ಇದೆ ಕಾರಣಕ್ಕೆ ಆರ್ಸಿಬಿ ಆಟಗಾರ ಸುಂದರ್ ಅವರು ‘ವಾಷಿಂಗ್ಟನ್ ಸುಂದರ್’ ಎಂಬ ಹೆಸರು ಪಡೆದದ್ದು

ಆಪತ್ಭಾಂದವನ ಹೆಸರು ಈ ವಾಷಿಂಗ್ಟನ್ ಸುಂದರ್! ಭಾರತದ ಕ್ರಿಕೆಟ್ ಆಟಗಾರ ವಾಷಿಂಗ್ಟನ್ ಸುಂದರ್ ಅವರ ಹೆಸರಿನ ಹಿಂದೆಯ ರೋಚಕ ಕಥೆಯೊಂದನ್ನು ಸ್ವತಃ ಅವರ ತಂದೆ ಬಿಚ್ಚಿಟ್ಟಿದ್ದಾರೆ. ಹೌದು ಭಾರತ ತಂಡದ ಪ್ರತಿಭಾನ್ವಿತ ಆಟಗಾರ ವಾಷಿಂಗ್ಟನ್ ಸುಂದರ್ ಆಸ್ಟ್ರೇಲಿಯಾ ವಿರುದ್ದ ನಡೆದ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದರು, ಜೊತೆಗೆ ಭಾರತ ಜಯಶಾಲಿಯಾಗಲು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಆದರೆ ಇವರ ಹೆಸರು ಬಹಳಷ್ಟು ಮಂದಿಗೆ ಗೊಂದಲವಾಗಿ ಕಾಣುತ್ತದೆ. ಕಾರಣ ವಾಷಿಂಗ್ಟನ್ ಎಂಬುದು ಸುಂದರ್ ಅವರು ವಾಷಿಂಗ್ಟನ್ ದವರ ಅದಕ್ಕಾಗಿ ಅವರು ತಮ್ಮ ಹೆಸರಿನ ಮುಂದೆ ವಾಷಿಂಗ್ಟನ್ ಎಂದು ಸೇರಿಸಿಕೊಂಡಿದ್ದಾರಾ ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಆದರೆ ವಾಷಿಂಗ್ಟನ್ ಹೆಸರಿನ ಹಿಂದೆ ಒಂದು ನೆನೆಪಿನಾರ್ಥ ಸಂಗತಿಗಳಿವೆ.

ಸುಂದರ್ ಅವರು ಬಡತನದ ಕುಟುಂಬದಲ್ಲಿ ಜನಿಸಿದವರು, ಊಟಕ್ಕೂ ಪರದಾಡುವ ಸ್ಥಿತಿಯಿರುವಾಗ ವಿಧ್ಯಾಭ್ಯಾಸ ದೂರದ ಮಾತಾಗಿತ್ತು, ಇವರು ಅಂದಿನ ದಿನಗಳಲ್ಲಿ ಟ್ರಿಪ್ಲಿಕೆನ್ ನಲ್ಲಿ ವಾಸ ಮಾಡುತ್ತಿದ್ದರು. ಅದೇ ಪಕ್ಕದ ರಸ್ತೆಯಲ್ಲಿ ವಾಷಿಂಗ್ಟನ್ ಎಂಬ ನಿವೃತ್ತ ಯೋಧರು ಕೂಡ ವಾಸ ಮಾಡುತ್ತಿದ್ದರು. ಪ್ರತಿನಿತ್ಯ ನಾನು ಕ್ರಿಕೆಟ್ ಅಟವಾಡಲು ಮರಿಯಾ ಮೈದಾನಕ್ಕೆ ಹೋಗುತ್ತಿದ್ದೆ, ಕ್ರಿಕೆಟ್ ಪ್ರೇಮಿಯಾಗಿದ್ದ ವಾಷಿಂಗ್ಟನ್ ಕ್ರಿಕೆಟ್ ನೋಡಲು ಬರುತ್ತಿದ್ದರು. ಕ್ರಿಕೆಟ್ ನಲ್ಲಿ ನನ್ನ ಆಟ ಇಷ್ಟಪಟ್ಟ ಅವರು ನನ್ನನ್ನು ಕೂಡ ಇಷ್ಟಪಟ್ಟರು.

ಹೀಗೆ ವಾಷಿಂಗ್ಟನ್ ಒಡನಾಟ ಬೆಳೆಯತೊಡಗಿತ್ತು, ತದನಂತರ ವಾಷಿಂಗ್ಟನ್ ಅವರು ನನ್ನ ಎಲ್ಲಾ ವಿಧ್ಯಾಭ್ಯಾಸದ ಸಮವಸ್ತ್ರ, ಪುಸ್ತಕಗಳ ಖರ್ಚು, ವೆಚ್ಚವನ್ನು ಸಂಪೂರ್ಣವಾಗಿ ಅವರೆ ಬರಿಸುತ್ತಿದ್ದರು, ಜೊತೆಗೆ ನನ್ನ ಕ್ರಿಕೆಟ್ ಅಭ್ಯಾಸಕ್ಕಾಗಿ ಮೈದಾನದವರೆಗೂ ತಮ್ಮ ಸೈಕಲಲ್ಲಿ ಕರೆದೊಯ್ಯುತ್ತಿದ್ದರು. ಹೀಗೆ ನನ್ನ ಜೀವನದಲ್ಲಿ ಬಂದ ಆಪತ್ಭಾಂದವ ವಾಷಿಂಗ್ಟನ್, ಆದಾದ ಕೆಲವು ವರ್ಷಗಳ ನಂತರ ಅವರು ನಿಧನರಾದರು. ನನಗೆ ಮದುವೆಯಾಗಿ ವರ್ಷದ ನಂತರ ನನ್ನ ಪತ್ನಿ ಹೆರಿಗೆ ಸಮಯದಲ್ಲಿ ತುಂಬಾ ಸಮಸ್ಯೆ ಎದುರಿಸುತ್ತಿದ್ದಳು, ದುರಾದೃಷ್ಟವಶಾತ್ ಅವಳು ಗಂಡು ಮಗುವಿಗೆ ಜನ್ಮ ನೀಡಿ ಜೀವಬಿಟ್ಟಳು.

ಅದಾದ ಬಳಿಕ ನನ್ನ ಮಗನಿಗೆ ಹಿಂದೂ ಸಂಪ್ರದಾಯದಂತೆ ಶ್ರೀನಿವಾಸ್ ಎಂದು ಹೆಸರಿಟ್ಟಿದ್ದೆ. ಆದರೆ ನನ್ನ ಜೀವನದಲ್ಲಿ ಬಂದ ಪ್ರಮುಖವ್ಯಕ್ತಿ ಮತ್ತು ಆಪತ್ಭಾಂದವರಾದ ವಾಷಿಂಗ್ಟನ್ ಅವರ ನೆನಪಿಗಾಗಿ ನನ್ನ ಮಗನಿಗೆ ವಾಷಿಂಗ್ಟನ್ ಸುಂದರ್ ಎಂದು ಹೆಸರು ಇಟ್ಟಿದ್ದೇನೆ ಎಂದು ವಾಷಿಂಗ್ಟನ್ ಸುಂದರ್ ತಂದೆ ತಮ್ಮ ಕಷ್ಟದ ದಿನಗಳಲ್ಲಿ ಸಹಾಯ ಮಾಡಿದ ವ್ಯಕ್ತಿಯ ಹೆಸರನ್ನು ತನ್ನ ಮಗನಿಗೆ ಇಟ್ಟಿರುವ ರೋಚಕತೆಯನ್ನು ತಿಳಿಸಿದ್ದಾರೆ. ಇಂದಿನ ದಿನಮಾನಗಳಲ್ಲಿ ನಮ್ಮಿಂದ ಎಲ್ಲಾ ರೀತಿಯ ಸಹಾಯ ಪಡೆದುಕೊಂಡು ದ್ರೋಹ ಮಾಡುವ ಜನರ ನಡುವೆ ವಾಷಿಂಗ್ಟನ್ ಸುಂದರ್ ತಂದೆ ನಿಜಕ್ಕೂ ಮಾದರಿಯಾಗಿದ್ದಾರೆ.

%d bloggers like this: