ಇದೆ ಡಿಸೆಂಬರ್ 20ರಿಂದ ಕಲರ್ಸ್ ಕನ್ನಡದಲ್ಲಿ ಶುರುವಾಗುತ್ತಿದೆ ಹೊಸ ಧಾರಾವಾಹಿ

ಇತ್ತೀಚೆಗೆ ಕಿರುತೆರೆಯಲ್ಲಿ ಅನೇಕ ಹೊಸ ಹೊಸ ಧಾರಾವಾಹಿಗಳು ಲಾಂಚ್ ಆಗುತ್ತಿವೆ, ಕನ್ನಡ ಸೀರಿಯಲ್ ಗಳು ಅಂದರೆ ಒಂದು ಜಮಾನದವ‌ಲ್ಲ ಕೇವಲ ಅತ್ತೆ ಸೊಸೆ ಜಗಳ, ಕೌಟುಂಬಿಕ ಸಮಸ್ಯೆ ಪ್ರಧಾನವಾಗಿರುತ್ತವೆ ಎನ್ನಲಾಗುತ್ತಿತ್ತು. ಅವು ಸಹ ಹಾಗೆಯೇ ಇರುತ್ತಿದ್ದವು. ಇದೀಗ ಕಾಲಕ್ಕೆ ತಕ್ಕಂತೆ ಕನ್ನಡದ ಧಾರಾವಾಹಿಗಳು ಅಪ್ ಡೇಟ್ ಆಗಿ ಹೊಸ ಹೊಸ ಬಗೆಯ ಕಥೆ, ಯುವ ಮನಸ್ಸನ್ನು ಗೆಲ್ಲುವಂತಹ ಪಾತ್ರಗಳು ಅದ್ದೂರಿ ಮೇಕಿಂಗ್ ಒಳಗೊಂಡಿವೆ. ಅಂತಹ ಧಾರಾವಾಹಿಗಳ ಸಾಲಿಗೆ ಇದೀಗ ಜೈಮಾತಾ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ದೊರೆಸಾನಿ ಧಾರಾವಾಹಿ ಕೂಡ ಸೇರ್ಪಡೆಗೊಳ್ಳುತ್ತಿದೆ. ಈ ದೊರೆ ಸಾನಿ ಧಾರಾವಾಹಿಯಲ್ಲಿ ಕಥಾ ನಾಯಕಿಯಾಗಿ ಖ್ಯಾತ ನಟಿ ರೂಪಿಕಾ ಮತ್ತು ನಟ ಪೃಥ್ವಿರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ನಟಿ ರೂಪಿಕಾ ಅವರು ದೀಪಿಕಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು, ಪೃಥ್ವಿರಾಜ್ ವಿಶ್ವನಾಥನ್ ಆನಂದ್ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಶ್ವನಾಥನ್ ಆನಂದ್ ಎಂಬ ಪಾತ್ರ ಯುವ ಉದ್ಯಮಿಯ ಪಾತ್ರವಾಗಿರುತ್ತದೆ. ಈಗಾಗಲೇ ಈ ದೊರೆಸಾನಿ ಧಾರಾವಾಹಿಯ ಪ್ರೋಮೋ ಲಾಂಚ್ ಆಗಿದ್ದು ಕಿರುತೆರೆ ವೀಕ್ಷಕರಿಗೆ ಕುತೂಹಲ ಮೂಡಿಸಿದೆ. ದೊರೆಸಾನಿ ಧಾರಾವಾಹಿಯು ಮಧ್ಯಮ ವರ್ಗದ ಪುರುಷೋತ್ತಮ್ ಎಂಬ ಸಾಮಾನ್ಯ ವ್ಯಕ್ತಿಗೆ ಮೂವರು ಹೆಣ್ಣು ಮಕ್ಕಳು. ಈ ಮೂವರು ಹೆಣ್ಣು ಮಕ್ಕಳಲ್ಲಿ ದೀಪಿಕಾ ಮೊದಲನೇಯವಳಾಗಿದ್ದು, ದೀಪಿಕಾಳನ್ನು ಕಂಡರೆ ತಂದೆ ಪುರುಷೋತ್ತಮ್ ಗೆ ಅಪಾರ ಪ್ರೀತಿ ನಂಬಿಕೆ ಇರುತ್ತದೆ. ತನ್ನ ತಂದೆಗೆ ದೀಪಿಕಾ ಕೂಡ ತಾನು ಲವ್ ಮ್ಯಾರೇಜ್ ಆಗೋಲ್ಲ. ತನ್ನ ತಂದೆ ನೋಡಿದ ಹುಡುಗನನ್ನೇ ಮದುವೆ ಆಗುತ್ತೇನೆ ಎಂದು ಮಾತು ಕೊಟ್ಟಿರುತ್ತಾಳೆ.

ಆದರೆ ದುರಾದೃಷ್ಟವಶಾತ್ ದೀಪಿಕಾ ತನ್ನ ತಂದೆ ಕೆಲಸ ಮಾಡುವ ಕಂಪನಿಯ ಮಾಲೀಕ ವಿಶ್ವನಾಥ್ ಆನಂದ್ ಪ್ರೀತಿಯ ಬಲೆಗೆ ಸಿಲುಕುತ್ತಾಳೆ. ಮುಂದೇನು ಎಂಬುದೇ ಈ ದೊರೆಸಾನಿ ಧಾರಾವಾಹಿಯ ಸಾರಾಂಶವಾಗಿರುತ್ತದೆ. ಮಹಿಳಾ ಪ್ರಧಾನವಾದ ಈ ಧಾರಾವಾಹಿಯಲ್ಲಿ ಮೂವರು ಹೆಣ್ಣು ಮಕ್ಕಳ ತಂದೆ ಪುರುಷೋತ್ತಮ್ ಪಾತ್ರದಲ್ಲಿ ಹಿರಿಯ ನಟ ಜಯದೇವ್ ಮೋಹನ್, ತಾಯಿಯ ಪಾತ್ರ ಸೌದಾಮಿನಿಯಾಗಿ ನಟಿ ಮಧುಮತಿ ನಟಿಸಿದ್ದಾರೆ. ಜೊತೆಗೆ ನಟಿ ಭವಾನಿ ಪ್ರಕಾಶ್, ಭುವನಾ, ಪ್ರತಿಮಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ದೊರೆಸಾನಿ ಸೀರಿಯಲ್ ಇದೇ ಡಿಸೆಂಬರ್ 20ರಿಂದ ಪ್ರತಿದಿನ ಸಂಜೆ 6.30ಕ್ಕೆಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಲಿದೆ.

%d bloggers like this: