರಬಹುದು. ಇನ್ನು ಮಹೀಂದ್ರಾ ಕಂಪನಿಯ ಥಾರ್ ಎಸ್.ಯು.ವಿ ನೂತನ ಕಾರು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದ್ದು, ಅಲಾರ್ ವ್ಹೀಲ್ ಒಳಗೊಂಡಿದೆ. ಜೊತೆಗೆ ಇಎಸ್.ಪಿ ಮತ್ತು ಎರಡು ಏರ್ ಬ್ಯಾಗ್ ಜೊತೆಗೆ ಎಬಿಎಸ್ ಬ್ರೇಕ್ ಸೇರಿದಂತೆ ಹತ್ತು ಹಲವು ವಿಶೇಷತೆಗಳನ್ನು ಈ ಥಾರ್ ಎಸ್ಯುವಿ ಒಳಗೊಂಡಿದೆ. ಈ ಎಸ್ಯುವಿ ಮಾದರಿ ಕಾರು ಮಾರುಕಟ್ಟೆಯಲ್ಲಿ ರೂ12.49ಲಕ್ಷಗಳಲ್ಲಿ ಮಾರಾಟವಾಗುತ್ತಿದ್ದು ಕಾರು ಪ್ರಿಯರು ಈ ಕಾರಿಗಾಗಿ ಅಡ್ವಾನ್ಸ್ ಬುಕ್ಕಿಂಗ್ ಮಾಡಿದ್ದಾರೆ, ಇನ್ನು ಹಲವು ಜನರಿಗೆ ಈ ಥಾರ್ ಎಸ್ಯುವಿ ಕಾರ್ ವೇಯ್ಟಿಂಗ್ ಲಿಸ್ಟ್ ನಲ್ಲಿ ಇರಿಸಿದೆ ಎನ್ನಬಹುದಾಗಿದೆ.

%d bloggers like this: