ಇದೇ ವಾರ ಬಿಡುಗಡೆ ಆಗಲಿದೆ ಕನ್ನಡದ ಬಹು ನಿರೀಕ್ಷಿತ ‘ಓಲ್ಡ್ ಮಾಂಕ್’ ಚಿತ್ರ

ಕೋವಿಡ್ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಯಿಂದ ಮುಕ್ತಿ ದೊರೆತು ಚಿತ್ರಮಂದಿರಗಳಲ್ಲಿ ಶೇಕಡ ನೂರರಷ್ಟು ಆಕ್ಯೂಪೆನ್ಸಿ ಅವಕಾಶ ಸಿಕ್ಕಿದೊಡನೆ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಚಿತ್ರಗಳ ಕಲರವ ಹೆಚ್ಚಾಗಿದೆ. ಈಗಾಗಲೇ ಸಿನಿಮಾದ ಎಲ್ಲಾ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿಕೊಂಡು ಬಿಡುಗಡೆಗೆ ಸಿದ್ದವಾಗಿದ್ದ ಸಾಲು ಸಾಲು ಸಿನಿಮಾಗಳು ಇದೀಗ ಚಿತ್ರ ಮಂದಿರಗಳತ್ತ ದಾಪು ಗಾಲಿಡುತ್ತಿವೆ. ಇತ್ತಿಚೆಗೆ ತಾನೇ ಡಾರ್ಲಾಂಗ್ ಕೃಷ್ಣ ನಿರ್ದೇಶನದ ಜೊತೆಗೆ ಅಭಿನಯ ಮಾಡಿರುವ ಲವ್ ಮಾಕ್ಟೇಲ್, ಹರಿ ಸಂತೋಷ್ ನಿರ್ದೇಶನದ ಧನ್ವೀರ್ ಅವರ ಎರಡನೇ ಸಿನಿಮಾ ಬೈ ಟೂ ಲವ್ ಸಿನಿಮಾ ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಾ ಯಶಸ್ವಿಯಾಗಿವೆ. ಇದೀಗ ಟೋಪಿವಾಲ ಸಿನಿಮಾ ನಿರ್ದೇಶನ ಮಾಡಿ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಗಮನ ಸೆಳೆದ ಆರ್.ಜೆ.ಶ್ರೀನಿ ಅವರ ನಟನೆಯ ಓಲ್ಡ್ ಮಾಂಕ್ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.

ಹೌದು ಆರ್.ಜೆ.ಶ್ರೀನಿ ಅವರು ನಿರ್ದೇಶನದ ಜೊತೆಗೆ ಶ್ರೀನಿವಾಸ ಕಲ್ಯಾಣ, ಬೀರ್ ಬಲ್, ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಯಶಸ್ವಿಯಾಗಿದ್ದಾರೆ. ಇದೀಗ ಓಲ್ಡ್ ಮಾಂಕ್ ಎಂಬ ಚಿತ್ರದ ಮೂಲಕ ಮತ್ತೆ ಕನ್ನಡ ಸಿನಿ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ನೀಡಲು ಚಿತ್ರ ಮಂದಿರಗಳಿಗೆ ಇದೇ ಫೆಬ್ರವರಿ 25ರಂದು ಓಲ್ ಮಾಂಕ್ ಸಿನಿಮಾ ರಾಜ್ಯಾದ್ಯಂತ ಸರಿ ಸುಮಾರು ನೂರಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ರಿಲೀಸ್ ಆಗಲಿದೆ. ಈ ಓಲ್ಡ್ ಮಾಂಕ್ ಸಿನಿಮಾದಲ್ಲಿ ಶ್ರೀನಿ ಅವರಿಗೆ ನಾಯಕಿಯಾಗಿ ಅಧಿತಿ ಪ್ರಭುದೇವ ನಟಿಸಿದ್ದಾರೆ. ಈಗಾಗಲೇ ಈ ಚಿತ್ರದ ಟೀಸರ್, ಟ್ರೇಲರ್ ಮತ್ತು ಗಿಚ್ಚಿ ಗಿಲಿ ಸಾಂಗ್ ಸೂಪರ್ ಹಿಟ್ ಆಗಿದೆ. ಈ ಗಿಚ್ಚಿ ಗಿಲಿ ಗಿಲಿ ಸಾಂಗ್ ಅನ್ನು ಹುಬ್ಬಳ್ಳಿಯ ಬಸವರಾಜ ಮೊರಬ ಎಂಬುವವರು ಹಾಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ಗಿಚ್ಚಿ ಗಿಚ್ಚಿ ಸಾಂಗ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆಯಂತೆ.

ಈ ಬಗ್ಗೆ ನಟ ಕಮ್ ನಿರ್ದೇಶಕ ಶ್ರೀನಿ ಅವರು ತಮ್ಮ ಓಲ್ಡ್ ಮಾಂಕ್ ಚಿತ್ರದ ಬಗ್ಗೆ ಮಾತನಾಡುತ್ತಾ ಚಿತ್ರಕ್ಕೆ ಬಂಡವಾಳವನ್ನು ಪ್ರದೀಪ್ ಶರ್ಮಾ ಮತ್ತು ಅವರ ಒಂದಿಬ್ಬರು ಸ್ನೇಹಿತರಟ್ಟಿಗೆ ಅವರು ಕೂಡ ಹಾಕಿದ್ದಾರಂತೆ. ಓಲ್ಡ್ ಮಾಂಕ್ ಸಿನಿಮಾದಲ್ಲಿ ಅಧಿತಿ ಪ್ರಭುದೇವ, ಸುಜಯ್ ಶಾಸ್ತ್ರಿ, ಅರುಣ ಬಾಲರಾಜ್. ಎಸ್.ನಾರಾಯಣ್, ಸಿಹಿ ಕಹಿ ಚಂದ್ರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರಂತೆ. ಇನ್ನು ಛಾಯಾಗ್ರಾಹಕರಾಗಿ ಭರತ್ ಪರುಶರಾಮ್ ಅವರು ಕೆಲಸ ಮಾಡಿದ್ದು, ದೀಪು ಎಸ್.ಕುಮಾರ್ ಅವರು ಸಂಕಲನ ಮಾಡಿದ್ದಾರೆ. ಒಟ್ಟಾರೆಯಾಗಿ ಬೀರ್ ಬಲ್ ಚಿತ್ರದ ಯಶಸ್ಸಿನ ನಂತರ ನಟ, ನಿರ್ದೇಶಕ ಶ್ರೀನಿ ಅವರು ಈ ಓಲ್ಡ್ ಮಾಂಕ್ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದರಂತೆ ಓಲ್ಡ್ ಮಾಂಕ್ ಸಿನಿಮಾ ಈಗಾಗಲೇ ಟ್ರೇಲರ್ ಮೂಲಕ ಕುತೂಹಲ ಮೂಡಿಸಿದೆ. ಪ್ರೇಕ್ಷಕರ ಈ ಕುತೂಹಲಕ್ಕೆ ಫೆಬ್ರವರಿ 25ರಂದು ಉತ್ತರ ಸಿಗಲಿದೆ.

%d bloggers like this: