ಇದ್ದಕ್ಕಿದ್ದಂತೆ ಶಿಲ್ಪಾ ಶೆಟ್ಟಿ ಅವರ ಹೆಸರಿಗೆ 37 ಕೋಟಿ ಬೆಲೆಯ ಆಸ್ತಿ ಹಾಗೂ ಮನೆಗಳು, ನಟಿ ಹೆಸರಿಗೆ ಆಸ್ತಿ ಬರೆದದ್ದು ಯಾರು ಗೊತ್ತಾ

ಸದಾ ಯೋಗ, ಧ್ಯಾನ ಹಾಗೂ ಫಿಟ್ನೆಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಸುದ್ದಿಯಲ್ಲಿರುವ ನಟಿ ಎಂದರೆ, ಅದು ನೀಳಕಾಯ ಚೆಲುವೆ ಶಿಲ್ಪಾ ಶೆಟ್ಟಿ. ಮಂಗಳೂರಿನ ಬೆಡಗಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಫಿಟ್ನೆಸ್ ಬಗ್ಗೆ ಅತೀ ಹೆಚ್ಚು ಕಾಳಜಿ ವಹಿಸುತ್ತಾರೆ. ಶಿಲ್ಪಾ ಶೆಟ್ಟಿ ಫಿಟ್ನೆಸ್ ಗೆ ಸಂಬಂಧ ಪಟ್ಟ ಒಂದು ಆಪ್ ಅನ್ನು ಕೂಡ ಲಾಂಚ್ ಮಾಡಿದ್ದಾರೆ. ಸಿನಿಮಾಗಳಿಂದ ಸ್ವಲ್ಪ ದೂರವೇ ಉಳಿದಿದ್ದ ಈ ನಟಿ, ಬಿಸಿನೆಸ್ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇತ್ತೀಚಿಗೆ ಡ್ಯಾನ್ಸಿಂಗ್ ಶೋನ ಜಡ್ಜ್ ಆಗಿ ಮತ್ತೆ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಶಿಲ್ಪಾ, ಒಂದಲ್ಲ ಒಂದು ರೀತಿ ಸುದ್ದಿಯಲ್ಲಿರುತ್ತಾರೆ. ಕಳೆದ ವರ್ಷ ಸರ್ರೋಗಸಿ ಮೂಲಕ ಹೆಣ್ಣು ಮಗು ಪಡೆದು ಶಿಲ್ಪಾ ಸುದ್ದಿಯಲ್ಲಿದ್ದರು.

2009ರಲ್ಲಿ ಹೆಸರಾಂತ ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿವಾಹವಾಗಿದ್ದ ಶಿಲ್ಪಾ, ಅದೇ ರಾಜ್ ಕುಂದ್ರಾ ಅವರಿಂದ ಮತ್ತೆ ಸುದ್ದಿಯಲ್ಲಿದ್ದರು. ಅಶ್ಲೀಲ ಚಿತ್ರಗಳನ್ನು ನಿರ್ಮಾಣ ಮಾಡಿ ಅದರಿಂದ ಹಣ ಗಳಿಸುತ್ತಿದ್ದಾರೆ ಎಂಬ ಆರೋಪ ರಾಜ್ ಕುಂದ್ರಾ ಅವರ ಮೇಲಿತ್ತು. ಈ ಆರೋಪದಿಂದಾಗಿ ಕೆಲವು ದಿನಗಳ ಕಾಲ ಸೆರೆವಾಸವನ್ನು ಕೂಡ ರಾಜ್ ಕುಂದ್ರಾ ಅವರು ಅನುಭವಿಸಿದರು. ಈ ಘಟನೆಯಿಂದ ಸಾಕಷ್ಟು ನೊಂದಿದ್ದ ಶಿಲ್ಪಾ ಶೆಟ್ಟಿ, ತಮ್ಮ ಕಷ್ಟದ ಸಮಯದಲ್ಲಿ ಗೌಪ್ಯತೆಯನ್ನು ಗೌರವಿಸುವಂತೆ ಜನರಲ್ಲಿ ಮತ್ತು ಮೀಡಿಯಾದವರಲ್ಲಿ ಕೇಳಿಕೊಂಡಿದ್ದರು. ಕಳೆದ ವರ್ಷ ಅಶ್ಲೀಲ ಚಿತ್ರ ನಿರ್ಮಾಣ ಮಾಡಿದ ಆರೋಪದ ಮೇಲೆ ಬಂದಿಯಾಗಿದ್ದ ರಾಜ್ ಕುಂದ್ರಾ ಇದೀಗ ಆರು ತಿಂಗಳ ಬಳಿಕ ತಮ್ಮ ಆಸ್ತಿಯನ್ನು ತಮ್ಮ ಪತ್ನಿಯ ಹೆಸರಿಗೆ ವರ್ಗಾಯಿಸಿದ್ದಾರೆ.

ಹೌದು ಸ್ಕ್ವೇರ್ ಫೀಟ್ ಡಾಟ್ ಕಾಮ್ ನ ನೊಂದಣಿ ದಾಖಲೆಗಳ ಪ್ರಕಾರ ಉದ್ಯಮಿ ರಾಜ್ ಕುಂದ್ರಾ ಅವರು ತಮ್ಮ ಪತ್ನಿಯ ಹೆಸರಿಗೆ 38.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಬರೆದಿರುವುದಾಗಿ ಉಲ್ಲೇಖಿಸಲಾಗಿದೆ. ಜುಹುನಲ್ಲಿನ ಒಸಿಯನ್ ವ್ಯೂ ಹೆಸರಿನ ಕಟ್ಟಡದಲ್ಲಿನ ಒಟ್ಟು 5 ಫ್ಲಾಟ್ ಗಳನ್ನು ಪತ್ನಿಯ ಹೆಸರಿಗೆ ವರ್ಗಾಯಿಸಿದ್ದಾರೆ ಎಂದು ಸ್ಕ್ವೇರ್ ಫೀಟ್ ಡಾಟ್ ಕಾಮ್ ನ ಸಂಸ್ಥಾಪಕ ವರುಣ್ ಸಿಂಗ್ ತಿಳಿಸಿದ್ದಾರೆ. ಈಗಷ್ಟೆ ಸಿನಿಮಾ ಹಾಗೂ ರಿಯಲಿಟಿ ಶೋಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಶಿಲ್ಪಾ ಶೆಟ್ಟಿ 38.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಗೆ ಒಡತಿಯಾಗಿದ್ದಾರೆ.

%d bloggers like this: