ಇದೇ ವಾರ ಅನಿಶ್ ತೇಜೇಶ್ವರ್ ಅವರ ಹೊಸ ಬಹು ನಿರೀಕ್ಷಿತ ಚಿತ್ರ ಬಿಡುಗಡೆ

ವಾಸು ಪಕ್ಕಾ ಕಮರ್ಷಿಯಲ್, ರಾಮಾರ್ಜುನ ಸಿನಿಮಾ ಆದ್ಮೇಲೆ ನಟ ಅನೀಶ್ ತೇಜೇಶ್ವರ್ ಅವರು ಸೈಲೆಂಟಾಗಿ ಬೆಂಕಿ ಅನ್ನೋ ಸಿನಿಮಾ ಮಾಡಿ ಮುಗಿಸಿದ್ದಾರೆ. ಈ ಬೆಂಕಿ ಚಿತ್ರವನ್ನು ಕನ್ನಡದ ಖ್ಯಾತ ನಿರ್ದೇಶಕರಾಗಿದ್ದ ಎ.ಆರ್.ಬಾಬು ಅವರ ಪುತ್ರ ಶಾನ್ ನಿರ್ದೇಶನ ಮಾಡಿದ್ದಾರೆ. ಶಾನ್ ಅವರು ಇದೇ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರೋ ಚಿತ್ರಕ್ಕೆ ಸ್ವತಃ ಅನೀಶ್ ತೇಜೇಶ್ವರ್ ಅವರೇ ವಿಂಕ್ ವಿಷಲ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಅನೀಶ್ ಅವರ ಜೊತೆಯಲ್ಲಿ ರವಿಕುಮಾರ್, ನಂದೀಶ್, ಶ್ರೀಕಾಂತ್ ಜಂಟಿ ನಿರ್ಮಾಪಕರಾಗಿದ್ದಾರೆ. ಅನೀಶ್ ತೇಜೇಶ್ವರ್ ಗೆ ನಾಯಕಿಯಾಗಿ ರೈಡರ್ ಚಿತ್ರ ಖ್ಯಾತಿಯ ನಟಿ ಸಂಪದ ಹುಲಿವಾನ ನಟಿಸಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಶ್ರುತಿ ಪಾಟೀಲ್, ಅಚ್ಯುತ್ ಕುಮಾರ್, ಸಂಪತ್, ಉಗ್ರಂ ಮಂಜು, ಹರಿಣಿ ಬಣ್ಣ ಹಚ್ಚಿದ್ದಾರೆ. ಕೌಶಿಕ್ ಹರ್ಷ ರಾಗ ಸಂಯೋಜನೆ ಮಾಡಿದ್ದಾರೆ. ಅನೀಶ್ ತೇಜೇಶ್ವರ್ ಗೆ ಇದು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ಯಾಕಪ್ಪ ಅಂದ್ರೆ ಈಗಾಗಲೇ ಮಾಸ್ ಆಗಿ ಸಕ್ಸಸ್ ಕಾಣಬೇಕು ಅಂತ ಕಮರ್ಷಿಯಲ್ ವಾಸು, ರಾಮಾರ್ಜುನ ಅಂತ ಉತ್ತಮ ಕಂಟೆಂಟ್ ಹೊಂದಿರೋ ಸಿನಿಮಾ ಮಾಡಿದ್ರು ಕೂಡ ಸಕ್ಸಸ್ ಪಡೆದಿಲ್ಲ. ಹಾಗಾಗಿ ಈ ಬಾರಿ ಅನೀಶ್ ಹೇಗಾದ್ರು ಮಾಡಿ ಗೆಲ್ಲಲೇಬೇಕು ಎಂಬ ಹಠದಿಂದ ರಗಡ್ ಆಗಿ ಹಳ್ಳಿಭಾಗದ ಹೈದನಾಗಿ ಬೆಂಕಿ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಬೆಂಕಿ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಭಾರಿ ಕುತೂಹಲ ಮೂಡಿಸಿದೆ. ವಿಶೇಷ ಅಂದರೆ ಬೆಂಕಿ ಸಿನಿಮಾದಲ್ಲಿನ ಅಣ್ಣ ತಂಗಿ ಭಾಂಧವ್ಯದ ಹಾಡೊಂದಿದ್ದು, ಈ ಹಾಡನ್ನೂ ಜೋಗಿ ಪ್ರೇಮ್ ಹಾಡಿದ್ದಾರೆ. ಅನೀಶ್ ಅವರ ಸಿನಿಮಾಗಳು ಅಂದರೆ ಅದರಲ್ಲಿ ಭರ್ಜರಿ ಫೈಟ್ಸ್, ಸಖತ್ ಡ್ಯಾನ್ಸ್ ಇದ್ದೇ ಇರುತ್ತದೆ. ಅದರಂತೆ ಬೆಂಕಿ ಸಿನಿಮಾದಲ್ಲಿಯೂ ಕೂಡ ಅನೀಶ್ ತೇಜೇಶ್ವರ್ ಅವರು ರಗಡ್ ಆಗಿ ಹಳ್ಳಿ ಹೈದನ ಪಾತ್ರದಲ್ಲಿ ಮಿಂಚಿದ್ದಾರಂತೆ. ಒಟ್ಟಾರೆಯಾಗಿ ಈ ಬಾರಿ ಶತಾಯಗತಾಯ ಗೆಲ್ಲಲೇಬೇಕು ಎಂದು ಅನೀಶ್ ತೇಜೇಶ್ವರ್ ಅವರು ಇದೇ ಜುಲೈ 15ರಂದು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದ್ದಾರೆ.

%d bloggers like this: