ಇದೆ ನಟ ಕೆಜಿಎಫ್ ಟೀಸರ್ ಗೆ ಧ್ವನಿ ಕೊಟ್ಟದ್ದು

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಬಿಡುಗಡೆಯಾಗಿ ಕೇವಲ ದಕ್ಷಿಣ ಭಾರತವಲ್ಲದೆ ಭಾರತೀಯ ಚಿತ್ರರಂಗವನ್ನೇ ಬೆಚ್ಚಿಬೀಳಿಸಿದೆ, ಅಷ್ಟರ ಮಟ್ಟಿಗೆ ಕನ್ನಡ ಚಿತ್ರವೊಂದು ತನ್ನ ಸಾಮರ್ಥ್ಯ ಏನೆಂಬುದನ್ನು ಸಾಬೀತು ಪಡಿಸಿದೆ ಎನ್ನಬಹುದು. ಜನವರಿ 7ರಂದು ರಾತ್ರಿ 9.29 ನಿಮಿಷಕ್ಕೆ ಹೊಂಬಾಳೆ ಫಿಲ್ಮ್ ಯುಟ್ಯುಬ್ ಚಾನೆಲ್ ಮೂಲಕ ರಿಲೀಸ್ ಆದ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಇಲ್ಲಿಯವರೆಗೆ ಬರೋಬ್ಬರಿ 100 ಮಿಲಿಯನ್ ನಷ್ಟು ವೀಕ್ಷಣೆ ಪಡೆದು ವಿಶ್ವ ದಾಖಲೆ ನಿರ್ಮಾಣ ಮಾಡಿದೆ. ಇದು ರಾಕಿಂಗ್ ಸ್ಟಾರ್ ಯಶ್ ಅವರಿಗೆ ತಮ್ಮ ವೃತ್ತಿ ಬದುಕಿಗೆ ಹೊಸ ತಿರುವು ನೀಡುವುದರ ಜೊತೆಗೆ ಅವರಿಗೆ ಕೆಜಿಎಫ್ ಸರಣಿ ಅವರ ವೃತ್ತಿ ಬದುಕಿಗೆ ಮೈಲಿಗಲ್ಲು ಎಂದು ಹೇಳಬಹುದು.

ಕೆಜಿಎಫ್ 2 ಚಿತ್ರ ಟೀಸರ್ ನೋಡಿದ ಭಾರತೀಯ ಚಿತ್ರರಂಗದ ತಂತ್ರಜ್ಞರು ಸೇರಿ ಸಿನಿದಿಗ್ಗಜರು ಆಶ್ಚರ್ಯದ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ, ಇನ್ನು ಟೀಸರ್ ನಲ್ಲಿಯೇ ರಸದೌತಣ ಬಡಿಸಿದ ಈ ಚಿತ್ರದ ಬಗ್ಗೆ ಸಿನಿ ಪ್ರೇಕ್ಷಕರಲ್ಲಿ ಅಪಾರ ಪ್ರಮಾಣದ ನಿರೀಕ್ಷೆ ಹೆಚ್ಚಾಗಿದೆ. ಈ ಕನ್ನಡ ಸಿನಿಮಾದ ಗುಣಮಟ್ಟ ಹಾಲಿವುಡ್ ಚಿತ್ರಗಳಿಗೆ ಸೆಡ್ಡು ಹೊಡೆಯುವಂತಹ ಟೀಸರ್ ಇದಾಗಿದೆ ಎಂದು ಸಿನಿ ದಿಗ್ಗಜರು ಗಳು ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇನ್ನು ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿದ್ದ ಯಶ್ ಇದೀಗ ಯುನಿವರ್ಸಲ್ ಸ್ಟಾರ್ ಆಗುವ ಎಲ್ಲಾ ಲಕ್ಷಣಗಳಿವೆ ಎಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ, ಕೆಜಿಎಫ್ ಚಾಪ್ಟರ್ 2 ಚಿತ್ರದ ಬಗ್ಗಇಷ್ಟೆಲ್ಲಾ ಬೆಳವಣಿಗೆ ಆಗುತ್ತಿದ್ದರೆ ಮತ್ತೊಂದೆಡೆ ಕನ್ನಡ ಸಿನಿಪ್ರೇಕ್ಷರು ಟೀಸರ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಅದಕ್ಕೆ ಬಲವಾದ ಕಾರಣವು ಸಹ ಇದೆ ಮೊದಲನೇಯದಾಗಿ ಟೀಸರ್ ಕನ್ನಡ ಭಾಷೆಯಲ್ಲಿ ಇರಲಿಲ್ಲ, ಮತ್ತೊಂದು ಕೆಜಿಎಫ್ ಭಾಗ ಒಂದರಲ್ಲಿ ಚಿತ್ರದ ಕಥೆಯನ್ನು ನಿರೂಪಣೆ ಪಾತ್ರಧಾರಿಯಾಗಿ ನಟಿಸಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರ ಹಿನ್ನೆಲೆ ಧ್ವನಿ ಮತ್ತು ಅವರ ಅನುಪಸ್ಥಿತಿ ಕನ್ನಡ ಪ್ರೇಕ್ಷಕರಿಗೆ ಅಸಮಾಧಾನ ತರಿಸಿದರೆ, ಪ್ರಕಾಶ್ ರಾಜ್ ಅವರ ಪಾತ್ರ ನಿಭಾಯಿಸಿದ್ದಾರೆ ಎಂಬುದು ಇನ್ನೊಂದು ಆಕ್ರೋಶಕ್ಕೆ ಕಾರಣವಾಗಿದೆ.

ಅದಕ್ಕೂ ಮುಂಚೆ ಚಿತ್ರದ ಶೂಟಿಂಗ್ ನಲ್ಲಿ ಪ್ರಕಾಶ್ ರಾಜ್ ಪಾಲ್ಗೊಂಡಿದ್ದಾಗ ಕನ್ನಡ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದರು, ಇದಕ್ಕೆ ಪ್ರಶಾಂತ್ ನೀಲ್ ಕೂಡ ಅನಂತ್ ನಾಗ್ ಅವರ ಪಾತ್ರವನ್ನ ಪ್ರಕಾಶ್ ರಾಜ್ ನಿರ್ವಹಿಸುತ್ತಿಲ್ಲ ಅವರದು ಹೊಸ ಪಾತ್ರ ಎಂದು ಸ್ಪಷ್ಟನೆ ನೀಡಿ ಸಮರ್ಥನೆ ಮಾಡಿಕೊಂಡಿದ್ದರು, ಆದರೆ ಚಿತ್ರದಲ್ಲಿ ಅವರ ಇರುವಿಕೆ ಬಗ್ಗೆ ಮಾಹಿತಿ ನೀಡಿರಲಿಲ್ಲ. ಈಗ ಕೆಜಿಎಫ್ 2 ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಅದರಲ್ಲಿ ಅನಂತ್ ನಾಗ್ ಅವರ ಹೆಸರಾಗಲಿ, ಅವರ ಪಾತ್ರದ ಪರಿಚಯವಾಗಲಿ ಟೀಸರನಲ್ಲಿ ಇರಲಿಲ್ಲ.

ಈ ಕಾರಣವಾಗಿ ಚಿತ್ರದ ಟೀಸರ್ ರಿಲೀಸ್ ಆಗಿ ಅಮೋಘವಾಗಿ ಪ್ರತಿಕ್ರಿಯೆ ಪಡೆದುಕೊಂಡರು ಸಹ ಕನ್ನಡ ಸಿನಿ ಪ್ರೇಕ್ಷಕರು ನಿರ್ದೇಶಕರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ನೋಡಿದ ಭಾರತೀಯ ಚಿತ್ರರಂಗವೇ ಕೆಜಿಎಫ್ ಚಾಪ್ಟರ್ 2 ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟಿದ್ದು ಅಭಿಮಾನಿಗಳು ಕೆಜಿಎಫ್ 2 ಸಿನಿಮಾ ನೋಡವುದಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಕೆಜಿಎಫ್ ಟೀಸರ್ ಅಲ್ಲಿ ಇರುವುದು ಪಂಚಭಾಷಾ ನಟ ಪ್ರಕಾಶ್ ರೈ ಅವರ ಧ್ವನಿ ಎಂದು ಎಲ್ಲರಿಗೂ ಸರಳವಾಗಿ ಗೊತ್ತಾಗುತ್ತದೆ. ಎರಡನೇ ಭಾಗದಲ್ಲಿ ಪ್ರಕಾಶ್ ರೈ ಅವರು ಚಿತ್ರದ ಕಥೆಗಳನ್ನು ವಿವರಿಸಿದ್ದಾರೆ.

%d bloggers like this: