ಹೊಸ ವರ್ಷ ಬಂತು ಎಂದರೆ ಸಾಕು ಪ್ರತಿಯೊಬ್ಬರ ತಲೆಯಲ್ಲಿ ಈ ವರ್ಷ ಹೇಗೆ ಆಚರಣೆ ಮಾಡಬೇಕು ಎಂಬ ವಿಚಾರಗಳು ಓಡಾಡಲು ಶುರು ಮಾಡುತ್ತವೆ. ಯುವಕರ ಗುಂಪಂತು ಯಾವ ಸ್ಥಳಕ್ಕೆ ಹೋಗಬೇಕು ಏನು ಮಾಡಬೇಕು ಹೇಗೆ ಎಂಜಾಯ್ ಮಾಡಬೇಕು ಎಂದು ವಾರಗಟ್ಟಲೆ ಚರ್ಚೆ ಮಾಡುವದು ಇದೆ. ಜನ ಸಾಮಾನ್ಯರೆ ಹೀಗೆಲ್ಲಾ ಯೋಚನೆ ಮಾಡಬೇಕಾದರೆ ಇನ್ನು ಸೆಲೆಬ್ರಿಟಿ ಗಳು ಎಷ್ಟು ಯೋಜನೆ ಮಾಡಬೇಡ ಹೇಳಿ. ಅದರಲ್ಲೂ ಬಾಲಿವುಡ್ ಮಂದಿಗೆ ಮೋಜು ಮಾಸ್ತಿ ಎಂದರೆ ಬಲು ಇಷ್ಟ.

ಹಾಗಾಗಿಯೇ ಅವರು ಬೇರೆ ಬೇರೆ ದೇಶದ ಪ್ರಖ್ಯಾತ ಸ್ಥಳಗಳಿಗೆ ಹೋಗಿ ಹೊಸ ವರ್ಷವನ್ನು ಭರ್ಜರಿಯಾಗಿ ಬರ ಮಾಡಿಕೊಳ್ಳುತ್ತಾರೆ. ಬಾಲಿವುಡ್ ನಲ್ಲಿ ಹಲವು ಸಿನಿ ದಂಪತಿಗಳಿವೆ ಅದರಲ್ಲಿ ತುಂಬಾ ಫೇಮಸ್ ಕಪಲ್ ಎಂದರೆ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿ. ಈ ಜೋಡಿ ಏನೇ ಮಾಡಿದರು ಅದು ವಿಶೇಷತೆಯಿಂದ ಕೂಡಿರುತ್ತದೆ. ವರ್ಷಪೂರ್ತಿ ಕತ್ತಲೆಯಲ್ಲಿ ಕಳೆದಂತಾಗಿರುವ ಈ ವರ್ಷವನ್ನು ಖುಷಿಯಿಂದ ಮರೆತು ಹೊಸ ವರ್ಷ ಸ್ವಾಗತಿಸಲು ರಣವೀರ್ ದೀಪಿಕ ಜೋಡಿ ಇದೀಗ ವಿದೇಶಕ್ಕೆ ಹಾರಿದ್ದು ಈ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.

ಮಂಗಳವಾರ ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಈ ಸ್ಟಾರ್ ಜೋಡಿ ವಿದೇಶಕ್ಕೆ ಹಾರಲು ಸಜ್ಜಾಗಿ ಬಂದಿದ್ದರು. ಆದರೆ ಯಾವ ದೇಶಕ್ಕೆ ಈ ಜೋಡಿ ಹೋಗಿದೆ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ, ಒಟ್ಟಾರೆ ಬಹುತೇಕ ಮನೆಯಲ್ಲೇ ಕಳೆದ ಈ ಅಸಾಮಾನ್ಯ ವರ್ಷಕ್ಕೆ ತೆರೆ ಎಳೆದು ಹೊಸ ಆಶಯಗಳೊಂದಿಗೆ 2021 ಅನ್ನು ಸ್ವಾಗತಿಸಲು ಸ್ಟಾರ್ ಜೋಡಿ ಕಾಯುತ್ತಿದೆ ಮತ್ತು ಹೊಸ ವರ್ಷಕ್ಕೆ ಭರ್ಜಯಾಗಿ ಚಾಲನೆ ನೀಡಲಿದೆ.