ಎಲ್ಲಾ ಹುಡುಗರಿಗೆ ತಾವು ಹುಡುಗಿಯರಿಗೆ ಇಷ್ಟವಾಗಬೇಕು ಮತ್ತು ಎಲ್ಲ ಹುಡುಗಿಯರಿಗೆ ತಾವು ಹುಡುಗರಿಗೆ ಇಷ್ಟವಾಗಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ಆದರೆ ಎಲ್ಲಾ ರೀತಿಯ ಪುರುಷರು ಹುಡುಗಿಯರಿಗೆ ಇಷ್ಟ ಆಗುವುದಿಲ್ಲ. ಅವರು ಹುಡುಗರಲ್ಲಿ ಕೆಲವೊಂದು ವಿಶೇಷ ಗುಣಗಳನ್ನು ಬಯಸುತ್ತಾರೆ. ಆದರೆ ಎಲ್ಲ ಹುಡುಗಿಯರಿಗೂ ಇದೇ ರೀತಿ ಅಂತಲ್ಲ ಆದರೆ ಬಹುತೇಕವಾಗಿ ಈ ಕೆಳಗಿನ ಗುಣಗಳು ಮಹಿಳೆಯರಿಗೆ ಇಷ್ಟವಾಗುತ್ತವೆ. ಹುಡುಗಿಯರಿಗೆ ಹುಡುಗರು ಅವರ ಹಿಂದೆ ಹಿಂಬಾಲಿಸುವುದು ಮೊದಮೊದಲು ಇಷ್ಟವಾಗುವುದಿಲ್ಲ ಆದರೆ ಒಮ್ಮೆ ಹುಡುಗನ ಬಗ್ಗೆ ಅಭಿಪ್ರಾಯ ಬದಲಾದರೆ ಅವರಿಗೆ ಹಿಂಬಾಲಿಸುವುದು ಕೀಟಲೆ ಮಾಡುವುದು ಇಷ್ಟವಾಗುತ್ತದೆ ಅಂತೆ.
ಅದೇ ರೀತಿ ಒಬ್ಬ ಹುಡುಗಿಗೆ ಆಕೆಯ ಹುಡುಗ ಹೆಣ್ಣಿನ ಬಗ್ಗೆ ಹೆಚ್ಚು ಆಸಕ್ತಿ ಉಳ್ಳವರು ಆಗಿರಬೇಕು ಎಂಬ ಆಸೆ ಇರುತ್ತದೆ. ಅಂದರೆ ಕೇವಲ ಒಡವೆ ಬಟ್ಟೆ ತಂದರೆ ಹುಡುಗಿಯರು ಪೂರ್ಣವಾಗಿ ಖುಷಿಯಾಗುವುದಿಲ್ಲ, ಬದಲಿಗೆ ತಮ್ಮ ಬಗ್ಗೆ ಹೆಚ್ಚು ಆಸಕ್ತಿಯನ್ನು ತೋರಿಸಬೇಕು ಎಂಬ ಆಸೆ ಇರುತ್ತದೆ. ನಂತರ ಹುಡುಗಿಯರಿಗೆ ತಮ್ಮ ಸಂಗಾತಿ ಕೆಲವು ಸಂದರ್ಭಗಳಲ್ಲಿ ಮೃದುವಾಗಿಯೂ ಮತ್ತು ಕೆಲ ಸಂದರ್ಭಗಳಲ್ಲಿ ಗೋಗರೆಯುವ ಸಂಗಾತಿಯಾಗಿದ್ದರೆ ತುಂಬಾ ಇಷ್ಟವಂತೆ. ಮತ್ತೆ ಹುಡುಗಿಯರಿಗೆ ತಮ್ಮ ಯಾವ ಗುಣಗಳು ಇಷ್ಟವಾಗಿದೆ ಎಂದು ಹೇಳುವ ಹುಡುಗ ಇಷ್ಟವಂತೆ. ಅಂದರೆ ಮಹಿಳೆಯರಿಗೆ ತನ್ನ ಗಂಡನಿಗೆ ತಾನು ಏಕೆ ಇಷ್ಟ ಎಂದು ತಿಳಿದುಕೊಳ್ಳುವ ಹೆಬ್ಬಯಕೆ ಇರುತ್ತದೆ. ಅದನ್ನು ಪದೇ ಪದೇ ಹುಡುಗ ಹೇಳಿದರೆ ಅಂತಹ ಸಂಗಾತಿ ತುಂಬಾ ಇಷ್ಟವಂತೆ.