ಇದೆ ಡಿಸೆಂಬರ್ 31ರಿಂದ ಈ 6 ರಾಶಿಯವರಿಗೆ ಬಹಳಷ್ಟು ಅದೃಷ್ಟ ಅವಕಾಶಗಳು, ರಾಯರ ಅನುಗ್ರಹದಿಂದ ಒಳ್ಳೆಯದಾಗುವುದು

ಇದೇ ಗುರುವಾರ ರಿಂದ ಈ 6ರಾಶಿ ಅವರಿಗೆ ಭಾರಿ ಅದೃಷ್ಟ ಲಭಿಸಲಿದೆ, ಹೌದು ಈ ವರ್ಷದ ಕೊನೆಯಲ್ಲಿ ಬರುವ ಗುರುವಾರ ವಿಶೇಷವಾಗಿ ಇರುವುದರಿಂದ ಹಲವು ರಾಶಿಗಳಿಗೆ ಶುಭಯೋಗ ಕರಣಿಸಲಿದ್ದಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು. ಈ ಆರು ರಾಶಿಯವರಿಗೆ ಹಣದ ಸುರಿಮಳೆಯೇ ಸುರಿಯುತ್ತಿದೆ. ಶ್ರೀ ಗುರು ರಾಘವೇಂದ್ರ ಸ್ವಾಮಿ ಅನುಗ್ರಹದಿಂದ ಈ 6 ರಾಶಿಗಳ ವ್ಯಕ್ತಿಗಳು ಅದೃಷ್ಟ ಶಾಲಿಯಾಗುತ್ತಾರೆ ರಾಯರ ಅನುಗ್ರಹದಿಂದಾಗಿ ಧನಲಾಭ, ಆರೋಗ್ಯ ಭಾಗ್ಯ ವ್ಯಾಪಾರ ವ್ಯವಹಾರದಲ್ಲಿ ಅನಿರೀಕ್ಷಿತ ಅತ್ಯಧಿಕ ಲಾಭ ಜೀವನದಲ್ಲಿ ಉತ್ತಮವಾದ ಬದಲಾವಣೆಯಾಗುತ್ತದೆ. ಜೀವನದಲ್ಲಿ ಸುಖ ಸಂತೋಷ ಸಮೃದ್ಧಿ, ವ್ಯಾಪಾರದಲ್ಲಿ ಅಭಿವೃದ್ಧಿಯಾಗುತ್ತದೆ. ರಾಯರ ಅನುಗ್ರಹ ಪಡೆದಿರುವ ಆ ರಾಶಿಗಳ ಪೈಕಿ ಮೊದಲನೆಯದಾಗಿ.

ಮೇಷ ರಾಶಿ: ಈ ರಾಶಿಯವರಿಗೆ ಇದೇ ಗುರುವಾರದಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿ ಅನುಗ್ರಹ ಲಭಿಸಲಿದ್ದು ಅವರು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದಲ್ಲೂ, ಕೆಲಸ ಕಾರ್ಯಗಳಲ್ಲಿ ಜಯ ಕಾಣುತ್ತಾರೆ. ಕೌಟುಂಬಿಕ ಜೀವನದ ಸಮಸ್ಯೆಗಳು ನಿವಾರಣೆಯಾಗಿ ಕುಟುಂಬದವರಲ್ಲಿ ಪ್ರೀತಿ, ವಾತ್ಸಲ್ಯ, ಗೌರವ ಹೆಚ್ಚಾಗುತ್ತದೆ ಆರ್ಥಿಕವಾಗಿ ಸಬಲರಾಗುತ್ತಾರೆ.

ಕಟಕ ರಾಶಿ: ಈ ರಾಶಿಯವರು ಇವರು ಪಡುವ ಪರಿಶ್ರಮಕ್ಕೆ ತಕ್ಕಂತೆ ಇವರಿಗೆ ಉತ್ತಮವಾದ ಉದ್ಯೋಗ, ಧನಲಾಭ ಲಭಿಸುತ್ತದೆ. ಅಂದುಕೊಂಡ ಕೆಲಸಗಳು ಸರಾಗವಾಗಿ ಯಾವುದೇ ರೀತಿಯ ತೊಂದರೆಗಳಿಲ್ಲದೆ ನಡೆಯುತ್ತವೆ. ಇವರು ಮಾಡುವ ಒಳ್ಳೆಯ ಕೆಲಸಗಳಿಗೆ ಸಮಾಜದಲ್ಲಿ ಸ್ಥಾನಮಾನ ಗೌರವಗಳು ಸಿಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ, ದಾಂಪತ್ಯ ಜೀವನದಲ್ಲಿ ಪ್ರೀತಿ ವಾತ್ಸಲ್ಯ ಹೆಚ್ಚಾಗುತ್ತದೆ.

ಸಿಂಹ ರಾಶಿ: ಸಿಂಹ ರಾಶಿಯವರು ಇಷ್ಟು ದಿನ ಪಟ್ಟಂತಹ ಶ್ರಮಕ್ಕೆ ಈ ಗುರುವಾರದಿಂದ ಶುಭಫಲ ದೊರೆಯಲಿದ್ದು, ನಿಮಗೆ ಒಳ್ಳೆಯ ದಿನಗಳು ಆರಂಭವಾಗುತ್ತದೆ. ನಿಮ್ಮ ಬುದ್ಧಿವಂತಿಕೆಯಿಂದ ಮಾಡುವ ಕೆಲಸಗಳು ಯಶಸ್ಸಾಗುತ್ತವೆ. ಆದರೆ ನೀವು ತೆಗೆದುಕೊಳ್ಳುವ ನಿರ್ಣಯಗಳು ನಿಮ್ಮ ಸ್ವಂತದ್ದಾಗಿರಬೇಕು ಬೇರೆಯವರ ಮಾತನ್ನು ಕೇಳಬೇಡಿ ನಿಮ್ಮನ್ನು ಅಡ್ಡದಾರಿಗೆ ತಳ್ಳುವ ಪ್ರಯತ್ನ ಆಗಬಹುದು, ನಿಮ್ಮ ಬೆಂಬಲಕ್ಕೆ ನಿಮ್ಮ ಸಂಗಾತಿ ಸದಾ ನಿಮ್ಮ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹ ನೀಡುತ್ತಾರೆ.

ತುಲಾ ರಾಶಿ: ಈ ರಾಶಿಯವರಿಗೆ ಇದೇ ಗುರುವಾರದಿಂದ ಶುಭ ದಿನಗಳು ಆರಂಭವಾಗುತ್ತವೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಬರುತ್ತದೆ. ನಿಮಗೆ ಒಳ್ಳೆಯ ದಿನಗಳು ಆರಂಭವಾಗುತ್ತವೆ. ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಈ ರಾಶಿಯವರು ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳನ್ನು ಕಾಣಬಹುದಾಗಿದೆ. ಆರ್ಥಿಕ ಸಮಸ್ಯೆ ನಿವಾರಣೆಯಾಗಿ ಅದೃಷ್ಟ ನಿಮ್ಮದಾಗುತ್ತದೆ.

ಮಕರ ರಾಶಿ: ಇದೇ ಗುರುವಾರದಿಂದ ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ ವೆಂಬಂತೆ ಇವರು ಕೈ ಹಾಕಿದ ಎಲ್ಲಾ ಕೆಲಸ ಕಾರ್ಯಗಳು ಯಶಸ್ಸನ್ನು ಪಡೆಯುತ್ತದೆ. ಇನ್ನು ಈ ರಾಶಿಯ ವ್ಯಕ್ತಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಡಗಿಸಿಕೊಂಡಿದ್ದರೆ ಖಂಡಿತ ಜಯ ಲಭಿಸುತ್ತದೆ, ಆದಷ್ಟು ಎಚ್ಚರದಿಂದ ಕಾರ್ಯ ನಿರ್ವಹಿಸಿ ನಿಮ್ಮ ಸುತ್ತಮುತ್ತಲಿನಲ್ಲಿ ಹಿತ ಶತ್ರುಗಳು ಹೆಚ್ಚಾಗಲಿದ್ದಾರೆ. ಪ್ರತಿ ಗುರುವಾರ ತಪ್ಪದೇ ರಾಯರ ದರ್ಶನ ಮಾಡಿ ಒಳ್ಳೆಯದಾಗುತ್ತದೆ.

ವೃಶ್ಚಿಕ ರಾಶಿ: ಈ ವೃಶ್ಚಿಕ ರಾಶಿಯವರು ಉದ್ಯಮಿಗಳಾಗಿದ್ದರೆ ನೀವು ಹೆಚ್ಚು ಜಾಗೃತಿಯಿಂದ ಇರಬೇಕು ಏಕೆಂದರೆ ನಿಮಗೆ ಪೈಪೋಟಿ ನೀಡುವುದಕ್ಕೆ ಒಂದಷ್ಟು ಜನರು ಸಿದ್ದರಾಗಿದ್ದಾರೆ. ಈ ರಾಶಿಯ ಕೆಲವರಿಗೆ ಹೊಸ ಉದ್ಯಮ ಆರಂಭಿಸಲು, ವ್ಯಾಪಾರ ವ್ಯವಹಾರಗಳಿಗೆ ಬಂಡವಾಳ ಹೂಡಲು ಈ ಸಮಯವು ಬಹಳ ಸೂಕ್ತವಾಗಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಕೂಡ ಇದು ಒಳ್ಳೆಯ ದಿನಗಳಾಗಿವೆ. ನೀವು ಕಂಡ ಕನಸುಗಳು ನನಸಾಗುವ ಸಮಯ ಹತ್ತಿರವಾಗುತ್ತಿದೆ.

ವೃಶ್ಚಿಕ ರಾಶಿಯವರು ಪ್ರತಿ ಗುರುವಾರ ರಾಯರ ದರ್ಶನ ಮಾಡಿದರೆ ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ಕಾಣುತ್ತೀರಿ. ಜೊತೆಗೆ ಈ ರಾಶಿಯವರಿಗೆ ರಾಯರ ಅನುಗ್ರಹ ಹೆಚ್ಚಾಗಿದ್ದು, ಅದೃಷ್ಟ ಲಭಿಸುವ ಯೋಗವಿದೆ ಆದ್ದರಿಂದ ಪ್ರತಿದಿನ ಕೆಲಸ ಕಾರ್ಯ ಆರಂಭಿಸಲು ರಾಯರ ಪ್ರಾರ್ಥನೆ ಮಾಡಿ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ತಿಳಿಸುತ್ತಾರೆ.

%d bloggers like this: