ಇದೇ ವಾರ ಬಿಡುಗಡೆ ಆಗುತ್ತಿದೆ ನೆನಪಿನ ಹುಡುಗಿಯ ಹೊಸ ಚಿತ್ರ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಟಿ ಎನ್ ಸೀತಾರಾಮ್ ನಿರ್ದೇಶನದ ಧಾರಾವಾಹಿ ಮಗಳು ಜಾನಕಿ. ಒಬ್ಬ ಸೌಮ್ಯ ಸ್ವಭಾವದ ಹುಡುಗಿ 20 ವರ್ಷಗಳ ಹಿಂದೆ ತಮ್ಮನ್ನು ಬಿಟ್ಟುಹೋಗಿದ್ದ ತಂದೆಯನ್ನು ಹುಡುಕುತ್ತ ಹೋಗುವ ದಾರಿಯಲ್ಲಿ ಅವಳು ಅನುಭವಿಸುವ ಕಷ್ಟಗಳನ್ನು ಧಾರಾವಾಹಿಯಲ್ಲಿ ತುಂಬಾ ಸೊಗಸಾಗಿ ತೋರಿಸಲಾಗಿದೆ. ಹಾಗೂ ಅವಳು ಅನುಭವಿಸುವ ಕಷ್ಟಗಳಿಂದ ಅವಳು ಹೇಗೆ ಒಬ್ಬ ಇಂಡಿಪೆಂಡೆಂಟ್ ವುಮನ್ ಆಗಿ ಬೆಳೆಯುತ್ತಾಳೆ ಎಂಬುದನ್ನು ಟಿ ಎನ್ ಸೀತಾರಾಂ ಅವರು ಬಹು ಸೊಗಸಾಗಿ ತೋರಿಸಿದ್ದರು. ಮಗಳು ಜಾನಕಿ ಧಾರಾವಾಹಿಯ ಮುಖ್ಯ ಪಾತ್ರಧಾರಿ ಜಾನಕಿಯ ಪಾತ್ರವನ್ನು ನಿರ್ವಹಿಸಿದ ನಟಿಯ ಹೆಸರು ಗಾನವಿ ಲಕ್ಷ್ಮಣ್.

ಈಗ ಅದೇ ಗಾನವಿ ಲಕ್ಷ್ಮಣ್ ಅವರು ತಮ್ಮ ಸ್ವಂತ ಪ್ರತಿಭೆಯಿಂದ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಗಿರೀಶ್ ಕುಮಾರ್ ಬಿ ಅವರು ನಿರ್ದೇಶಿಸಿದ ಈ ಚಿತ್ರಕ್ಕೆ ಭಾವಚಿತ್ರ ಎಂದು ಹೆಸರಿಡಲಾಗಿದೆ. ಇದು ಟೆಕ್ನೋ ಥ್ರಿಲ್ಲರ್ ಮತ್ತು ಹವ್ಯಾಸಿ ಛಾಯಾಗ್ರಾಹಕರ ಪ್ರಯಾಣದ ಕಥೆಯನ್ನು ಆಧರಿಸಿದ ಚಲನಚಿತ್ರವಾಗಿದೆ. ಈ ಚಿತ್ರದ ಮುಖ್ಯ ಪಾತ್ರದಲ್ಲಿ ಗಾನವಿ ಲಕ್ಷ್ಮಣ್ ಅವರ ಜೊತೆಗೆ ಯಾನ ಸಿನಿಮಾದ ಚಕ್ರವರ್ತಿ ನಟಿಸುತ್ತಿದ್ದಾರೆ. ಗಾನವಿ ಲಕ್ಷ್ಮಣ್ ಅವರು ಭಾವಚಿತ್ರ ಸಿನಿಮಾದೊಂದಿಗೆ ಕನ್ನಡ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಲು ನಿರ್ಧರಿಸಿದ್ದರು.

ಆದರೆ ಇದಕ್ಕೂ ಮೊದಲು ಅವರ ಹೀರೋ ಸಿನಿಮಾ ರಿಲೀಸ್ ಆಗಿದೆ. ಅಲ್ಲದೆ ಗಾನವಿ ಅವರು ಶಿವರಾಜ್ ಕುಮಾರ್ ಅವರ ವೇದ ಸಿನಿಮಾದಲ್ಲಿ ಮಹಿಳಾ ನಾಯಕಿಯಾಗಿ ನಟಿಸಿದ್ದಾರೆ. ಭಾವಚಿತ್ರಕ್ಕೆ ಗೌತಮ್ ಶ್ರೀವತ್ಸ ಅವರು ಸಂಗೀತ ನೀಡಿದ್ದು, ಅಜಯ್ ಕುಮಾರ್ ಅವರು ಛಾಯಾಗ್ರಹಣ ನೀಡಿದ್ದಾರೆ. ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣವನ್ನು ನಡೆಸಿದ್ದು, ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಇದೇ ಫೆಬ್ರವರಿ 18ರಂದು ಭಾವಚಿತ್ರ ಸಿನಿಮಾ ರಿಲೀಸ್ ಆಗಲಿದೆ.

%d bloggers like this: