ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ನಾವು ಹೀಗೆ ಕಾಣಬೇಕು ಹಾಗೆ ಕಾಣಬೇಕು, ನಮ್ಮ ಹೊಟ್ಟೆ ಸ್ಲಿಮ್ ಆಗಿರಬೇಕು ಚರ್ಮ ನುಣುಪಾಗಿರಬೇಕು ಈ ತರಹದ ಅನೇಕ ಆಸೆಗಳಿರುತ್ತವೆ. ಹಾಗೂ ಅವುಗಳು ಈ ವಯಸ್ಸು ಆ ವಯಸ್ಸು ಎನ್ನದೆ ಎಲ್ಲರಲ್ಲೂ ಇರುವುದು ಸಹಜ. ಇದಕ್ಕಾಗಿ ಕೆಲವರು ಅನೇಕ ರೀತಿಯ ಕಷ್ಟಗಳನ್ನು ಪಡುತ್ತಾರೆ. ಆದರೆ ಅಷ್ಟೆಲ್ಲ ಕಷ್ಟಪಡುವ ಅವಶ್ಯಕತೆ ಇಲ್ಲ. ಮನೆಯಲ್ಲಿ ಮಾಡಬಹುದಾದ ಈ ಮಾರ್ಗದರ್ಶನ ಪಾಲಿಸಿ ಸಾಕು. ಒಂದು ಪಾತ್ರೆಯಲ್ಲಿ ಒಂದು ಲೋಟದಷ್ಟು ನೀರನ್ನು ಹಾಕಿ ಅದಕ್ಕೆ ಅರ್ಧ ಚಮಚದಷ್ಟು ಕೊತ್ತಂಬರಿ ಬೀಜಗಳನ್ನು ಹಾಕಿ ಚೆನ್ನಾಗಿ ಕುದಿಸಿರಿ ಮತ್ತು ಇದನ್ನು ಪ್ರತಿದಿನ ಬೆಳಗ್ಗೆ ಇಲ್ಲವೆಂದರೆ ವಾರಕ್ಕೆ ಮೂರು ಬಾರಿಯಾದರೂ ಕುಡೀರಿ. ಇದರಲ್ಲಿ ಕಬ್ಬಿಣ ಮೆಗ್ನೀಷಿಯಂ ಹಾಗೂ ಫೋಲಿಕ್ ಆಸಿಡ್ ಇದೆ.
ಜೊತೆಗೆ ಈ ಮಿಶ್ರಣದಲ್ಲಿ ವಿಟಮಿನ್ ಸಿ ಇದ್ದು ದೇಹದಲ್ಲಿ ಇರತಕ್ಕಂಥ ಎಲ್ಲ ಕಲ್ಮಶಗಳನ್ನು ದೂರಮಾಡುತ್ತದೆ ಮತ್ತು ಇದರಿಂದ ದೇಹದ ತೂಕ ಕಡಿಮೆಯಾಗುತ್ತದೆ ಜೊತೆಗೆ ಬೊಜ್ಜು ಕೂಡ ಕರಗುತ್ತದೆ. ಇದರ ಜೊತೆಗೆ ಇನ್ನೊಂದು ಉಪಾಯವೇನೆಂದರೆ ಒಂದು ಗ್ಲಾಸ್ ಬಿಸಿ ನೀರಿಗೆ ಅರ್ಧ ಚಮಚೆ ಜೀರಿಗೆ ಹಾಕಿ ಅದನ್ನು ಕುದಿಸಿ ನಾವು ಸೇವಿಸುವುದರಿಂದ ನಮ್ಮ ದೇಹದಲ್ಲಿ ಪ್ರಚನ ಶಕ್ತಿ ಅಧಿಕವಾಗಿ ಊಟ ಮಾಡಿದಂತಹ ಆಹಾರ ಬೇಗನೆ ಜೀರ್ಣಿಸಲ್ಪಡುತ್ತದೆ ಇದರಿಂದ ಬೊಜ್ಜು ಕೂಡ ಬಾರದೆ ಹೊಟ್ಟೆ ಯಾವಾಗಲೂ ಸ್ಲಿಮ್ ಆಗಿರುತ್ತದೆ.