ಆಧುನೀಕರಣ, ಜಾಗತೀಕರಣ ಆದದ್ದೇ ಆದದ್ದು ಎಲ್ಲೆಂದರಲ್ಲಿ ಒತ್ತುವರಿ ಪರ್ವ ಆರಂಭವಾಯಿತು. ಅದರಲ್ಲೂ ಈ ರಿಯಲ್ ಎಸ್ಟೇಟ್, ಭೂಒತ್ತುವರಿ ಹೇಳ ಹೆಸರಿಲ್ಲದಯಂತೆ ಒಂದೇ ಸಮನೇ ಏಕಾಏಕಿಯಾಗಿ ಅಭಿವೃದ್ದಿಯ ಹೆಸರಿನಲ್ಲಿ ಹಲವಾರು ಕಾಡಿನ ಸಂಪತ್ತು ಇಂದು ನಾಶವಾಗಿ ಅಳಿವಿನ ಅಂಚಿನಲ್ಲಿ ಬಂದು ನಿಂತಿದೆ. ಆದರೆ ಸಮಸ್ಯೆ ಏನೆಂದರೆ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರುವಂತಾಗಿ ಜನರ ಪ್ರಾಣ ಹಾನಿಯಾಗುತ್ತಿದೆ. ಇತ್ತೀಚೆಗೆ ಮಗುವೊಂದನ್ನು ಚಿರತೆಯೊಂದು ತಿಂದುಹಾಕಿದೆ ಅದಕ್ಕೆ ಈಗ ಸಾಯಿಸುವುದಕ್ಕೂ ಆದೇಶ ನೀಡಿದೆ, ಆದರೆ ಇನ್ನೊಂದು ಆಲೋಚನೆಯಲ್ಲಿ ಪ್ರಾಣಿಗಳನ್ನು ಕೊಲ್ಲುತ್ತಾ ಹೋದರೆ ಭವಿಷ್ಯದಲ್ಲಿ ಪ್ರಾಣಿ ಸಂಪತ್ತು ನಶಿಸು ಹೋಗುತ್ತದೆ. ಪ್ರಾಣಿಗಳ ಉಳಿಸುವ ದೃಷ್ಟಿಯಿಂದ ಸೇವ್ ದಟೈಗರ್ ಸೇವ್ ಲೈಫ್ ಎಂಬುವ ಅಭಿಯಾನ ಕೂಡ ನಡೆದಿತ್ತು, ಆದರೆ ಇದು ಅಷ್ಷ್ರ ಮಟ್ಟಿಗೆ ಜನರನ್ನು ಮುಟ್ಟಲಿಲ್ಲ. ಇದೇ ವಿಚಾರದಲ್ಲಿ ಹುಲಿಯನ್ನು ಸಂರಕ್ಷಿಸುವ ಕಾರ್ಯವು ಕೂಡ ನಡೆಯುತ್ತಿದೆ.
ವಿಶ್ವ ಹುಲಿಯ ದಿನವನ್ನು ಜುಲೈ 29ರಂದು ಆಚರಿಸಲಾಗುತ್ತದೆ ಇದು ಮಾಂಸಹಾರಿ ಪ್ರಾಣಿಯಾಗಿದ್ದು ಇದು ಬರೋಬ್ಬರಿ ಮುನ್ನೂರು ಕೇಜಿಯಷ್ಟು ತೂಕವನ್ನೊಂದಿರುತ್ತದೆ. ಇದು ಹದಿಮೂರು ಅಡಿಗಳಷ್ಟು ಉದ್ದವಿರುತ್ತದೆ. ಹುಲಿಗಳು ಏನಾದರೂ ಗುಂಪಿನಲ್ಲಿ ಸಂಚರಿಸುತ್ತಿದ್ದರೆ ಅವುಗಳು ಹೊಂಚು ಹಾಕುತ್ತಿದ್ದಾವೆ ಎಂದು ಅರ್ಥ. ಇವುಗಳ ಘರ್ಜನೆ ಸುಮಾರು ಮೂರು ಕಿಲೋ ಮೀಟರ್ ನವರೆಗೆ ಕೇಳಿಸುತ್ತದೆ, ಕಾಡಿನಲ್ಲಿರುವ ಜಿಂಕೆ, ಕಾಡೆಮ್ಮೆ ಹುಲಿಯ ನೆಚ್ಚಿನ ಆಹಾರವಾಗಿದೆ. ಕತ್ತಲೆಯಲ್ಲಿ ಭೇಟಿಯಾಡುವ ಸಾಮರ್ಥ್ಯವನ್ನು ಇದು ಹೆಚ್ಚು ಹೊಂದಿರುತ್ತದೆ. ಹುಲಿ ಜಾಸ್ತಿ ಹಿಂಬದಿಯಿಂದ ಭೇಟಿಯಾಡುತ್ತದೆ, ಹುಲಿಗಳು ಹನ್ನೆರಡು ಅಡಿ ಎತ್ತರಕ್ಕೆ ಜಿಗಿಯಬಹುದು ಮತ್ತು ಗಂಟೆಗೆ ಸುಮಾರು ಅರವತೈದು ಕಿಲೋಮೀಟರ್ ವೇಗ ಹೊಂದಿರುತ್ತದೆ. ಹುಲಿ ಭಾರತದ ಮತ್ತು ಸೌತ್ ಕೊರಿಯಾದ ಮತ್ತು ಬಾಂಗ್ಲಾ ದೇಶದ ರಾಷ್ಟ್ರೀಯ ಪ್ರಾಣಿಯಾಗಿದೆ, ಭಾರತದಲ್ಲಿ ಹುಲಿಗಳ ಸಂಖ್ಯೆ 408 ಜಗತ್ತಿನಲ್ಲಿ 3891ಹುಲಿಗಳಿವೆ.