ಹು ಅಂತಿಯಾ ಮಾಮ ಊಹು ಅಂತಿಯಾ ಹಾಡಿಗೆ ಸಮಂತಾ ಪಡೆದ ಸಂಭಾವನೆ ಎಷ್ಟು ಗೊತ್ತೇ

ತೆಲುಗು ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿದ ಪುಷ್ಪ ಸಿನಿಮಾ ಅದ್ದೂರಿ ಪ್ರದರ್ಶನ ನೀಡಿದೆ. ಈ ಸಿನೆಮಾದಲ್ಲಿ ಅಲ್ಲು ಅರ್ಜುನ್ ಅವರ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಈ ಚಿತ್ರಕ್ಕೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪುಷ್ಪ ಸಿನಿಮಾ ಕೇವಲ ತೆಲಗು ಮಾತ್ರವಲ್ಲದೇ ಕನ್ನಡ, ತಮಿಳು, ಹಿಂದಿ ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ಸದ್ದು ಮಾಡಿದೆ. ಬಾಲಿವುಡ್ನಲ್ಲಿ ಪುಷ್ಪ ಸಿನಿಮಾ ಅಲ್ಲು ಅರ್ಜುನ್ ಅವರ ಮೊದಲ ಚಿತ್ರವಾಗಿದೆ. ಈ ಸಿನೆಮಾದ ಅದ್ದೂರಿತನ, ದೃಶ್ಯ ವೈಭವ ಪ್ರೇಕ್ಷಕರಿಗೆ ಇಷ್ಟವಾಗಿದೆ. ಪುಷ್ಪ ಸಿನಿಮಾ ಬಾಕ್ಸಾಫೀಸ್ ನಲ್ಲಿ ಇದುವರೆಗೆ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಒಟಿಟಿಯಲ್ಲಿಯೂ ಕೂಡ ಪುಷ್ಪ ಸಿನಿಮಾ ರಿಲೀಸ್ ಆಗಿದ್ದು, ಇನ್ನೂ ಕೂಡ ಹಲವು ಚಿತ್ರಮಂದಿರಗಳಲ್ಲಿ ಅದ್ದೂರಿ ಪ್ರದರ್ಶನ ನೀಡುತ್ತಿದೆ. ಇನ್ನು ಈ ಚಿತ್ರದ ಊ ಅಂತೀಯಾ ಮಾವ ಸಾಂಗ್ ಅಂತೂ ಭರ್ಜರಿ ಹಿಟ್ ಆಗಿದೆ. ಎಲ್ಲೆಡೆ ಈ ಸಾಂಗ್ ನ ಮೇಕಿಂಗ್ ದೃಶ್ಯಗಳು ವೈರಲ್ ಆಗುತ್ತಿವೆ. ಈ ಹಾಡಿಗೆ ನೃತ್ಯ ಮಾಡಿರುವ ನಟಿ ಸಮಂತಾ ಮೊದಲಬಾರಿಗೆ ಐಟಂ ಸಾಂಗ್ ಮಾಡಿದಂತಾಗಿದೆ. ಈ ಹಾಡಿನಲ್ಲಿ ಸಮಂತಾ ಅವರ ಡಾನ್ಸ್ ಗೆ ಎಲ್ಲೆಡೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಜೊತೆಗೆ ಈ ಹಾಡಿಗಾಗಿ ಸಮಂತ ಪಟ್ಟಿರುವ ಶ್ರಮ ಕಾಣುತ್ತದೆ.

ಹಾಡಿನ ಜನಪ್ರಿಯತೆಯ ಚರ್ಚೆಗಳ ಜೊತೆಗೆ ಈ ಹಾಡಿಗಾಗಿ ಸಮಂತ ತೆಗೆದುಕೊಂಡಿರಬಹುದಾದ ಸಂಭಾವನೆಯ ಕುರಿತು ಎಲ್ಲೆಡೆ ಚರ್ಚೆಗಳು ಕೇಳಿಬರುತ್ತಿವೆ. ಮೊದಲು ಈ ಹಾಡಿಗಾಗಿ ಸಮಂತ ಅವರನ್ನು ಸಂಪರ್ಕಿಸಿದಾಗ ನಟಿ ಹಿಂದೇಟು ಹಾಕಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಈ ಚಿತ್ರದ ನಾಯಕ ಅಲ್ಲು ಅರ್ಜುನ್ ಅವರು ಮನವೊಲಿಸಿದ ನಂತರ ಈ ಹಾಡನ್ನು ಮಾಡಲು ಒಪ್ಪಿಕೊಂಡರು ಎನ್ನಲಾಗುತ್ತಿದೆ. ಈ ಹಾಡಿನ ಮೊದಲ ಕೆಲವು ಸ್ಟೆಪ್ಸ್ ಗಳಿಗೆ ಸಮಂತ ಅವರ ಆಕ್ಷೇಪ ಕೂಡ ಇತ್ತು ಎನ್ನಲಾಗಿದೆ.

ಆದರೆ ಕ್ರಮೇಣ ಹಾಡಿನ ಜೊತೆಗೆ ಫ್ಲೋ ಆಗಿ ಸಮಂತ ಅವರು ಸಾಗಿದ್ದಾರೆ. ಹಾಡಿನಲ್ಲಿ ಯಾವುದೇ ನೃತ್ಯದ ಹೆಜ್ಜೆಗಳನ್ನು ಬದಲಾಯಿಸಲಾಗಿಲ್ಲ. ಮಾಧ್ಯಮಗಳ ಪ್ರಕಾರ ಕೇವಲ ಮೂರು ನಿಮಿಷ ಪ್ರಸಾರವಾಗುವ ಈ ಐಟಂ ಸಾಂಗ್ ಗೆ ಸಮಂತಾ ಅವರು ಬರೋಬ್ಬರಿ 5 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗುತ್ತಿದೆ. ಇನ್ನು ಪುಷ್ಪ 2 ಚಿತ್ರದ ಡಾನ್ಸ್ ಗಾಗಿ ಯಾರನ್ನು ಸಂಪರ್ಕಿಸುತ್ತಾರೆ ಎಂದು ಕಾದು ನೋಡಬೇಕು. ಒಟ್ಟಾರೆಯಾಗಿ ಪುಷ್ಪ ಮೊದಲನೇ ಅವರತರಣಿಕೆಗಿಂತ ಎರಡನೇ ಅವತರಣಿಕೆ ಸದ್ದು ಮಾಡುವುದರಲ್ಲಿ ಎರಡು ಮಾತಿಲ್ಲ.

%d bloggers like this: