ಐಎಂಡಿಬಿ ಟಾಪ್ ಚಿತ್ರಗಳ ಪಟ್ಟಿ ಬಿಡುಗಡೆ, ನಮ್ಮ ಹೆಮ್ಮೆಯ ಕೆಜಿಎಫ್ ಚಾಪ್ಟರ್2 ಚಿತ್ರಕ್ಕೆ ಎಷ್ಟನೇ ಸ್ಥಾನ ಗೊತ್ತೇ

ಐಎಂಡಿಬಿ ಪಟ್ಟಿಯಲ್ಲಿ ಅತ್ಯಂತ ಜನಪ್ರಿಯ ಚಿತ್ರಗಳ ಪೈಕಿ ಕನ್ನಡದ ಗೋಲ್ಡನ್ ಸಿನಿಮಾ ಕೆಜಿಎಫ್ ಚಾಪ್ಟರ್2 ಸಿನಿಮಾ ಯಾವ ಸ್ಥಾನದಲ್ಲಿ ಇದೆ ಗೊತ್ತಾ! ಕನ್ನಡ ಚಿತ್ರರಂಗವನ್ನು ವಿಶ್ವದ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಕನ್ನಡದ ಗೋಲ್ಡನ್ ಸಿನಿಮಾ ಆಗಿರುವ ಕೆಜಿಎಫ್2 ಚಿತ್ರ ಹತ್ತು ಹಲವು ದಾಖಲೆಗಳನ್ನು ಮಾಡಿ ವರ್ಲ್ಡ್ ವೈಡ್ ಭಾರಿ ಜನಪ್ರಿಯ ಪಡೆದುಕೊಂಡಿತ್ತು. ಅದಲ್ಲದೆ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 1300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಧೂಳೆಬ್ಬಿಸಿತ್ತು. ಇದೀಗ ಹೊಸದೊಂದು ದಾಖಲೆಯನ್ನ ಮಾಡಿದೆ ಕವ್ನಡದ ಕೆಜಿಎಫ್2 ಸಿನಿಮಾ. ಇದರ ಜೊತೆಗೆ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರ ಕೂಡ ದೇಶಾದ್ಯಂತ ರಿಲೀಸ್ ಆಗಿ ಉತ್ತಮ ಗಳಿಕೆ ಐಎಂಡಿಬಿ ರೇಟಿಂಗ್ಸ್ ನಲ್ಲಿ ವಿಶ್ವದ ಅತ್ಯುತ್ತಮ ಚಿತ್ರ ಎಂಬ ಪಟ್ಟಿಯಲ್ಲಿ 66ನೇ ಸ್ಥಾನವನ್ನು ಪಡೆದುಕೊಂಡಿದೆ. ಇದೀಗ ಈ 2022ರ ಅರ್ಧ ವರ್ಷದಲ್ಲಿ ಅತಿ ಹೆಚ್ಚು ಜನಪ್ರಿಯ ಮತ್ತು ಟಾಪ್ ಹತ್ತು ಸಿನಿಮಾಗಳ ಪೈಕಿ ಕೆಜಿಎಫ್2 ಚಿತ್ರ ಒಳ್ಳೆಯ ರೇಟಿಂಗ್ ಪಡೆದುಕೊಂಡಿದೆ.

ಲೋಕೇಶ್ ಕನಗರಾಜ್ ಅವರ ನಿರ್ದೇಶನದಲ್ಲಿ ಮೂಡಿಬಂದ ಕಮಲ್ ಹಾಸನ್ ಅವರ ವಿಕ್ರಂ ಸಿನಿಮಾ 8.6.ರೇಟಿಂಗ್ ಪಡೆದುಕೊಂಡರೆ, ಪ್ರಶಾಂತ್ ನೀಲ್ ನಿರ್ದೇಶನದ ಕನ್ನಡದ ಕೆಜಿಎಫ್2 ಚಿತ್ರ ಐಎಂಡಿಬಿ ರ್ಯಾಂಕಿಂಗ್ ನಲ್ಲಿ 8.5 ಅಂಕಗಳನ್ನು ಪಡೆದುಕೊಂಡಿದೆ. ಇದಾದ ನಂತರದ ಸ್ಥಾನದಲ್ಲಿ ದಿ ಕಾಶ್ಮೀರ್ ಫೈಲ್ಸ್ 8.3 ಅಂಕ, ಹೃದಯಂ 8.1, ರಾಜಮೌಳಿ ಅವರ ಆರ್.ಆರ್.ಆರ್ 8.0, ಎಥರ್ಸ್ಡೇ 7.8 ಅಂಕ, ಝಂಡ್ 7.4 ಅಂಕ, ರನ್ ವೇ 37.7.2, ಆಲಿಯಾ ಭಟ್ ಅವರ ಗಂಗೂಬಾಯಿ ಕಾಠಿಯಾವಾಡಿ 7, ಸಾಮ್ರಾಟ್ ಪೃಥ್ವಿರಾಜ್ 7 ಅಂಕಗಳನ್ನು ಪಡೆದುಕೊಂಡಿವೆ. ಈ ಎಲ್ಲಾ ಸಿನಿಮಾಗಳು ಐಎಂಡಿಬಿ ರೇಟಿಂಗ್ ನಲ್ಲಿ ಉತ್ತಮ ಅಂಕ ಪಡೆದುಕೊಂಡಿದ್ಯ ಅದೇ ರೀತಿಯಾಗಿ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸಕ್ಸಸ್ ಕಂಡಿವೆ. ಇದರ ಜೊತೆಗೇ ಈ ಎಲ್ಲಾ ಚಿತ್ರಗಳು ಓಟಿಟಿ ಪ್ಲಾಟ್ ಫಾರ್ಮ್ ಗಳಾದ ಅಮೇಜಾನ್ ಪ್ರೈಮ್, ನೆಟ್ ಫ್ಲೆಕ್ಸ್, ಹಾಟ್ ಸ್ಟಾರ್ ಮತ್ತು ಜೀ಼5 ನಲ್ಲಿ ರಿಲೀಸ್ ಆಗಿವೆ. ಒಟ್ಟಾರೆಯಾಗಿ ಐಎಂಡಿಬಿ ರೇಟಿಂಗ್ ಲಿಸ್ಟ್ ನಲ್ಲಿ ಕೆಜಿಎಫ್2 ಸಿನಿಮಾ ಎರಡನೇ ಸ್ಥಾನವನ್ನು ಪಡೆದುಕೊಂಡಿರುವುದು ಸಂತಸದ ಸಂಗತಿಯಾಗಿದೆ ಎನ್ನಬಹುದು.

%d bloggers like this: