ಇದೇ ವಾರದಲ್ಲಿ ಕನ್ನಡದಲ್ಲಿ ಶುರುವಾಗುತ್ತಿದೆ ಹೊಸ ಧಾರಾವಾಹಿ

ಇತ್ತೀಚೆಗೆ ಹಿಂದಿ ಭಾಷೆಯಲ್ಲಿ ಫೇಮಸ್ ಆಗಿರುವ ಎಷ್ಟೋ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗುತ್ತಿವೆ. ಕಳೆದ ಎರಡು ವರ್ಷಗಳಿಂದ ಬೇರೆ ಭಾಷೆಯಲ್ಲಿ ಉತ್ತಮವಾಗಿ ಪ್ರಸಾರವಾಗಿರುವ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗುತ್ತಿವೆ. ಕೋವಿಡ್ ಸಮಯದಲ್ಲಿ ಲಾಕ್ಡೌನ್ ಆದ ಕಾರಣ ಸಿನಿಮಾ ಹಾಗೂ ಧಾರವಾಹಿಗಳ ಶೂಟಿಂಗ್ ಗಳು ಅರ್ಧಕ್ಕೆ ನಿಂತು ಹೋಗಿದ್ದವು. ಎಲ್ಲ ಜನರು ಮನೆಯಲ್ಲಿಯೇ ಕುಳಿತು ಕಾಲ ಕಳೆಯಬೇಕಿತ್ತು. ಆದರೆ ಜನರ ಮನರಂಜನೆಗಾಗಿ ಧಾರಾವಾಹಿಗಳು ಪ್ರಸಾರವಾಗಬೇಕಾಗಿದ್ದ ಶೂಟಿಂಗ್ ನಡೆಯದಿರುವ ಕಾರಣ ಧಾರಾವಾಹಿಗಳು ಅರ್ಧಕ್ಕೆ ನಿಂತು ಹೋಗಿದ್ದವು. ಆದ್ದರಿಂದ ಈಗಾಗಲೇ ಪ್ರಸಾರವಾಗಿ ಜನರ ಮೆಚ್ಚುಗೆಯನ್ನು ಪಡೆದ ಹಿಂದಿ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿದ್ದವು.

ರಾಮಾಯಣ, ಮಹಾಭಾರತ, ರಾಧಾಕೃಷ್ಣ ಸೇರಿದಂತೆ ಹಲವಾರು ಭಕ್ತಿಪ್ರಧಾನ ಹಾಗೂ ಪೌರಾಣಿಕ ಧಾರಾವಾಹಿಗಳು ಪ್ರಸಾರವಾಗಿದ್ದವು. ಇದೀಗ ಅದೇ ರೀತಿ ಕಿರುತೆರೆಗೆ ಬಾಲ ಶಿವನ ಪಾದಾರ್ಪಣೆಯಾಗುತ್ತಿದೆ. ಹೌದು ಹಿಂದಿ ಧಾರಾವಾಹಿಯ ಬಾಲಶಿವ್ ಕನ್ನಡಕ್ಕೆ ಡಬ್ ಆಗುತ್ತಿದೆ. ಶಿವನ ಹಲವಾರು ಭಕ್ತಿಪ್ರಧಾನ ಧಾರವಾಹಿಗಳನ್ನು ನಾವು ನೋಡಿರುತ್ತೇವೆ. ಶಿವ ಪಾರ್ವತಿಯ ಕಥೆ, ಶಿವ ಹಾಗೂ ಸತಿಯ ಕಥೆಯನ್ನು ನಾವು ನೋಡಿದ್ದೇವೆ. ಆದರೆ ಇದು ಇದೆಲ್ಲದಕ್ಕಿಂತ ವಿಭಿನ್ನ ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ ಇದು ಬಾಲ ಶಿವನ ಕಥೆ. ಶಿವನು ಬಾಲ್ಯದಲ್ಲಿದ್ದಾಗ ಮಾಡಿದ ತುಂಟಾಟಗಳನ್ನು ನಾವು ಈ ಧಾರಾವಾಹಿಯಲ್ಲಿ ಕಾಣಬಹುದು. ಶಿವನ ಚಾಣಕ್ಯತೆ, ಚತುರತೆ ಇದೆಲ್ಲವನ್ನು ಈ ಕಥೆಯಲ್ಲಿ ಕಾಣಬಹುದು.

ಇದು ಹಿಂದಿ ಧಾರಾವಾಹಿಯ ಬಾಲಶಿವ್ ಧಾರವಾಹಿಯಾಗಿದ್ದು ಕನ್ನಡಕ್ಕೆ ಡಬ್ ಆಗುತ್ತಿದೆ. ಈಗಾಗಲೇ ಪ್ರಸಾರವಾಗಿರುವ ಪ್ರೊಮೋ ಮೂಲಕವೇ ಜನರು ಬಾಲ ಶಿವನನ್ನು ಮೆಚ್ಚಿಕೊಂಡಿದ್ದಾರೆ. ಸದ್ಯಕ್ಕೆ ಈ ಧಾರಾವಾಹಿಯ ಪ್ರಸಾರಕ್ಕಾಗಿ ವೀಕ್ಷಕರು ಎದುರು ನೋಡುತ್ತಿದ್ದಾರೆ. ಬಾಲಶಿವ ಧಾರಾವಾಹಿ ಯಾವಾಗ ಪ್ರಸಾರವಾಗುತ್ತದೆ ಎಂದು ಎಲ್ಲರೂ ಕೇಳುತ್ತಿದ್ದರು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹೌದು ಇದೇ ಮಹಾಶಿವರಾತ್ರಿಗೆ ಬಾಲಶಿವ ನಿಮ್ಮೆಲ್ಲರ ಮನೆಯಲ್ಲಿ ತಾಂಡವವಾಡಲು ಸಜ್ಜಾಗಿದ್ದಾರೆ. ಮಹಾ ಶಿವರಾತ್ರಿಯ ಪ್ರಯುಕ್ತ ಇದೇ ಫೆಬ್ರವರಿ 28ರಿಂದ ಪ್ರತೀ ದಿನ 3:00 ಗಂಟೆಗೆ ಬಾಲಶಿವ ಧಾರಾವಾಹಿ ಪ್ರಸಾರವಾಗಲಿದೆ. ತನ್ನ ಡಮರುಗದ ಸದ್ದಿನಿಂದ ನಮ್ಮೆಲ್ಲರನ್ನು ಭಕ್ತಿಯ ಲೋಕಕ್ಕೆ ಕರೆದುಕೊಂಡು ಹೋಗಲು ಬಾಲಶಿವ ಬರುತ್ತಿದ್ದಾನೆ.

%d bloggers like this: