ಹುಟ್ಟು ಹಬ್ಬದ ದಿನವೇ ಜನತೆಗೆ ಉಡುಗೊರೆ ಕೊಟ್ಟ ಸುಧಾ ಮೂರ್ತಿ ಅಮ್ಮ

ಇಂದು ಶಿಕ್ಷಕಿ, ಬರಹಗಾರ್ತಿ ಹಾಗು ಅನ್ನದಾತೆ ಸುಧಾ ಮೂರ್ತಿ ಅವರ ಎಪ್ಪತ್ತನೇ ಹುಟ್ಟುಹಬ್ಬ, ಸುಧಾ ಮೂರ್ತಿ ಅವರು ತಮ್ಮ ಜೀವನದ ಬಹುಭಾಗವನ್ನು ಸಮಾಜ ಸೇವೆ ಮಾಡುವುದರಲ್ಲೇ ಕಳೆದಿದ್ದಾರೆ. ಸುಧಾ ಮೂರ್ತಿ ಅವರು ತಮ್ಮ ಇನ್ಫೋಸಿಸ್ ಫೌಂಡೇಶನ್ ಮೂಲಕ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಎಲ್ಲೇ ಸಮಸ್ಯೆ ಬಂದರೂ ಮೊದಲು ಸಹಾಯಕ್ಕೆ ಹೋಗುವುದು ಸುಧಾ ಅಮ್ಮನವರ ಹುಟ್ಟುಗುಣ. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಮುಗಿಸಿರುವ ಸುಧಾ ಮೂರ್ತಿ ಅವರು ಭಾರತದ ದೊಡ್ಡ ಕಂಪೆನಿಯಾದ ಟಾಟಾ ಮೋಟರ್ಸ್ ಅಲ್ಲಿ ಕೆಲಸ ಗಿಟ್ಟಿಸ್ಕೊಂಡಿದ್ದ ಮೊಟ್ಟಮೊದಲ ಮಹಿಳೆ.

ನಿಮಗೆಲ್ಲಾ ಗೊತ್ತಿರುವಂತೆ ಸುಧಾ ಮೂರ್ತಿ ಅವರು ಒಬ್ಬ ಪುಸ್ತಕ ಬರಹಗಾರ್ತಿ, ಕನ್ನಡ ಮತ್ತು ಇಂಗ್ಲಿಷ್ ಅಲ್ಲಿ ಪುಸ್ತಕಗಳನ್ನು ಬರೆಯುತ್ತಾರೆ, ಇಂದು ಅವರ ಹುಟ್ಟುಹಬ್ಬದ ದಿನ ಎಲ್ಲಾ ಪುಟ್ಟ ಮಕ್ಕಳಿಗೆ ಸಿಹಿ ಸುದ್ದಿಯೊಂದನ್ನು ಕೊಡುತ್ತಿದ್ದಾರೆ. ಅದೇನೆಂದರೆ ಕಳೆದ ವರ್ಷ ಬಿಡುಗಡೆ ಆಗಿದ್ದ ಸುಧಾ ಅಮ್ಮನವರ ಪುಸ್ತಕ ‘grandma’s bag of stories’ ಪುಸ್ತಕ ಮುಂದುವರೆಯುತ್ತಿದ್ದು ಈಗ ಸುಧಾ ಅಮ್ಮನವರ ಮುಂದಿನ ಪುಸ್ತಕ ‘grandparents bag of stories’ ಪುಸ್ತಕ ಇದೆ ವರ್ಷದ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗುತ್ತಿದೆ ಎಂದು ಇಂದು ಅವರು ತಿಳಿಸಿದ್ದಾರೆ. ಪುಸ್ತಕ ಪ್ರೇಮಿಗಳು ನವೆಂಬರ್ ಅಲ್ಲಿ ಈ ಪುಸ್ತಕವನ್ನು ಪಡೆದುಕೊಳ್ಳಬಹುದು.

%d bloggers like this: