‘ಹೂ ಅಂತೀಯಾ ಮಾವ’ ಹಾಡಿನ ನಂತರ ಮತ್ತೊಂದು ಭರ್ಜರಿ ಹಾಡಿಗೆ ಕುಣಿಯುತ್ತಿದ್ದಾರೆ ನಟಿ ಸಮಂತಾ ಅವರು

ನಟಿ ಸಮಂತಾ ಅವರು ಅಲ್ಲು ಅರ್ಜುನ್ ಅವರ ಪುಷ್ಪಾ ಚಿತ್ರದಲ್ಲಿ ಹ್ಞೂ ಅಂತೀಯಾ ಮಾವ ಹ್ಞೂ ಹ್ಝೂ ಅಂತೀಯಾ ಮಾವ ಅನ್ನೋ ಹಾಡಿನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡು ಮಸ್ತ್ ಸ್ಟೆಪ್ ಹಾಕುವ ಮೂಲಕ ತೆಲುಗು ಚಿತ್ರರಂಗ ಮಾತ್ರ ಅಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲೇ ಭಾರಿ ಫೇಮಸ್ ಆಗ್ಬಿಟ್ರು ಸಮಂತಾ. ಪುಷ್ಪಾ ಸಿನಿಮಾದಲ್ಲಿ ನಾಯಕಿ ರಶ್ಮಿಕಾಗೆ ಕ್ರೇಜ಼್ ಇತ್ತೋ ನಟಿ ಸಮಂತಾಗೆ ಮಾತ್ರ ಸಖತ್ ಕ್ರೇಜ಼್ ಸೃಷ್ಟಿಯಾಯಿತು. ತಮ್ಮ ದಾಂಪತ್ಯ ಜೀವನದಿಂದ ಹೊರ ಬಂದ ಬಳಿಕ ನಟಿ ಸಮಂತಾ ಅವರು ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗುತ್ಥಿದ್ದಾರೆ. ನಟಿ ಸಮಂತಾ ಕೇವಲ ಸಿನಿಮಾ ಮಾತ್ರ ಅಲ್ಲದೇ ವೆಬ್ ಸೀರೀಸ್ ನಲ್ಲಿಯೂ ಕೂಡ ಬೋಲ್ಡ್ ಪಾತ್ರದಲ್ಲಿ ನಟಿಸಿದರು. ಇದು ಹಿಂದಿಯಲ್ಲಿಯೂ ಕೂಡ ರಿಲೀಸ್ ಆಗಿದ್ದರಿಂದ ಸಮಂತಾ ಅವರಿಗೆ ಅಲ್ಲಿಯೂ ಕೂಡ ಇದೀಗ ಅವಕಾಶ ಹರಸಿ ಬಂದಿದೆ. ಇದರಿಂದ ಈಗ ನಟಿ ಸಮಂತಾ ಅವರಿಗೆ ದಿನೇಶ್ ಅವರ ವಿಷನ್ ಪ್ರೊಡಕ್ಷನ್ ಹೌಸ್ ನಡಿ ನಿರ್ಮಾಣ ಆಗುತ್ತಿರುವ ಚಿತ್ರವೊಂದರಲ್ಲಿ ಅವಕಾಶ ಸಿಕ್ಕಿದೆ.

ಈ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ನಟ ಆಯುಷ್ಮಾನ್ ಖುರಾನಾ ಅವರು ನಟಿಸಲಿದ್ದಾರೆ. ಈ ಮೂಲಕ ನಟಿ ಸಮಂತಾ ಅವರು ಬಾಲಿವುಡ್ ಅಂಗಳದಲ್ಲಿಯೂ ಕೂಡ ಮಿಂಚಲು ಸಜ್ಜಾಗುತ್ತಿದ್ದಾರೆ. ಇದರ ನಡುವೆ ಇದೀಗ ಯಶೋದಾ ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಶೇಷ ಹಾಡೊಂದಕ್ಕೆ ಸಮಂತಾ ಅವರು ಸೊಂಟ ಬಳುಕಿಸುತ್ತಾರಂತೆ. ಈ ಹಾಡಿನಲ್ಲಿ ಕೂಡ ಸಮಂತಾ ಸಖತ್ ಬೋಲ್ಡ್ ಆಗಿ ಕುಣಿಯಲಿದ್ದಾರೆ ಎಂದು ಕೇಳಿ ಬರುತ್ತಿದೆ. ಇದೀಗ ಇದು ಸದ್ಯಕ್ಕೆ ಟಾಲಿವುಡ್ ನಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇನ್ನು ನಟಿ ಸಮಂತಾ ಅವರು ಸಖತ್ ಬಿಝಿಯಾಗಿದ್ದು, ಒರಮ್ಯಾಕ್ಸ್ ಸಮೀಕ್ಷೆಯೊಂದರ ಪ್ರಕಾರ ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿ ಅಂದರೆ ಅದು ಸಮಂತಾ ಎಂದು ತಿಳಿದು ಬಂದಿದೆಯಂತೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಸಕ್ರೀಯವಾಗಿರುವ ನಟಿ ಸಮಂತಾ ಅವರು ಒಂದಷ್ಟು ಬೋಲ್ಡ್ ಫೋಟೋಶೂಟ್ ಮೂಲಕ ಆಗಾಗ ಭಾರಿ ಸುದ್ದಿಯಲ್ಲಿರುತ್ತಾರೆ. ಇದರ ಜೊತೆಗೆ ಇದೀಗ ವಿಜಯ್ ದೇವರಕೊಂಡ ಅವರೊಟ್ಟಿಗೆ ಚಿತ್ರವೊಂದನ್ನ ಮಾಡುತ್ತಿದ್ದಾರೆ.

%d bloggers like this: