ಹುಟ್ಟಿ ಬೆಳೆದದ್ದು ದೆಹಲಿ ಆದರೂ ನಾನು ಬೆಂಗಳೂರಿನ ಹುಡುಗಾನೇ ಎಂದ ಕ್ಯಾಪ್ಟನ್ ಕೊಹ್ಲಿ

ನೆನ್ನೆ ಅಬುದಾಬಿಯಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತು ಡೆಲ್ಲಿ ಕ್ಯಾಪ್ಟನ್ಸ್ ತಂಡದ ನಡುವೆ ತೀವ್ರ ಪೈಪೋಟಿಯ ನಡುವೆ ಆರ್ಸಿಬಿ ತಂಡ ಎಡವಟ್ಟು ಮಾಡಿಕೊಂಡಿದೆ. ಸಿರಾಜ್ ಅವರ ಬೌಲಿಂಗ್ ನಲ್ಲಿ ಸತತ ಬೌಂಡರಿಯ ಪರಿಣಾಮ ಆರಂಭದಲ್ಲಿ ರನ್ ಕಡಿವಾಣ ಹಾಕದೆ ಶಿಖರ್ ಧವನ್ ಅವರಿಂದ ಅರ್ಧಶತಕ ಪಡೆದುಕೊಂಡಿತು ಜೊತೆಗೆ ರಹಾನೆ ಕೂಡ ಉತ್ತಮ ಜೊತೆಯಾಟ ಆಡಿದ ಕಾರಣ, ಡೆಲ್ಲಿ ಕ್ಯಾಪ್ಟನ್ ತಂಡ ನೆನ್ನೆಯ ಪಂದ್ಯದಲ್ಲಿ ಜಯಶೀಲರಾಗಿದ್ದಾರೆ. ಇದಕ್ಕೂ ಮುಂಚೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಆರ್ಸಿಬಿ ತಂಡ ಆರಂಭದಲ್ಲಿ ರನ್ ಸೇರಿಸಲು ಕೊಂಚ ಎಡವಿತ್ತು.

ಪಡಿಕಲ್ ಅರ್ಧಶತಕ ತಂಡಕ್ಕೆ ಶಕ್ತಿಯಾಗಿ ನಿಂತಿತ್ತು, ಜೊತೆಗೆ ವಿರಾಟ್ ಕೊಹ್ಲಿಯ ಸಿಕ್ಸ್ ಮತ್ತು ಎಡಿಬಿ ಅವರ ಸಾಮಾರ್ಥ್ಯಕ್ಕೆ ತಕ್ಕ ಆಟ ಅಲ್ಲದೇ ಹೋದರೂ ಉತ್ತಮ ಪ್ರಯತ್ನ ಮಾಡಿದರು. ಲೆಗ್ ಸ್ಪಿನ್ನರ್ ಅಶ್ವಿನ್ ಅವರಿಗೆ ಕೊಹ್ಲಿ ತಮ್ಮ ವಿಕೆಟ್ ಒಪ್ಪಿಸಿದರು. ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ನಾನು ಹುಟ್ಟಿ ಬೆಳೆದದ್ದು, ಓದಿದ್ದು ಎಲ್ಲಾ ದೆಹಲಿಯಲ್ಲಿ ಆದರೆ ಐಪಿಎಲ್ ಕ್ರಿಕೆಟ್ ಲೀಗ್ ನಲ್ಲಿ ನಾನು ಅಪ್ಪಟ ಬೆಂಗಳೂರು ಹುಡುಗ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಏನೇ ಆದರೂ ನೆನ್ನೆ ನಡೆದ ಪಂದ್ಯ ಎರಡು ತಂಡಗಳಿಗೆ ಮುಖ್ಯವಾಗಿತ್ತು ಆದರೂ ಆರ್ಸಿಬಿ ತಂಡ ಪ್ಲೇಆಫ್ ಆಡಲು ಮೂರನೆಯ ಸ್ಥಾನ ಪಡೆದುಕೊಂಡಿದ್ದು ಸಮಾಧನಕರ ವಿಷಯವಾಗಿದೆ.

%d bloggers like this: