ಇದೆ ತಿಂಗಳು ರಶ್ಮಿಕಾ ಮಂದಣ್ಣ ಅವರ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಚಿತ್ರ ಬಿಡುಗಡೆ, ನಟನಿಗೆ ಗಿಫ್ಟ್ ಕಳುಹಿಸಿದ ರಶ್ಮಿಕಾ

ಟಾಲಿವುಡ್ ಸ್ಟೈಲೀಶ್ ಸ್ಟಾರ್ ನಟ ಅಲ್ಲು ಅರ್ಜುನ್ ಅವರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ, ಇಡೀ ಭಾರತೀಯ ಚಿತ್ರರಂಗವೇ ಬಹು ನಿರೀಕ್ಷೆಯಿಂದ ಕಾತುರವಾಗಿ ಕಾದು ಕುಳಿತಿರುವ ಪುಷ್ಪಾ ಚಿತ್ರದ ಟ್ರೇಲರ್ ನಾಳೆ ಡಿಸೆಂಬರ್ 6ರಂದು ಬಿಡುಗಡೆಯಾಗುತ್ತಿದೆ. ದಕ್ಷಿಣ ಭಾರತದ ಸುಪ್ರಸಿದ್ದ ನಿರ್ದೇಶಕರಲ್ಲಿ ಒಬ್ಬರಾದ ಸುಕುಮಾರ್ ನಿರ್ದೇಶನದ ಪುಷ್ಪಾ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಈಗಾಗಲೇ ಟೀಸರ್, ಲಿರಿಕಲ್ ಸಾಂಗ್ ಮೂಲಕ ಸಖತ್ ಸೌಂಡ್ ಮಾಡುತ್ತಿರುವ ಪುಷ್ಪಾ ಚಿತ್ರ ಅಪಾರ ಜನ ಮೆಚ್ಚುಗೆ ಪಡೆದುಕೊಂಡು ಅದರಲ್ಲಿಯೂ ಶ್ರೀವಲ್ಲಿ ಹಾಡು ಯುವ ಪೀಳಿಗೆಗೆ ಮೋಡಿ ಮಾಡಿದೆ. ಇನ್ನು ಈ ಪುಷ್ಪಾ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಸಖತ್ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ಈ ಬೋಲ್ಡ್ ಲುಕ್ ಗೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ‌. ಇನ್ನೊಂದು ವಿಶೇಷ ಅಂದರೆ ಈ ಪುಷ್ಪಾ ಚಿತ್ರದ ಕಥೆ ಮಹತ್ವವುಳ್ಳಾದಾಗಿದ್ದು, ಕಥೆಯನ್ನು ಎಲ್ಲಿಯೂ ಕೂಡ ಡ್ರಾಪ್ ಮಾಡಬಾರದು ಎಂಬ ಕಾರಣಕ್ಕೆ ಕಥೆಯಲ್ಲಿ ಎಲ್ಲಿಯೂ ಕೂಡ ಎಡಿಟ್ ಮಾಡದೇ ಧೀರ್ಘವಾಗಿರುವ ಈ ಪುಷ್ಪಾ ಚಿತ್ರದ ಸ್ಟೋರಿಯನ್ನೇ ಇಟ್ಟುಕೊಂಡು ಈ ಚಿತ್ರವನ್ನು ಎರಡು ಭಾಗಗಳಾಗಿ ರಿಲೀಸ್ ಮಾಡುವ ಯೋಜನೆ ಮಾಡಿಕೊಂಡಿದೆ ಪುಷ್ಷಾ ಚಿತ್ರತಂಡ. ಈ ಬಹುಕೋಟಿ ವೆಚ್ಚದ ಪುಷ್ಪಾ ಸಿನಿಮಾಗೆ ನವೀನ್ ಏರ್ನೇನಿ ವೈರವಿಶಂಕರ್ ಬಂಡವಾಳ ಹೂಡಿದ್ದಾರೆ. ಪುಷ್ಪಾ ಪಾರ್ಟ್1 ಇದೇ ಡಿಸೆಂಬರ್ 17ರಂದು ಗ್ರ್ಯಾಂಡ್ ಆಗಿ ದೇಶಾದ್ಯಂತ ಬಿಡುಗಡೆ ಆಗಲಿದೆ.

ಕನ್ನಡತಿ ರಶ್ಮಿಕಾ ಮಂದಣ್ಣ, ಕನ್ನಡಿಗ ಜನಪ್ರಿಯ ನಟ ಡಾಲಿ ಧನಂಜಯ್, ಮಲೆಯಾಳಂನ ಖ್ಯಾತ ನಟ ಫಹಾದ್ ಫಾಸಿಲ್, ತೆಲುಗಿನ ಜಗಪತಿ ಬಾಬು, ತಮಿಳಿನ ನಟ ಸುನೀಲ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಮಾಡಿದ್ದಾರೆ. ತೆಲುಗು, ಕನ್ನಡ, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆ ಸೇರಿದಂತೆ ಪಂಚ ಭಾಷೆಯಲ್ಲಿ ಯಲ್ಲಿ ರಿಲೀಸ್ ಆಗಲಿದೆ. ಇದರ ನಡುವೆ ಪುಷ್ಪಾ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ನಟ ಅಲ್ಲು ಅರ್ಜುನ್ ಅವರಿಗೆ ಗಿಫ್ಟ್ ಪ್ಯಾಕ್ ಫೋಟೋವನ್ನು ನೀಡಿ ಸರ್. ಆಲ್ ದಿ ಬೆಸ್ಟ್ ಟು ಅಸ್ ಫಾರ್ ಪುಷ್ಪಾ ಎಂದು ಸಂದೇಶ ಬರೆದು ಉಡುಗೊರೆಯಾಗಿ ನೀಡಿದ್ದಾರೆ. ರಶ್ಮಿಕಾ ಕಳಿಸಿದ ಈ ಸ್ಪೆಶಲ್ ಗಿಫ್ಟ್ ಪ್ಯಾಕ್ ಫೋಟೋವನ್ನು ಅಲ್ಲು ಅರ್ಜುನ್ ತಮ್ಮ ಇನ್ಸ್ಟಾ ಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡು ರಶ್ಮಿಕಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

%d bloggers like this: