ಮನೆಗಳಲ್ಲಿ ಆಮೆಯ ಪ್ರತಿಮೆ ಇಡುವುದರಿಂದ ನಿಮ್ಮ ಕೆಲವು ಸಂಕಷ್ಠಗಳು,ಸಮಸ್ಯೆಗಳು ದೂರವಾಗುತ್ತವೆ. ಹೌದು ಪ್ರಪಂಚ ಇಂದು ಹೋರಾಟ ಮಾಡುತ್ತಿರುವುದು ಬದುಕಿಗಾಗಿ ಬದುಕಲು ಬೇಕಾಗಿರುವುದು ಹಣ. ಈ ಹಣ ಎಲ್ಲರಲ್ಲೂ ಇರುವುದಿಲ್ಲ ಆದ ಕಾರಣ ಈ ಹಣವಿಲ್ಲದವರು ಹಣಕ್ಕಾಗಿ ಮಾಡುವ ಕೆಲಸ ಕಾರ್ಯ, ಪೂಜೆ ನೇಮ ನಿಯಮಗಳು ಅಷ್ಟಿಟ್ಟಲ್ಲ ದುಡ್ಡು ಮನುಷ್ಯನನ್ನ ಎಷ್ಟರ ಮಟ್ಟಿಗೆ ನಿಯಂತ್ರಿಸುತ್ತಿದೆ ಅಂದರೆ ಇಂದಿನ ದುನಿಯಾದದಲ್ಲಿ ಹಣವಿಲ್ಲದ ಮನುಷ್ಯ ಹೆಣಕ್ಕೆ ಸಮಾನ ಎಂಬಂತಾಗಿದೆ. ಜ್ಯೋತಿಷ್ಯಶಾಸ್ತ್ರ ಹೇಳುವ ಪ್ರಕಾರ ಆಮೆಯು ಅದೃಷ್ಟದ ಸಂಕೇತ ಎಂದು ಹೇಳುತ್ತಾರೆ. ಮನೆಯಲ್ಲಿ ಆಮೆಯ ಪ್ರತಿಮೆ ಇಡುವುದರಿಂದ ಧನ ಪ್ರಾಪ್ತಿ, ಅದೃಷ್ಟ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ. ಅದಕ್ಕಾಗಿಯೇ ಕೆಲವು ದೇವಾಲಯಗಳಲ್ಲಿ ಆಮೆಯ ಪ್ರತಿಮೆಯನ್ನು ಸ್ಥಾಪಿಸಲಾಗಿರುತ್ತದೆ.

ಇನ್ನು ಹಾಗಾದರೆ ಯಾವ ರೀತಿಯ ಆಮೆಯ ಪ್ರತಿಮೆಯನ್ನು ಮನೆಯಲ್ಲಿಟ್ಟರೆ ಅದೃಷ್ಟ ಒಲಿಯುತ್ತದೆ ಎಲ್ಲಿ ಇಟ್ಟರೆ ಉತ್ತಮ ಫಲಿತಾಂಶ ನೋಡಬಹುದು ಎಂದಾದರೆ ಮನೆಗಳಲ್ಲಿ ಉತ್ತರದಿಕ್ಕಿಗೆ ಮತ್ತು ಪೂರ್ವದಿಕ್ಕಿಗೆ ಆಮೆ ವಿಗ್ರಹವನ್ನು ಇಡಬಹುದಾಗಿದೆ. ಇದು ಮನೆಯ ನಕರಾತ್ಮಕತೆಯನ್ನು ಹೋಗಲಾಡಿಸಿ ಮನೆಯಲ್ಲಿ ಸಂಪೂರ್ಣವಾಗಿ ಸಕರಾತ್ಮಕತೆಯನ್ನು ತುಂಬುತ್ತದೆ. ಇನ್ನು ಮದುವೆಯಾಗಿ ಹಲವು ವರ್ಷಗಳು ಕಳೆದರೂ ಸಹ ಸಂತಾನ ಪ್ರಾಪ್ತಿಗಾಗಿ ಒದ್ದಾಡುತ್ತಿರುವವರು ಆಮೆಯು ತನ್ನ ಮರಿಯನ್ನು ತನ್ನ ಬೆನ್ನ ಮೇಲೆ ಕೂರಿಸಿ ಕೊಂಡಿರುವಂತಹ ಆಮೆಯ ಪ್ರತಿಮೆಯನ್ನು ನೀವು ಮಲಗುವ ಕೋಣೆಯಲ್ಲಿ ಇರಿಸಿದರೆ ನಿಮಗೆ ಸಂತಾನ ಪ್ರಾಪ್ತಿಯಾಗುತ್ತದೆ.

ವ್ಯಾಪರದಲ್ಲಿ ಲಾಭವಿಲ್ಲದೆ ನಿರಂತರ ನಷ್ಟ ಹೊಂದುತ್ತಿದ್ದರೆ ಅಂತಹವರು ಸ್ಪಟಿಕವಾದ ಆಮೆಯನ್ನು ತಮ್ಮ ವ್ಯಾಪಾರದ ಗಲ್ಲಾಪೆಟ್ಟಿಗೆಯ ಮುಂಭಾಗ ಸ್ಪಟಿಕ ಆಮೆಯ ಪ್ರತಿಮೆಯನ್ನು ಇರಿಸುವುದರಿಂದ ಆದಾಯ ಧನಾಗಮನ ಆಗುತ್ತದೆ ಎನ್ನಲಾಗಿದೆ. ಹೊಸದಾಗಿ ವ್ಯಾಪಾರ ಶುರುಮಾಡಿರುವವರು ಬೆಳ್ಳಿಯ ಆಮೆಯ ವಿಗ್ರಹವನ್ನು ಇರಿಸುವುದರಿಂದ ಶುಭಾರಂಭವಾಗಿ ವ್ಯಾಪಾರವು ಸುಗಮವಾಗಿ ಲಾಭದಾಯಕವಾಗಿ ನಡೆಯುತ್ತದೆ.
ನಿಮಗೆ ಏನಾದರೂ ಅಥವಾ ನಿಮ್ಮ ಕುಟುಂಬದವರಿಗೆ ನಿರಂತರವಾಗಿ ಪದೇ ಪದೇ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದರೆ, ಮಣ್ಣಿನಿಂದ ತಯಾರಿಸಿಕದ ಆಮೆಯ ಪ್ರತಿಮೆಯನ್ನು ನೀವು ಮಲಗುವ ಕೋಣೆಯಲ್ಲಿ ಇಟ್ಟು ಪೂಜಿಸುವುದರಿಂದ ನಿಮಗೆ ಆರೋಗ್ಯ ಸಮಸ್ಯೆದಲ್ಲಿ ಚೇತರಿಕೆ ಕಂಡುಬರುತ್ತದೆ.

ಜೊತೆಗೆ ಆಮೆಯ ಪ್ರತಿಮೆಯನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ವಿವಿಧ ಸಮಸ್ಯೆಗಳು ಉಪಶಮನ ವಾಗುತ್ತವೆ. ಹಿತ್ತಾಳೆಯಿಂದ ತಯಾರಿಸಲಾದ ಆಮೆಯ ವಿಗ್ರಹವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಮಕ್ಕಳ ಜ್ಞಾನಾರ್ಜನೆ ಹೆಚ್ಚಾಗಿ ವಿಧ್ಯಾಭ್ಯಾಸದಲ್ಲಿ ಪ್ರಗತಿ ಕಾಣುತ್ತಾರೆ. ಒಟ್ಟಾರೆಯಾಗಿ ಆಮೆಯ ಪ್ರತಿಮೆ ಮನೆಯಲ್ಲಿರುವುದರಿಂದ ನಿಮಗೆ ಧನಾಕರ್ಷಣೆ, ಜನಾಕರ್ಷಣೆಯ ಜೊತೆಗೆ ನಿಮ್ಮ ಮನೆಯ ಸಕಲ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಜ್ಯೋತಿಷ್ಯಶಾಸ್ತ್ರವು ತಿಳಿಸುತ್ತದೆ.