ಇದೇ ವಾರ ನೇರವಾಗಿ ನಿಮ್ಮ ಮನೆಯಲ್ಲೇ ನೋಡಬಹುದು ನೀನಾಸಂ ಸತೀಶ್ ಅವರ ಹೊಸ ಚಿತ್ರವನ್ನು

ಬಹುತೇಕ ಕಡಿಮೆ ಬಜೆಟ್ಟಿನ ಒಂದೊಳ್ಳೆ ಕಂಟೆಂಟ್ ಹೊಂದಿರುವ ಸಿನಿಮಾಗಳಿಗೆ ಈ ಓಟಿಟಿ ಪ್ಲಾಟ್ ಫಾರ್ಮ್ ಅನ್ನೋದು ವರದಾನವಾಗಿದೆ ಎಂದು ತಿಳಿದರೆ ತಪ್ಪಾಗುವುದಿಲ್ಲ. ಯಾಕಂದ್ರೆ ಇಂದು ಸಣ್ಣ ಪುಟ್ಟ ಕಲಾವಿದರು ನಟಿಸುವ ಉತ್ತಮ ಕಥಾ ವಸ್ತು ಇರುವ ಕಡಿಮೆ ಬಜೆಟ್ಟಿನ ಸಿನಿಮಾಗಳಿಗೆ ಥಿಯೇಟರ್ ನಲ್ಲಿ ರಿಲೀಸ್ ಆಗುವುದಕ್ಕೆ ತುಂಬಾನೇ ಕಷ್ಟ ಅಂತ ಹೇಳಬಹುದು. ಅದಕ್ಕೆ ಬಹುಮುಖ್ಯ ಕಾರಣ ಆರ್ಥಿಕ ಪರಿಸ್ಥಿತಿ ಮತ್ತು ಚಿತ್ರದಲ್ಲಿ ಸ್ಟಾರ್ ನಟ ನಟಿಯರು ಇಲ್ಲದಿರುವುದು. ಹಾಗಂತ ಪ್ರತಿಭೆಗಳಿಗೆ ಬೆಲೆ ಇಲ್ಲ ಅಂತ ಹೇಳಲಾಗುವುದಿಲ್ಲ. ಆದರೆ ಅವಕಾಶ ಮತ್ತು ಅದಕ್ಕೆ ಸೂಕ್ತ ವೇದಿಕೆಯ ಜೊತೆಗೆ ಸಿಗಬೇಕಾದ ಬೆಂಬಲ ಮತ್ತು ಪ್ರೋತ್ಸಾಹ ದೊರೆಯುತ್ತಿಲ್ಲ. ಇದೀಗ ಓಟಿಟಿ ಅನ್ನೋದು ಇಂತಹ ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳಿಗೆ ವರದಾನವಾಗಿದೆ ಎಂದು ಹೇಳಬಹುದು. ಹೌದು ಇಂದು ಅನೇಕ ಸ್ಟಾರ್ ನಟರ ಸಿನಿಮಾಗಳೇ ಓಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ರಿಲೀಸ್ ಆಗಿ ಉತ್ತಮ ಗಳಿಕೆ ಮಾಡುತ್ತಿವೆ. ಅದರಂತೆ ಈ ವಾರ ಓಟಿಟಿಯಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾಗಳು ರಿಲೀಸ್ ಆಗುತ್ತಿವೆ.

ಅವುಗಳಲ್ಲಿ ಕನ್ನಡ ಸಿನಿಮಾ ಕೂಡ ಇದೆ. ಇದು ಓಟಿಟಿ ವೀಕ್ಷಕರಿಗೆ ಈ ವಾರಾಂತ್ಯದ ದಿನ ಭರ್ಜರಿ ಹಬ್ಬದೂಟ ಮನರಂಜನೆ ಅಂತಾನೇ ಹೇಳಬಹುದು. ಈ ವಾರ ಓಟಿಟಿಯಲ್ಲಿ ನಮ್ಮ ಸ್ಯಾಂಡಲ್ ವುಡ್ ಅಭಿನಯ ಚತುರ ನೀನಾಸಂ ಸತೀಶ್ ಅಭಿನಯದ ಡಿಯರ್ ವಿಕ್ರಂ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರ ನೋಡಿದ ಸಿನಿಪ್ರಿಯರು ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಚಿತ್ರ ಸಾಮಾಜಿಕ ಕಳಕಳಿ ಸಂದೇಶ ಹೊಂದಿರುವ ಸಿನಿಮಾವಾಗಿದ್ದು, ಡಿಯರ್ ವಿಕ್ರಂ ಸಿನಿಮಾದಲ್ಲಿ ನೀನಾಸಂ ಸತೀಶ್ ಅವರಿಗೆ ನಾಯಕಿಯಾಗಿ ಶ್ರದ್ದಾ ಶ್ರೀನಾಥ್ ನಟಿಸಿದ್ದಾರೆ. ಅದೇ ರೀತಿಯಾಗಿ ಟಾಲಿವುಡ್ ನ್ಯಾಚುರಲ್ ಬ್ಯೂಟಿ ಎನಿಸಿಕೊಂಡಿರುವ ನಟಿ ಸಾಯಿ ಪಲ್ಲವಿ ಮತ್ತು ರಾಣಾ ದಗ್ಗುಬಾಟಿ ಅಭಿನಯದ ವಿರಾಟ ಪರ್ವಂ ಕೂಡ ನೆಟ್ ಫ್ಲೆಕ್ಸ್ ನಲ್ಲಿ ಜುಲೈ ಒಂದರಂದು ರಿಲೀಸ್ ಆಗಿದೆ. ಇದೀಗ ಕಾಲಿವುಡ್ ಸೂಪರ್ ಸ್ಟಾರ್ ನಟ ಕಮಲ್ ಹಾಸನ್ ಅವರ ನಟನೆಯ ತಮಿಳಿನ ವಿಕ್ರಂ ಸಿನಿಮಾ ಕೂಡ ಓಟಿಟಿ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಇದೇ ಜುಲೈ8 ರಂದು ರಿಲೀಸ್ ಆಗಲಿದೆ ಎಂದು ತಿಳಿದು ಬಂದಿದೆ.

ಲೋಕೇಶ್ ಕನಗರಾಜ್ ಅವರ ಈ ವಿಕ್ರಂ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿ ನಟ ಕಮಲ್ ಹಾಸನ್ ಅವರಿಗೆ ಒಂದೊಳ್ಳೆ ಬ್ರೇಕ್ ಕೂಡ ನೀಡಿತ್ತು. ಈ ಚಿತ್ರ ಇದೀಗ ಓಟಿಟಿಯಲ್ಲಿ ಬರ್ತಿರೋದು ಕಮಲ್ ಹಾಸನ್ ಅವರ ಅಭಿಮಾನಿಗಳು ಮನೆಯಲ್ಲಿ ಎಲ್ಲರೊಟ್ಟಿಗೆ ಫ್ಯಾಮಿಲಿ ಜೊತೆ ಮತ್ತೊಮ್ಮೆನೋಡಬಹುದಾಗಿರುತ್ತದೆ. ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅವರ ಸಾಮ್ರಾಟ್ ಪೃಥ್ವಿರಾಜ್ ಚಿತ್ರ ಕೂಡ ಥಿಯೇಟರ್ ಅಲ್ಲಿ ರಿಲೀಸ್ ಆಗಿತ್ತು. ಆದರೆ ನಿರೀಕ್ಷೆ ತಕ್ಕ ಹಾಗೆ ಕಲೆಕ್ಷನ್ ಮಾಡದೆ ಕಮರ್ಷಿಯಲ್ ಆಗಿ ಯಶಸ್ಸು ಕಾಣಲಿಲ್ಲ. ಆದ ಕಾರಣ ಈ ಚಿತ್ರ ಕೂಡ ಜುಲೈ1ರಂದು ಅಮೇಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಿದೆ. ಅಷ್ಟೇ ಅಲ್ಲದೆ ಮುಂಬೈ ತಾಜ್ ಹೋಟೇಲ್ ದಾಳಿಯಲ್ಲಿ ವೀರ ಮರಣ ಹೊಂದಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನಾಧಾರಿತ ಮೇಜರ್ ಚಿತ್ರ ಕೂಡ ಜುಲೈ 3ರಂದು ಓಟಿಟಿ ನೆಟ್ ಫ್ಲೆಕ್ಸ್ ನಲ್ಲಿ ತೆರೆ ಕಾಣಲಿದೆ. ಒಟ್ಟಾರೆಯಾಗಿ ಈ ವಾರಾಂತ್ಯದಲ್ಲಿ ಮನೆಯಲ್ಲಿ ಕೂತು ಸಿನಿಮಾ ನೋಡ ಬಯಸುವರಿಗೆ ಫುಲ್ ಪ್ಯಾಕೇಜ್ ಅಂತಾನೇ ಹೇಳಬಹುದು.

%d bloggers like this: