ಇದೇ ವಾರ ಕನ್ನಡದಲ್ಲಿ ಶುರುವಾಗುತ್ತಿದೆ ಹೊಚ್ಚ ಹೊಸ ಕೌಟುಂಬಿಕ ಧಾರಾವಾಹಿ

ಈಗ ಎಲ್ಲೆಡೆ ಸೀರಿಯಲ್ ಗಳದ್ದೇ ಕಾರುಬಾರು. ಹಲವಾರು ಸೀರಿಯಲ್ ಗಳು ಹೊಸದಾಗಿ ಪ್ರಸಾರವಾಗುತ್ತಿವೆ ಮತ್ತು ಹಲವು ತಮ್ಮ ಪ್ರಸಾರವನ್ನು ಮುಗಿಸುತ್ತಿವೆ. ಇತ್ತೀಚೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾವ್ಯಾಂಜಲಿ ಧಾರಾವಾಹಿ ತನ್ನ ಪ್ರಸಾರವನ್ನು ಮುಗಿಸಿದೆ ಮತ್ತು ಇದೀಗ ಕಾವ್ಯಾಂಜಲಿ ತಂಡದ ಮತ್ತೊಂದು ಹೊಸ ಕಥೆ ಪ್ರಸಾರವಾಗುತ್ತಿದೆ. ಹೌದು ಉದಯವಾಹಿನಿಯಲ್ಲಿ ಮದುಮಗಳು ಎಂಬ ಹೊಸ ಧಾರಾವಾಹಿ ಪ್ರಸಾರವಾಗಲು ಸಜ್ಜಾಗಿದೆ. ವಿಭಿನ್ನವಾದ ಕಥಾಹಂದರ ಹೊಂದಿರುವ ಈ ಧಾರಾವಾಹಿಯು ತನ್ನ ಮನೆಗೆ ಮಗಳಾಗಿ ಬರುವ ಬದಲು ಸೊಸೆಯಾಗಿ ಮನೆ ಸೇರುವಂತಹ ಹುಡುಗಿಯ ಕಥೆಯಾಗಿದೆ. ದೊಡ್ಡ ಮನೆತನದ, ಜವಾಬ್ದಾರಿಯುತ ಮತ್ತು ಪರಿಪೂರ್ಣ ಸೊಸೆ ಕಥೆಯ ನಾಯಕಿ ಮಧುವಂತಿ.

ಇವಳು ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿ ಆ ಮಗುವಿನ ಬದಲಿಗೆ ಕಾರಣಾಂತರಗಳಿಂದ ಬೇರೆಯವರ ಗಂಡು ಮಗುವನ್ನು ತನ್ನ ಮಡಿಲಿನಲ್ಲಿ ಇಟ್ಟುಕೊಂಡು ಬೆಳೆಸುತ್ತಾಳೆ. ಮಧುವಂತಿಯ ಮಡಿಲಲ್ಲಿ ಬೆಳೆದ ಕಥೆಯ ನಾಯಕ ಶಿಶಿರ್, ತನಗೆ ಆಡಂಬರದ ಜೀವನ ಇಷ್ಟವಿಲ್ಲದಿದ್ದರೂ ತನ್ನ ಅಮ್ಮನ ಘನತೆಗೆ ತಕ್ಕಂತೆ ಬೆಳೆದಿರುತ್ತಾನೆ. ಹಾಗೆಯೇ ಮಧುವಂತಿ ಕೂಡ ತನ್ನ ಮಗನ ಆಸೆಗೆ ಭಂಗ ಬರದಂತೆ ನೋಡಿಕೊಳ್ಳುವುದಾಗಿ ಹೇಳಿರುತ್ತಾಳೆ. ಈ ಕಥೆಯಲ್ಲಿ ಅಮ್ಮ ಹಾಗೂ ಮಗನ ನಡುವಿನ ಬಾಂಧವ್ಯವನ್ನು ಉತ್ತಮವಾಗಿ ತೋರಿಸಲಾಗಿದೆ. ಕಾಲಕಳೆದಂತೆ ನಾಯಕ ಹಾಗೂ ನಾಯಕಿಯ ನಡುವೆ ಪ್ರೇಮ ಬೆಳೆಯುತ್ತದೆ. ಹುಟ್ಟಿದ ಕೂಡಲೇ ಕಾರಣಾಂತರಗಳಿಂದ ಅಮ್ಮನಿಂದ ಬೇರಾದ ಹುಡುಗಿ, ಮುಂದೆ ಅಮ್ಮ ಸಾಕಿದ್ದ ಹುಡುಗನ ಪ್ರೇಯಸಿಯಾಗುತ್ತಾಳೆ.

ಇವಳು ತಾನೇ ಹೆತ್ತು ಬಿಟ್ಟು ಬಂದ ಮಗಳೆಂಬ ಅರಿವಿಲ್ಲದೆ, ಇವಳನ್ನು ದ್ವೇಷಿಸುವ ಅಮ್ಮ ಮತ್ತು ಸೊಸೆಯಾಗಿ ಮನೆಸೇರುವ ಮಗಳ ನಡುವಿನ ಕಥೆ ಇದಾಗಿದೆ. ಈ ಸೀರಿಯಲ್ ನಲ್ಲಿ ಮುಖ್ಯಪಾತ್ರದಲ್ಲಿ ರಕ್ಷಿತಾ ಮತ್ತು ಭವಿಷ್ ನಟಿಸುತ್ತಿದ್ದಾರೆ. ಮತ್ತು ತಾಯಿಯ ಪಾತ್ರದಲ್ಲಿ ರಂಗೋಲಿ ಧಾರಾವಾಹಿ ಖ್ಯಾತಿಯ ಸಿರಿ ನಟಿಸುತ್ತಿದ್ದಾರೆ. ಬೆಳ್ಳಿ ತೆರೆಯಲ್ಲಿ ತನ್ನ ವಿಶಿಷ್ಟ ಪಾತ್ರಗಳಿಂದ ಛಾಪು ಮೂಡಿಸಿರುವ ಸುಂದರ್ ವೀಣಾ ಅವರು ಈ ಧಾರವಾಹಿಯಲ್ಲಿ ಬಣ್ಣಹಚ್ಚಿದ್ದಾರೆ. ಹಾಗೂ ಈ ಧಾರಾವಾಹಿಯಲ್ಲಿ ನಟ ಭವಿಷ್ ನಾಯಕ ಮತ್ತು ನಾಯಕಿ ರಕ್ಷಿತಾ ಇಬ್ಬರೂ ಹೊಸ ಪ್ರತಿಭೆಗಳಾಗಿದ್ದಾರೆ. ಇನ್ನು ಈ ಧಾರವಾಹಿಯನ್ನು ಆದರ್ಶ ಹೆಗಡೆ ನಿರ್ದೇಶಿಸುತ್ತಿದ್ದು ರುದ್ರಮುನಿ ಬೆಳಗೆರೆ ಛಾಯಾಗ್ರಾಹಕರಾಗಿದ್ದಾರೆ. ಕಾವ್ಯಾಂಜಲಿಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಶಾಕ್ ಸ್ಟುಡಿಯೋಸ್ ಮುಖ್ಯಸ್ಥ ಶಂಕರ್ ವೆಂಕಟರಮಣ ಈ ಧಾರಾವಾಹಿಯ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಮದುಮಗಳು ಧಾರಾವಾಹಿ ನನ್ನ ಜೀವನದ ಅತಿ ಮುಖ್ಯ ಧಾರಾವಾಹಿಯಾಗಿದ್ದು, ನನ್ನ ನಿರ್ಮಾಣದ 15ನೇ ಕಾರ್ಯಕ್ರಮವಾಗಿದೆ. ರೇಖಾ ರಾವ್ ಮೇಡಂ, ಸಿರಿಜ ಮೇಡಂ ಮತ್ತು ಶ್ರೀ ಸುಂದರ ವೀಣಾ ಇವರಂತಹ ಹಿರಿಯ ಕಲಾವಿದರೊಂದಿಗೆ ಕೆಲಸ ಮಾಡಲು ನನಗೆ ಖುಷಿಯಾಗುತ್ತಿದೆ ಎಂದು ನಿರ್ಮಾಪಕರು ಹೇಳಿಕೊಂಡರು. ಕಾವ್ಯಾಂಜಲಿ ಧಾರಾವಾಹಿ ತಂತ್ರಜ್ಞರು ಈ ಧಾರಾವಾಹಿಯಲ್ಲೂ ಕೆಲಸ ಮಾಡುತ್ತಿದ್ದಾರೆ. ತಾನು ಜನ್ಮ ಕೊಟ್ಟ ಹೆಣ್ಣು ಮಗಳು 24 ವರ್ಷಗಳ ನಂತರ ಸೊಸೆಯಾಗಿ ತನ್ನ ಎದುರು ನಿಂತಾಗ ತನ್ನ ಗುಣಗಳನ್ನೇ ಅವಳಲ್ಲಿ ಕಂಡು ಆಶ್ಚರ್ಯಗೊಳ್ಳುವ ತಾಯಿ, ತಪ್ಪನ್ನು ಎತ್ತಿ ತೋರಿಸಿ ತರಾಟೆಗೆ ತೆಗೆದುಕೊಳ್ಳುವ ನಮ್ಮ ಕಥಾನಾಯಕಿ ಗ್ರೀಷ್ಮಾ, ಇವರಿಬ್ಬರ ನಡುವೆ ನಡೆಯುವ ರೋಚಕ ತಿರುವುಗಳನ್ನು ಮದುಮಗಳು ಧಾರಾವಾಹಿ ನಮ್ಮೆಲ್ಲರ ಮುಂದೆ ತರುತ್ತಿದೆ.

%d bloggers like this: