ಇದೇ ವಾರ ಬಿಡುಗಡೆ ಆಗುತ್ತಿದೆ ಸಂಚಾರಿ ವಿಜಯ್ ಅವರ ಕೊನೆಯ ಚಿತ್ರ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ದಿವಂಗತ ಸಂಚಾರಿ ವಿಜಯ್ ಅಭಿನಯದ ಅಂತಿಮ ಸಿನಿಮಾ ತಲೆದಂಡ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಅಪಘಾತವಾಗಿ ಅಕಾಲಿಕ ನಿಧನರಾದ ನಟ ಸಂಚಾರಿ ವಿಜಯ್ ಅವರು ಬಿ.ಎಸ್ ಲಿಂಗದೇವರು ನಿರ್ದೇಶನ ಮಾಡಿದ ನಾನು ಅವನಲ್ಲ ಅವಳು ಎಂಬ ಸಾಮಾಜಿಕ ಸಿನಿಮಾದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಗಮನ ಸೆಳೆದು ರಾಷ್ಟ್ರ ಪ್ರಶಸ್ತಿ ಪಡೆದ ನಟ ಸಂಚಾರಿ ವಿಜಯ್ ಅವರು ಕಳೆದ ವರ್ಷ ಅಪಘಾತವಾಗಿ ಅಕಾಲಿಕ ಮರಣ ಹೊಂದಿದರು. ರಂಗಭೂಮಿ ಹಿನ್ನೆಲೆಯಿಂದ ಬಂದ ಸಂಚಾರಿ ವಿಜಯ್ ಅವರು ಕನ್ನಡ ಚಿತ್ರರಂಗದ ವಿಭಿನ್ನ ನಟರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಸಂಚಾರಿ ವಿಜಯ್ ಅವರು ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಒಗ್ಗರಣೆ, ಕಿಲ್ಲಿಂಗ್ ವೀರಪ್ಪನ್, ರಂಗಪ್ಪ ಹೋಗ್ಬಿಟ್ಟ, ರಾಮ ರಾಮ ರಘು ರಾಮ, ದಾಸವಾಳ, ಹರಿವು, ಅಲ್ಲಮ, ಆಕ್ಟ್ 1978, ನಾತಿಚರಾಮಿ, ಜಂಟಲ್ ಮ್ಯಾನ್, ಪುಕ್ಸಟ್ಟೆ ಲೈಫೂ ಹೀಗೆ ಅನೇಕ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದರು.

ಸಂಚಾರಿ ವಿಜಯ್ ಅವರು ನಿಧನರಾಗುವ ಮುನ್ನ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದರು. ಆದರೆ ಅವು ಬಿಡುಗಡೆ ಆಗಿರಲಿಲ್ಲ. ನಟ ಸಂಚಾರಿ ವಿಜಯ್ ಅವರು ಅಕಾಲಿಕ ನಿಧನರಾದ ಕಾರಣ ಚಿತ್ರ ತಂಡ ಕೂಡ ಅವರ ಅನುಪಸ್ಥಿತಿಯಲ್ಲಿ ಅವರ ಅಭಿನಯಿಸಿದ ಚಿತ್ರವನ್ನ ಬಿಡುಗಡೆ ಮಾಡುವುದಕ್ಕೆ ಕೊಂಚ ತಡ ಮಾಡಿತು. ಇದೀಗ ಅವರ ನಟನೃಯ ಕೊನೆಯ ಚಿತ್ರ ತಲೆದಂಡ ಸಿನಿಮಾ ಇದೇ ಏಪ್ರಿಲ್ ಒಂದೊಂದು ರಾಜ್ಯಾದ್ಯಂತ ಬಿಡುಗಡೆಗೆ ಸಿದ್ದವಾಗಿದೆ. ತಲೆದಂಡ ಚಿತ್ರದ ನಿರ್ದೇಶಕರಾದ ಪ್ರವೀಣ್ ಕೃಪಾಕರ್ ಅವರು ತಮ್ಮ ಪತ್ನಿ ಹೇಮಮಾಲಿನಿ ಅವರನ್ನೇ ನಿರ್ಮಾಪಕಿ ಆಗಿಸಿ ತಾವೇ ಬಂಡವಾಳ ಹೂಡಿದ್ದಾರೆ. ಸಂಚಾರಿ ವಿಜಯ್ ಅವರು ತಲೆದಂಡ ಚಿತ್ರದಲ್ಲಿ ಹುಬ್ಬಳ್ಳಿ ಭಾಗದ ಅರೆ ಬುದ್ಥಿಮಾಂದ್ಯನ ಹುಡುಗನ ಪಾತ್ರದಲ್ಲಿ ಅಮೋಘವಾಗಿ ನಟಿಸಿದ್ದಾರೆ.

ಈಗಾಗಲೇ ಬಿಡುಗಡೆ ಆಗಿರುವ ತಲೆದಂಡ ಚಿತ್ರದ ಟ್ರೇಲರ್ ನಲ್ಲಿ ವಿಜಯ್ ಅವರ ನಟನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಚೈತ್ರಾ ಆಚಾರ್ ಎಂಬ ಕಲಾವಿದೆ ವಿಜಯ್ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ. ಇನ್ನು ಸಂಚಾರಿ ವಿಜಯ್ ಅವರ ತಾಯಿಯ ಪಾತ್ರದಲ್ಲಿ ರಂಗಾಯಣ ರಘು ಅವರ ಧರ್ಮಪತ್ನಿ ಮಂಗಳ ಅವರು ಬಣ್ಣ ಹಚ್ಚಿದ್ದಾರೆ. ಜೊತೆಗೆ ಮಂಡ್ಯ ರಮೇಶ್, ರಮೇಶ್ ಪಂಡಿತ್, ಬಿ.ಸುರೇಶ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಪ್ರವೀಣ್ ಕೃಪಾಕರ್ ಅವರು ವಿಜಯ್ ಅವರನ್ನ ನೆನೆದು ಕೊಂಚ ಭಾವುಕರಾಗಿ ಮಾತನಾಡಿದ್ದಾರೆ. ಒಟ್ಟಾರೆಯಾಗಿ ಇದೇ ಏಪ್ರಿಲ್ 1ರಂದು ಸಂಚಾರಿ ವಿಜಯ್ ಅವರು ನಟಿಸಿದ ಕೊನೆಯ ಚಿತ್ರ ತಲೆದಂಡ ಸಿನಿಮಾ ಬೆಳ್ಳಿ ತೆರೆ ಮೇಲೆ ಬರಲಿದೆ. ಚಿತ್ರಕ್ಕೆ ಹರಿಕಾವ್ಯ ರಾಗ ಸಂಯೋಜನೆ ಮಾಡಿದ್ದು, ಅಶೋಕ್ ಕಶ್ಯಪ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ.

%d bloggers like this: