ಹೊಸ ವರ್ಷಕ್ಕೆ ಸಿಗುತ್ತಿದೆ ಈ ಮೊಬೈಲುಗಳ ಮೇಲೆ ಒಳ್ಳೆಯ ಡಿಸ್ಕೌಂಟ್

2022ರ ಹೊಸ ವರ್ಷಕ್ಕೆ ಆಕರ್ಷಕ ರಿಯಾಯಿತಿ ದರದಲ್ಲಿ ಮೊಬೈಲ್ ಮಾರಾಟ ಮಾಡುತ್ತಿದೆ ಆನ್ಲೈನ್ ಮಾರಾಟ ದಿಗ್ಗಜ ಸಂಸ್ಥೆಯಾಗಿರುವ ಅಮೆಜಾ಼ನ್! ಭಾರತದಲ್ಲಿ ಅನೇಕ ಹಬ್ಬ ಆಚರಣೆಗಳು ನಡೆಯುತ್ತವೆ. ಬಹು ಸಂಸ್ಕೃತಿಯ ತಾಣವಾಗಿರುವ ಭಾರತದಲ್ಲಿ ವ್ಯಾಪಾರ ವ್ಯವಹಾರಕ್ಕೆ ಹೇಳಿ ಮಾಡಿಸಿದಂತೆ ಇರುತ್ತದೆ. ಅದರಲ್ಲಿಯೂ ಹಬ್ಬ ಹರಿ ದಿನಗಳಲ್ಲಿ ಸಾಮಾನ್ಯವಾಗಿ ವಾಣಿಜ್ಯ ವ್ಯಾಪಾರ ಚಟುವಟಿಕೆಗಳು ಭರ್ಜರಿಯಾಗಿ ನಡೆಯುತ್ತವೆ. ಅದರಲ್ಲಿಯೂ ಕೂಡ ಈ ಟೆಲಿಕಾಂ ಕ್ಷೇತ್ರದಲ್ಲಂತೂ ಭಾರಿ ವಹಿವಾಟು ನಡೆಯುತ್ತವೆ. ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿ ಹೋಗಿರುವ ಮೊಬೈಲ್ ಗಳ ಪ್ರಿಯರು ಹೊಸ ವರ್ಷನ್ ಬಂತೆಂದರೆ ಸಾಕು ಹಳೆಯ ಫೋನ್ ಬಿಸಾಕಿ ಹೊಸ ವರ್ಷಕ್ಕೆ ಹೊಸ ಫೋನ್ ಖರೀದಿ ಮಾಡಲು ಉತ್ಸುಕರಾಗುತ್ತಾರೆ. ಆಫ್ ಲೈನ್ ನಲ್ಲಿ ಕೊಳ್ಳುವವರಷ್ಟೇ ಆನ್ಲೈನ್ ನಲ್ಲಿ ಖರೀದಿ ಮಾಡುವವರ ಸಂಖ್ಯೆ ಕೂಡ ಅಷ್ಟೇ ಇದೆ.

ಆನ್ಲೈನ್ ದಿಗ್ಗಜ ಅಂದರೆ ಅದು ಅಮೆಜಾ಼ನ್ ಸಂಸ್ಥೆ. ಹೊಸ ವರ್ಷದ ಪ್ರಯುಕ್ತ ಹೊಸ ಹೊಸ ಮೊಬೈಲ್ ಗಳ ಜೊತೆಗೆ ಬ್ರ್ಯಾಂಡೆಡ್ ಕಂಪನಿಗಳ ಮೊಬೈಲ್ ಗಳಿಗೆ ಆಕರ್ಷಕ ರಿಯಾಯಿತಿ ನೀಡಿ ಗ್ರಾಹಕರನ್ನ ಆಕರ್ಷಣೆ ಮಾಡುತ್ತಿದೆ. ಅಂತೆಯೇ ಇದೀಗ ಅಮೆಜಾ಼ನ್ ಕಂಪನಿಯು ಈ ಐದು ಸ್ಮಾರ್ಟ್ ಫೋನ್ ಗಳಿಗೆ ಭಾರಿ ರಿಯಾಯಿತಿ ನೀಡುತ್ತಿದೆ. ಸ್ಪೆಷಲ್ ಡಿಸ್ಕೌಂಟ್ ಪಡೆದಿರುವ ಆ ಐದು ಮೊಬೈಲ್ ಗಳ ಪೈಕಿ ಮೊದಲನೇಯದಾಗಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ32 ಸ್ಮಾರ್ಟ್ ಫೋನ್. ಈ ಫೋನ್ 2400/1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.4 ಇಂಚಿನ ಸಂಪೂರ್ಣ ಎಚ್.ಡಿ ಪ್ಲಸ್ ಡಿಸ್ ಪ್ಲೇಯನ್ನ ಹೊಂದಿದೆ. ಇದು 6ಜಿಬಿ ರ್ಯಾಮ್ ಮತ್ತು 128ಜಿಬಿ ಸಂಗ್ರಹ ಸಾಮರ್ಥ್ಯವನ್ನೊಂದಿದೆ.

6000 ಎಂಎಎಚ್ ಕೆಪಾಸಿಟಿ ಇರುವ ಬ್ಯಾಟರಿಯೊನ್ನೊಂದಿದೆ. ಅಮೆಜಾ಼ನ್ ಅಲ್ಲಿ ಇದರ ರಿಯಾಯಿತಿ ಬೆಲೆಯು 20.999 ರೂನಷ್ಟಿದೆ. ಅದೇ ರೀತಿಯಾಗಿ ಸ್ಯಾಮ್ಸಂಗ್ ಎಂ12 ಸ್ಮಾರ್ಟ್ ಫೋನ್ ಕೂಡ ರಿಯಾಯತಿ ದರದಲ್ಲಿ ಸಿಗುತ್ತಿದ್ದು, ಇದರ ಫೀಚರ್ ನೋಡುವುದಾದರೆ 4ಜಿಬಿ ರ್ಯಾಮ್ ಪ್ಲಸ್ 64 ಜಿಬಿ ಮತ್ತು 6ಜಿಬಿ ರ್ಯಾಮ್ ಪ್ಲಸ್ 128 ಜಿಬಿ ವೇರಿಯೆಂಟ್ ಆಯ್ಕೆ ಇದೆ. ಇದು 48 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಹೊಂದಿದೆ. 6000 ಎಂಎಎಚ್ ಸಾಮರ್ಥ್ಯ ಹೊಂದಿರುವ ಬ್ಯಾಟರಿಯನ್ನೊಂದಿದೆ. ರಿಯಾಯತಿ ದರದಲ್ಲಿ ಇದರ ಬೆಲೆಯು 13.499 ರಷ್ಟಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ21 2021 ಸ್ಮಾರ್ಟ್ ಫೋನ್ 1080/2340 ಪಿಕ್ಸಲ್ ರೆಸಲ್ಯೂಶನಿನ 6.4 ಇಂಚಿನ ಫುಲ್ ಎಚ್.ಡಿ ಪ್ಲಸ್ ಜೊತೆಗೆ ಇನ್ ಫಿನಿಟಿ ಸೂಪರ್ ಅಮ್ಲೋಡ್ ಡಿಸ್ಪ್ಲೇ ಹೊಂದಿದ್ದು.

6ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಜೊತೆಗೆ 4ಜಿಬಿ ರ್ಯಾಮ್ 64 ಜಿಬಿ ಸ್ಟೋರೇಜ್ ಹೊಂದಿರುವ ಎರಡು ವೇರಿಯೆಂಟ್ ಗಳ ಸ್ಮಾರ್ಟ್ ಫೋನ್ ಇವೆ. ಈ ಸ್ಯಾಮ್ಸಂಗ್ ಎಂ21 ಫೋನ್ ಬೆಲೆಯು 12,999 ರೂಗಳದ್ದಾಗಿದೆ. ಇನ್ನು ರೆಡ್ಮಿ ನೋಟ್ 10ಎಸ್ ಸ್ಮಾರ್ಟ್ ಫೋನ್ 1080/2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.43 ಇಂಚಿನ ಅಮ್ಲೋಡ್ ಫುಲ್ ಎಚ್ ಡಿ ಡಿಸ್ ಪ್ಲೇಯನ್ನ ಹೊಂದಿದೆ. ಇದರಲ್ಲಿ 13ಮೆಗಾ ಫಿಕ್ಸೆಲ್ ಸೆಲ್ಫಿ ಕ್ಯಾಮೆರವನ್ನು ಸಹ ಒಳಗೊಂಡಿದೆ. 5000 ಎಂಎಎಚ್ ಸಾಮರ್ಥ್ಯ ಬ್ಯಾಟರಿಯನ್ನೊಳಗೊಂಡಿದೆ. ಇದರಲ್ಲಿ 4 ಜಿಬಿ ರ್ಯಾಮ್ ಮತ್ತು 128 ಜಿಬಿ ಸಂಗ್ರಹ ಸಾಮರ್ಥ್ಯವನ್ನು ನೋಡಬಹುದಾಗಿರುತ್ತದೆ. ಅಮೆಜಾ಼ನ್ ರಿಯಾಯಿತಿ ದರದಲ್ಲಿ 12.499 ರೂಗಳಿಗೆ ಲಭ್ಯವಿದೆ. ಈ ರಿಯಲ್ ಮಿ ನಾರ್ಜೋ 5 ಎ ಸ್ಮಾರ್ಟ್ ಫೋನ್ ಕೂಡ 6000 ಎಂಎಎಚ್ ಬ್ಯಾಟರಿ ಮತ್ತು 18ಡಬ್ಲ್ಯೂ ವೇಗದ ಚಾರ್ಜಿಂಗ್ ಫೀಚರ್ ಒಳಗೊಂಡಿದೆ.

%d bloggers like this: