ಹೊಸ ವರ್ಷಕ್ಕೆ ಕರ್ನಾಟಕದಲ್ಲಿ ಹೊಸ ಜಿಲ್ಲೆ ಘೋಷಣೆ, ಯಾವ ಜಿಲ್ಲೆ ಗೊತ್ತೇ

ಹೊಸವರ್ಷಕ್ಕೆ ರಾಜ್ಯದಲ್ಲಿ ಹೊಸದೊಂದು ಜಿಲ್ಲೆ ಘೋಷಣೆ ಸಾಧ್ಯತೆ! ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಮೂವತ್ತು(30) ಜಿಲ್ಲೆಗಳು ಮತ್ತು 177 ತಾಲ್ಲೂಕು ನ್ನೊಳಗೊಂಡ ರಚನೆ ಹೊಂದಿದೆ. ಆದರೆ ಇದೀಗ ಸರ್ಕಾರ ಹೊಸದೊಂದು ಜಿಲ್ಲೆಯನ್ನು ಘೋಷಣೆ ಮಾಡುವ ಇಂಗಿತ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಪ್ರಮುಖ ಜಿಲ್ಲೆಗಳಲ್ಲಿ ಬಳ್ಳಾರಿ ಜಿಲ್ಲೆಯು ಸಹ ಒಂದಾಗಿದ್ದು ಈ ಜಿಲ್ಲೆಯು ಹಂಪಿಯ ದೆವಾಲಯಗಳು ಮತ್ತು ವಿಜಯನಗರ ಸಾಮ್ರಾಜ್ಯದ ಅವಶೇಷಗಳಿಂದ ಪ್ರಸಿದ್ದಿ ಪಡೆದಿದೆ. ಬಳ್ಳಾರಿ ಜಿಲ್ಲೆಯಲ್ಲಿ ಮೂರು ಉಪವಿಭಾಗಗಳಿದ್ಧು ಬಳ್ಳಾರಿ ನಗರವನ್ನು ಸೇರಿದಂತೆ ಹನ್ನೊಂದು ತಾಲ್ಲುಕುಗಳು ಹೊಂದಿದೆ, ಬಳ್ಳಾರಿ ಜಿಲ್ಲೆಯ ಅಭಿವೃದ್ದಿ ಮತ್ತು ನಿರ್ವಹಣೆಯ ದೃಷ್ಟಿಯಿಂದ ಬಳ್ಳಾರಿ ಜಿಲ್ಲೆಯನ್ನು ಎರಡುಭಾಗವಾಗಿ ಬೇರ್ಪಡಿಸಿ ವಿಜಯನಗರವನ್ನು ನೂತನ ಜಿಲ್ಲೆಯನ್ನಾಗಿ ಮಾಡುವ ಯೋಚನೆ ಸರಕಾರದ ಮುಂದಿದ್ದು ಮುಂದಿನ ದಿನಗಳಲ್ಲಿ ಇದಕ್ಕೊಂದು ಸಮಿತಿ ರಚನೆಮಾಡಿ ನಿರ್ಧಾರ ಕೈಗೊಳ್ಳತ್ತೇವೆ ಎಂದು ಕಾನೂನು ಸಚಿವ ಮಾಧುಸ್ವಾಮಿ ವಿಷಯ ಪ್ರಸ್ತಾಪ ತಿಳಿಸಿದ್ದಾರೆ. ಈ ವಿಚಾರವಾಗಿ ಬಹುದಿನಗಳಿಂದ ಬೇಡಿಕೆ ಬರುತ್ತಿದ್ದರೂ ಸಹ ಇದೀಗ ವಿಭಜನೆಯ ಪ್ರಸ್ತಾವ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಮಾಡಿ ಮುಂದಿನವಾರ ಸಮಿತಿಯೊಂದನ್ನು ರಚನೆ ಮಾಡುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

%d bloggers like this: