ಹೊಸ ವಿಶಿಷ್ಟ ಪಾತ್ರದಲ್ಲಿ ಮೊದಲ ಬಾರಿಗೆ ನಟಿ ಆಶಿಕಾ ರಂಗನಾಥ್

ಸ್ಯಾಂಡಲ್ ವುಡ್ ಬಹು ನಿರೀಕ್ಷಿತ ಸಿನಿಮಾ ಮದಗಜ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಅಗಿದೆ. ಇದೇ ಡಿಸೆಂಬರ್ 3 ರಂದು ರಾಜ್ಯಾದ್ಯಂತ ಮದಗಜನ ಘರ್ಜನೆ ಶುರುವಾಗಲಿದೆ. ಈಗಾಗಲೇ ಟೀಸರ್, ಟ್ರೇಲರ್ ಮೂಲಕ ಸಖತ್ ಸೌಂಡ್ ಮಾಡುತ್ತಿರುವ ಮದಗಜ ಚಿತ್ರದ ಬಗ್ಗೆ ಶ್ರೀ ಮುರುಳಿ ಫ್ಯಾನ್ಸ್ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು ಮದಗಜ ಚಿತ್ರದ ನಾಯಕಿ ನಟಿ ಆಶಿಕಾ ರಂಗನಾಥ್ ಇದೇ ಮೊದಲ ಬಾರಿಗೆ ಅಪ್ಪಟ್ಟ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯದ ಮಟ್ಟಿಗೆ ತಮ್ಮ ಬ್ಯೂಟಿ, ಡ್ಯಾನ್ಸ್ ಮತ್ತು ಮುದ್ದಾದ ನಟನೆಯಿಂದ ಸ್ಯಾಂಡಲ್ ವುಡ್ ನ ಸಖತ್ ಹಾಟ್ ಫೇವರೇಟ್ ನಟಿಯಾಗಿರುವ ಆಶಿಕಾ ರಂಗನಾಥ್ ಅವರಿಗೆ ಈ ಸಿನಿಮಾದ ಮೂಲಕ ಹಳ್ಳಿ ಜೀವನ ಮತ್ತು ಕೃಷಿಯ ಕಷ್ಟ-ನಷ್ಟಗಳ ಬಗ್ಗೆ ಅರಿವಾಗಿದೆಯಂತೆ.

ಮದಗಜ ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿದ್ದೇನೆ. ಈ ಪಾತ್ರದ ಮೂಲಕ ನನಗೆ ಕೃಷಿ ಅಂದುಕೊಂಡಷ್ಟು ಸುಲಭವಲ್ಲ. ಅದರಲ್ಲಿ ತೊಡಗಿಕೊಳ್ಳುವುದು ಅಂದರೆ ಬಾಯಿ ಮಾತಿನಲ್ಲಿ ಹೇಳೋದಷ್ಟಲ್ಲ. ನಾನು ಈ ಪಾತ್ರ ಮಾಡುತ್ತಾ ಟ್ರ್ಯಾಕ್ಟರ್ ಓಡಿಸುವುದನ್ನ ಕೂಡ ಕಲಿತಿದ್ದೇನೆ, ಇನ್ನು ಈ ಮದಗಜ ಚಿತ್ರದಲ್ಲಿ ಯೂಥ್ಸ್ ಗೆ ಒಂದು ಉತ್ತಮವಾದ ಮೆಸೆಜ್ ಕೂಡ ಇದೆ ಎಂದು ಮದಗಜ ಚಿತ್ರದ ತಮ್ಮ ಅನುಭವವನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದಾರೆ.

ಇನ್ನು ಈಗಾಗಲೇ ಬಿಡುಗಡೆಯಾಗಿದ್ದ ಮದಗಜ ಚಿತ್ರದ ಪೋಸ್ಟರ್ ವೊಂದರಲ್ಲಿ ನಟಿ ಆಶಿಕಾ ರಂಗನಾಥ್ ಅವರು ಕುಡುಗೋಲು, ಸೊಪ್ಪಿನ ಬುಟ್ಟಿ, ಮೌಟಿ ಹಿಡಿದು ಪಕ್ಕ ಹಳ್ಳಿ ಹಡುಗಿಯ ಉಡುಗೆ ತೊಡಗೆ ತೊಟ್ಟು ಪೋಸ್ ನೀಡಿದ್ದ ಪೋಟೋಗಳು ಸಿನಿ ಪ್ರೇಕ್ಷಕರಿಗೆ ಇಷ್ಟವಾಗಿ ಸಖತ್ ವೈರಲ್ ಆಗಿದ್ದವು. ಇದೇ ಮೊದಲ ಬಾರಿಗೆ ಶ್ರೀ ಮುರುಳಿ ಅವರೊಂದಿಗೆ ತೆರೆ ಹಂಚಿಕೊಂಡಿರುವ ಆಶಿಕಾ ರಂಗನಾಥ್ ಅವರು ಸಖತ್ ಎಕ್ಸೈಟ್ ಆಗಿದ್ದು, ಈಗಾಗಲೇ ಇವರಿಬ್ಬರ ಜೋಡಿ ಟೀಸರ್ ಟ್ರೇಲರ್ ನಲ್ಲಿ ಆಕರ್ಷಕವಾಗಿ ಮೂಡಿ ಬಂದಿದೆ. ಅಯೋಗ್ಯ ಸಿನಿಮಾ ಖ್ಯಾತಿಯ ನಿರ್ದೇಶಕ ಮಹೇಶ್ ಕುಮಾರ್ ಮದಗಜ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಉಮಾಪತಿ ಶ್ರೀನಿವಾಸ್ ಗೌಡ ಬಂಡವಾಳ ಹೂಡಿದ್ದಾರೆ.

ಮದಗಜ ಚಿತ್ರದಲ್ಲಿ ಕೆಜಿಎಫ್ ಚಿತ್ರದ ಮೂಲಕ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಆಗಿರುವ ರವಿ ಬಸ್ರೂರ್ ಅವರ ಸಂಗೀತ ಈಗಾಗಲೇ ಸಖತ್ ಸೌಂಡ್ ಮಾಡುತ್ತಿದೆ. ಜೊತೆಗೆ ನವೀನ್ ಕುಮಾರ್ ಅವರ ಕ್ಯಾಮಾರಾ ಕೈ ಚಳಕ ಕೂಡ ಟ್ರೇಲರ್ ನಲ್ಲಿ ಎದ್ದು ಕಾಣುತ್ತಿದೆ. ಮದಗಜ ಚಿತ್ರದ ಮುಖ್ಯಭೂಮಿಕೆಯಲ್ಲಿ ಶ್ರೀ ಮುರುಳಿ, ಅಶಿಕಾ ರಂಗನಾಥ್, ಟಾಲಿವುಡ್ ಸ್ಟಾರ್ ಖಳ ನಟ ಜಗಪತಿ ಬಾಬು, ಚಿಕ್ಕಣ್ಣ, ರಾಮಚಂದ್ರ ರಾಜು, ರಂಗಾಯಣ ರಘು, ಶಿವರಾಜ್ ಕೆ.ಆರ್.ಪೇಟೆ ಮತ್ತು ದೇವಯಾನಿ ಬಣ್ಣ ಹಚ್ಚಿದ್ದಾರೆ.

%d bloggers like this: