ಹೃತಿಕ್ ಸಿನಿಮಾ ನೋಡಿ ಸ್ಪೂರ್ತಿಗೊಂಡು ಈ ವ್ಯಕ್ತಿ ಮಾಡಿದ್ದೇನು ಗೊತ್ತೆ, ತಪ್ಪದೇ ಓದಿ

ನಮ್ಮ ದೇಶದಲ್ಲಿ ಕೆಲವು ಜನರು ಸಿನಿಮಾಗಳನ್ನು ಮತ್ತು ಅದರಲ್ಲಿನ ಸಿನಿಮೀಯ ಘಟನೆಗಳನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಪರದೆಯ ಮೇಲೆ ನಡೆಯುವ ಘಟನೆಗಳಿಗೂ ಮತ್ತು ತಮ್ಮ ಜೀವನಕ್ಕೆ ಹೋಲಿಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ತಮ್ಮಿಷ್ಟದ ನಾಯಕ ನಟನನ್ನು ಆರಾಧಿಸುವ ಬಹು ದೊಡ್ಡ ವರ್ಗವೇ ನಮ್ಮ ದೇಶದಲ್ಲಿದೆ.

ಹೌದು ಇದೇ ರೀತಿ ಇಲ್ಲಿ ಒಬ್ಬ ವ್ಯಕ್ತಿ ಹೃತಿಕ್ ಅಭಿನಯದ ಒಂದು ಸಿನಿಮಾವನ್ನು ನೋಡಿ ಸ್ಫೂರ್ತಿಯಾಗಿ‌ ತೆಗೆದುಕೊಂಡು ಮಾಡಬಾರದ ಕೆಲಸಗಳನ್ನು ಮಾಡಿದ್ದಾನೆ. ಹೌದು ಹೃತಿಕ್ ರೋಷನ್ ತಮ್ಮ ಧೂಮ್ 2 ಚಿತ್ರದಲ್ಲಿ ಪೊಲೀಸರಿಗೆ ಮಣ್ಣುಮುಕ್ಕಿಸಿ ದರೋಡೆ ಮಾಡುವ ದೃಶ್ಯಗಳು ನಿಮ್ಮೆಲ್ಲರಿಗೂ ಗೊತ್ತೇ ಇದೆ.

ಇದನ್ನು ಗಾಜಿಯಾಬಾದ್ ನ ರಘು ಕೋಸ್ಲಾ ಎಂಬ ವ್ಯಕ್ತಿ ಸ್ಪೂರ್ತಿಯಾಗಿ ತೆಗೆದುಕೊಂಡು ಜೀವನದಲ್ಲಿ ಕಳ್ಳತನ ಮಾಡುವುದನ್ನು ರೂಢಿಸಿಕೊಂಡಿದ್ದಾನೆ. ಸಿನಿಮಾದಲ್ಲಿ ಹೃತಿಕ್ ರೋಷನ್ ಮಾಡುವ ರೀತಿಯಲ್ಲಿಯೇ ಶತಾಬ್ದಿ ಮುತ್ತು ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ದರೋಡೆ ಮಾಡುತ್ತಿದ್ದನು.

ಆದರೆ ಐಷಾರಾಮಿ ಕಾರೊಂದನ್ನು ದರೋಡೆ ಮಾಡಲು ಹೋಗಿ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ, ಸ್ವತಃ ಈ ವಿಷಯಗಳನ್ನ ಸದ್ಯಕ್ಕೆ ಆರೋಪಿಯಾಗಿರುವ ರಘು ಕೋಸ್ಲಾ ಎಂಬಾತನೇ ತಿಳಿಸಿದ್ದಾನೆ. ನೋಡಿ ಸಿನಿಮಾವನ್ನು ಸಿನಿಮಾ ಆಗಿಯೇ ನೋಡಬೇಕೆ ಹೊರತು ನೈಜವಾಗಿ ಅಲ್ಲ ಎಂಬುದನ್ನ ಈ ಉದಾಹರಣೆಯಿಂದಲೇ ಕಲಿಯಬಹುದು.

%d bloggers like this: